ನವೆಂಬರ್ 15 ರಂದು ವಿಶ್ವ ಮಧುಮೇಹ ದಿನಾಚರಣೆ

2 years ago

#November15 #WorldDiabetesDay

ನ.15 ರಂದು ಉಚಿತ ತಪಾಸಣೆ

ನ.16 ರಂದು ಜನಜಾಗೃತಿಗಾಗಿ ವಾಕಥಾನ್

ಧಾರವಾಡ: ನವೆಂಬರ್ 15 ರಂದು ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಮಧುಮೇಹ ಆರೈಕೆಗೆ ಅವಕಾಶ ನಿಮ್ಮ ಅಪಾಯವನ್ನು, ನಿಮ್ಮ ಜವಾಬ್ದಾರಿಯನ್ನು ತಿಳಿಯಿರಿ ಎಂಬ ಘೋಷ ವಾಕ್ಯದಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್.ಸಿ.ಡಿ ಘಟಕ, ಜಿಲ್ಲಾ ಎನ್.ಸಿ.ಡಿ ಕ್ಲಿನಿಕ್, ಜಿಲ್ಲಾ ಆಸ್ಪತ್ರೆ, ಧಾರವಾಡ ಹಾಗೂ ಎನ್.ಸಿ.ಡಿ ಕ್ಲಿನಿಕ್, ತಾಲೂಕಾ ಆಸ್ಪತ್ರೆ, ಕಲಘಟಗಿ, ಕುಂದಗೋಳ, ನವಲಗುಂದ ವತಿಯಿಂದ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ (NP-NCD) ಅಡಿಯಲ್ಲಿ ಆಚರಿಸಲಾಗುತ್ತಿದೆ.

ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ 30 ವರ್ಷ ಮೇಲ್ಪಟ್ಟವರಿಗೆ ಉಚಿತ ಮಧುಮೇಹ, ರಕ್ತದೊತ್ತಡ ಮತ್ತು ಸಾಮಾನ್ಯ ಕ್ಯಾನ್ಸರ್ ತಪಾಸಣೆಯನ್ನು ಜಿಲ್ಲಾ ಆಸ್ಪತ್ರೆ ಧಾರವಾಡ ಹಾಗೂ ತಾಲೂಕಾ ಆಸ್ಪತ್ರೆ ಕಲಘಟಗಿ, ಕುಂದಗೋಳ, ನವಲಗುಂದದಲ್ಲಿ ಹಮ್ಮಿಕೊಳ್ಳಲಾಗಿದೆ.

ನ. 16 ರಂದು ವಾಕ್ಥಾ ನ್ ಆಯೋಜನೆ: ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್.ಸಿ.ಡಿ ಘಟಕ, ಐ.ಎಮ್.ಎ ಮತ್ತು ರೋಟರಿ ಕ್ಲಬ್ ಮಿಡ್ ಟೌನ್, ಧಾರವಾಡ ಇವರ ಸಹಯೋಗದೊಂದಿಗೆ ನವೆಂಬರ್ 16, 2023 ರಂದು ಬೆಳಿಗ್ಗೆ 9-30 ಗಂಟೆಗೆ ಮಧುಮೇಹ ಕುರಿತು ಜಾಗೃತಿ ಮೂಡಿಸುವ Walkathon ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವಾಕ್ಥಾ ನ್ (Walkathon) ಜಾಗೃತಿ ಕಾರ್ಯಕ್ರಮವು ಕಲಾ ಭವನದಿಂದ ಆರಂಭಗೊಂಡು ಅಂಜುಮನ್ ಸರ್ಕಲ್ದಿಂರದ ಹಳೇ ಬಸ್ಟ್ಯಾಂಡ್ ಎದುರುಗಡೆಯಿಂದ ಮುಂದುವರೆದು ಸುಭಾಶ ರೋಡ ಮಾರ್ಗವಾಗಿ ಕೆ.ಸಿ.ಸಿ ಬ್ಯಾಂಕ್ ಸರ್ಕಲ್ ಸುತ್ತುವರೆದು ಮರಳಿ ಸುಭಾಶ ರೋಡ ಮಾರ್ಗವಾಗಿ ವಿವೇಕಾನಂದ ಸರ್ಕಲ್ ಸುತ್ತುವರೆದು ಹಳೇ ಬಸ್ಟ್ಯಾಂಡ್ ಮುಂಭಾಗವಾಗಿ ಆಜಾದ ಪಾರ್ಕ್ ಮಾರ್ಗವಾಗಿ ಜುಬಿಲಿ ಸರ್ಕಲ್ ಮುಖಾಂತರ ಕಲಾ ಭವನದಲ್ಲಿ ಮುಕ್ತಾಯಗೊಳ್ಳುವುದು.

Leave a Reply