ಕರ್ನಾಟಕದ ರಾಜಕಾರಣದಲ್ಲಿ ಸಾಹಿತ್ಯ ಸಂಸ್ಕೃತಿ ಕಲೆ ಇವುಗಳ ಬಗ್ಗೆ ಆಸಕ್ತಿಯನ್ನು ಹೊಂದಿ ಸ್ವತಹ ಬರಹಗಾರರಾಗಿ ನಾಟಕಕಾರರಾಗಿ ರಾಜಕಾರಣದ ಬಿಡುವಿನ ವೇಳೆಯಲ್ಲಿ ತಮ್ಮದೇ ಆದಂತಹ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಂತಹ ಎಂಪಿ ಪ್ರಕಾಶ್ ಈ ನಾಡು ಕಂಡ ಅಪರೂಪದ ಮುತ್ಸದಿ ನಾಯಕರು
ಜುಲೈ 11 1940 ರಲ್ಲಿ ಹುಟ್ಟಿ ಫೆಬ್ರವರಿ 9 2011ರಲ್ಲಿ ತಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ತಮ್ಮ ಜೀವನದ ಪಯಣವನ್ನ ಮುಗಿಸಿದಂತಹ ಇವರು ಅನೇಕ ವಿಚಾರಗಳಿಗಾಗಿ ರಾಜ್ಯದ ರಾಜಕಾರಣ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮರೆಯಲಾಗದ ವ್ಯಕ್ತಿತ್ವವಾಗಿ ಇಂದಿಗೂ ಉಳಿದುಕೊಂಡಿದ್ದಾರೆ
ಅಪಾರವಾದಂತಹ ಪಾಂಡಿತ್ಯ ಜ್ಞಾನ ಪ್ರಪಂಚದ ಯಾವುದೇ ದೇಶದ ಹೋರಾಟದ ವಿಚಾರ ಸಾಹಿತ್ಯ ಚಳುವಳಿಗಳ ವಿಚಾರ ಎಲ್ಲವನ್ನು ಎಷ್ಟು ಹೊತ್ತು ಬೇಕಾದರೂ ಮಾತನಾಡಬಲ್ಲಂತಹ ಸಾಮರ್ಥ್ಯವನ್ನು ಹೊಂದಿದಂತಹ ಜ್ಞಾನವಂತ ಎಂಪಿ ಪ್ರಕಾಶ್ ರವರಾಗಿದ್ದರು
ಬಡವರನ್ನು ಕಂಡರೆ ಪ್ರೀತಿಯಿಂದ ಆತ್ಮೀಯತೆಯಿಂದ ಸರಳತೆಯಿಂದ ಮಾತನಾಡಿಸುತ್ತಾ ಗ್ರಾಮೀಣ ಭಾಷೆಯಲ್ಲಿ ಅವರೊಂದಿಗೆ ಸಂವಾದವನ್ನು ಮಾಡುತ್ತಾ ಇದ್ದಂತಹ ಎಂಪಿ ಪ್ರಕಾಶ್ ವಿಚಾರ ಸಂಕೀರ್ಣಗಳು ಸಭೆಗಳು ಮತ್ತು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವೇದಿಕೆಗಳ ಮೇಲೆ ನಿಂತರೆ ಇವರ ಭಾಷಣವನ್ನು ಕೇಳುವುದು ಒಂದು ಅಪಾರವಾದ ಅನುಭವವಾಗುತ್ತಿತ್ತು ಇವರ ಭಾಷಣದ ನಡುವೆ ಹತ್ತಾರು ಪುಸ್ತಕಗಳು ಓದಿದ ಅನುಭವ ಕೇಳುವ ಪ್ರೇಕ್ಷಕರಿಗಾಗುತ್ತಿತ್ತು ಆಗ ಅಚ್ಚರಿಯಾಗುತ್ತಿತ್ತು ಒಬ್ಬ ಮನುಷ್ಯ ಸಾಮಾನ್ಯರೊಂದಿಗೂ ಸಾಮಾನ್ಯರಂತೆ ಬೆಳೆಯುತ್ತಾ ಜ್ಞಾನಿಗಳೊಂದಿಗೆ ಪಾಂಡಿತ್ಯಪೂರ್ಣವಾಗಿ ಮಾತನಾಡಬಲ್ಲಂತಹ ಶಕ್ತಿಯನ್ನು ಮನಸ್ಸನ್ನ ಹೊಂದಿದ್ದ ಇವರ ವ್ಯಕ್ತಿತ್ವವೇ ರಾಜಕಾರಣಿಗಳಿಗೆ ಮಾದರಿ
ಎಂಪಿ ಪ್ರಕಾಶ್ ಎಂದರೆ ರಾಜಕೀಯ ವಲಯದಲ್ಲಿ ಒಬ್ಬ ಅದ್ಭುತವಾದ ಮಾತುಗಾರ ಒಬ್ಬ ಸರಳ ಸಜ್ಜನಿಕೆಯ ಮಾನವೀಯತೆಯ ನೆಲೆಯಲ್ಲಿ ಎಲ್ಲರನ್ನೂ ಜೊತೆಯಲ್ಲಿ ತೆಗೆದು ಕೊಂಡು ಹೋಗಬಲ್ಲ ಸಾಮರ್ಥ್ಯವಿದ್ದ ನಾಯಕರೆಂಬ ಮಾತು ಇಂದಿಗೂ ಕೇಳಿ ಬರುತ್ತಿದೆ
1983 ರಲ್ಲಿ ಶ್ರೀರಾಮಕೃಷ್ಣ ಹೆಗಡೆಯವರ ಮಂತ್ರಿಮಂಡಲದಲ್ಲಿ ಸಚಿವರಾಗಿ ತದನಂತರ ಶ್ರೀ ಎಚ್ ಡಿ ದೇವೇಗೌಡರು ಮತ್ತು ಜಿಎಚ್ ಪಟೇಲ್ರವರ ಮಂತ್ರಿ ಮಂಡಲದಲ್ಲಿ ಹಾಗೂ ಧರ್ಮಸಿಂಗ್ ರವರ ಮಂತ್ರಿಮಂಡಲದಲ್ಲೂ ಸಚಿವರಾಗಿ ದುಡಿದಂತಹ ಇವರು ಸಾರಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ವಿಶೇಷವಾಗಿ ಕನ್ನಡ ಮತ್ತು ಸಂಸ್ಕೃತಿ ವಾರ್ತಾ ಇಲಾಖೆಯ ಸಚಿವರಾಗಿ ದುಡಿದಿರುತ್ತಾರೆ
ಸಾಂಸ್ಕೃತಿಕ ಲೋಕದ ಜನರು ಇಂದಿಗೂ ಕರ್ನಾಟಕ ರಾಜ್ಯದಲ್ಲಿ ನಿಜವಾಗಿಯೂ ಕನ್ನಡ ಮತ್ತು ಸಂಸ್ಕೃತಿ ಖಾತೆಗೆ ಸೂಕ್ತವಾದಂತಹ ಮಂತ್ರಿ ಯಾರಾದರೂ ಇದ್ದಿದ್ದರೆ ಅದು ಎಂಪಿ ಪ್ರಕಾಶ್ ಎಂಬ ಮಾತು ಈಗಲೂ ಉಳಿದಿರುತ್ತದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೊಸ ಆಯಾಮವನ್ನು ಕೊಟ್ಟವರು ಅಕಾಡೆಮಿಗಳಿಗೆ ಗಣತಿಯನ್ನು ಹೆಚ್ಚಿಸಿದವರು ಹಂಪಿ ಉತ್ಸವದ ರೂವಾರಿ ಕನ್ನಡ ವಿಶ್ವವಿದ್ಯಾನಿಲಯದ ಸ್ಥಾಪನೆಯ ಪೂರಕ ಶಕ್ತಿ ಎಂ ಪಿ ಪ್ರಕಾಶ್ ಎಂಬುದು ಯಾರು ಮರೆಯುವಂತಿಲ್ಲ
ಒಂದೇ ದಿನ ಸದನದಲ್ಲಿ 13 ಖಾತೆಗಳಿಗೆ ಮಂತ್ರಿಗಳ ಪರವಾಗಿ ಉತ್ತರವನ್ನು ನೀಡಿದ ದಾಖಲೆ ಇಂದಿಗೂ ಇವಳದಾಗಿರುತ್ತದೆ ಸದನದಲ್ಲಿ ಎಂಪಿ ಪ್ರಕಾಶ್ ಮಾತನಾಡುತ್ತಾರೆ ಎಂದರೆ ಎಲ್ಲ ಪಕ್ಷದ ಸದಸ್ಯರು ಉಪನ್ಯಾಸವನ್ನು ಕೇಳುವ ರೀತಿಯಲ್ಲಿ ಆಸಕ್ತಿಯಿಂದ ಕೇಳುತ್ತಿದ್ದರು ಇವರ ಮಾತಿನಲ್ಲಿ ವೈರತ್ವ ಇರುತ್ತೀರಲಿಲ್ಲ ದ್ವೇಷಕ್ಕೆ ಅವಕಾಶವಿರಲಿಲ್ಲ ವಿಚಾರಗಳು ತುಂಬಿರುತ್ತಿತ್ತು ಸಲಹೆಗಳು ಅಲ್ಲಿರುತ್ತಿತ್ತು ನೂತನ ಸದಸ್ಯರಿಗೆ ಸಂಸದೀಯ ಪಟುವಾಗಲು ವಿಶ್ವವಿದ್ಯಾನಿಲಯವೆಂದರೆ ತರಬೇತಿಯ ಅನುಭವವಾಗುತ್ತಿತ್ತು
ಇಂದು ರಾಜಕಾರಣದಲ್ಲಿ ಸಾಹಿತ್ಯ ಸಂಸ್ಕೃತಿ ವಿಚಾರದ ಆಸಕ್ತಿಯು ಬಹಳಷ್ಟು ಮಂದಿಯಲ್ಲಿ ಉಳಿದಿಲ್ಲ ಇನ್ನು ಸಾಹಿತ್ಯ ಮತ್ತು ಸಾಹಿತಿಗಳ ಪರಿಚಯವೇ ಇಲ್ಲ ಜ್ಞಾನವಂತರು ಪಾಂಡಿತ್ಯಪೂರ್ಣರು ಸೌಜನ್ಯದ ನಡವಳಿಕೆಯ ಸಜ್ಜನಿಕೆಯ ವ್ಯಕ್ತಿತ್ವಗಳು ಅಪರೂಪವಾಗುತ್ತಿದೆ ಕೆಲವೇ ವರ್ಷಗಳಲ್ಲಿ ಇರುವ ಕೆಲವು ವ್ಯಕ್ತಿಗಳು ರಾಜಕಾರಣದಿಂದ ದೂರ ಸರಿದರೆ ರಾಜಕಾರಣ ಕೇವಲ ಹಣವಂತರ ಉಳ್ಳವರ ದೇಹ ಬಲ ಉಳ್ಳವರ ಸಂಸ್ಕೃತಿಯ ತವರಾಗಿ ಉಳಿಯುತ್ತದೆ
ಇವರ ಕಾಲದಲ್ಲಿ ಮತ್ತು ಡಾಕ್ಟರ್ ಜೀವರಾಜ್ ಆಳ್ವಾರ್ ಅವರ ಅವಧಿಯಲ್ಲಿ ರಾಮಕೃಷ್ಣ ಹೆಗಡೆ ಜಿ ಎಚ್ ಪಟೇಲ್ ಎಸ್ಎಂ ಕೃಷ್ಣ ಮುಂತಾದವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನಾಡಿನಲ್ಲಿ ಕಲಾವಿದರು ಅಥವಾ ಸಾಹಿತಿಗಳು ಇಲ್ಲವೇ ಪತ್ರಕರ್ತರು ಸಂಕಷ್ಟದಲ್ಲಿದ್ದ ಸಮಯದಲ್ಲಿ ಅವರನ್ನು ಭೇಟಿ ಮಾಡಿ ಅವರ ಯೋಗ ಕ್ಷೇಮವನ್ನು ವಿಚಾರಿಸುತ್ತ ಸರ್ಕಾರದ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಇಂತಹ ಒಂದು ವಾತಾವರಣ ಕಾಣುವುದು ಸಾಧ್ಯವೇ ಇಲ್ಲ
– ಕೆ ಎಸ್ ನಾಗರಾಜ್, ಬೆಂಗಳೂರು




