ಶಿವಮೊಗ್ಗ: ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗಳನ್ನು ಫಲಾನುಭವಿಗಳಿಗೆ ಆಧಾರ್ ಆಧಾರಿತ ನೇರ ಹಣ ಸಂದಾಯ (ಡಿಬಿಟಿ) ಯೋಜನೆ ಮೂಲಕ ಪಾವತಿಸಲು ಕಡ್ಡಾಯವಾಗಿ ಫಲಾನುಭವಿಗಳ ಬ್ಯಾಂಕ್/ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಎನ್ಪಿ ಸಿಐ ಲಿಂಕ್ ಮಾಡಬೇಕಾಗಿರುತ್ತದೆ.
ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗಳಾದ ವೃದ್ಧಾಪ್ಯ ಯೋಜನೆ, ವಿಧವಾ ಯೋಜನೆ, ಅಂಗವಿಕಲ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಯೋಜನೆ, ಮೈತ್ರಿ ಯೋಜನೆಗಳ ಮಾಸಿಕ ಪಿಂಚಣಿಯನ್ನು ಡಿಬಿಟಿ ಮೂಲಕ ಪಾವತಿಸಲು ಸರ್ಕಾರ ನಿರ್ಧರಿಸಿರುತ್ತದೆ. ಪ್ರಯುಕ್ತ ಬ್ಯಾಂಕ್/ಅಂಚೆ ಖಾತೆಗೆ ಎನ್ಪಿಡಸಿಐ ಲಿಂಕ್ ಆಗದ ಫಲಾನುಭವಿಗಳ ಪಟ್ಟಿಯು ಆಧಾರ್ ಗ್ರಾಮ ಆಡಳಿತಾಧಿಕಾರಿ(ವಿಎ) ಕಚೇರಿಯಲ್ಲಿರುತ್ತದೆ. ಫಲಾನುಭವಿಗಳು ವಿಎ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದಾಗಿದೆ.
ಒಂದು ವೇಳೆ ನಿಮ್ಮೆ ಖಾತೆಯು ಎನ್ಪಿಲಸಿಐ ಲಿಂಕ್ ಆಗದಿದ್ದಲ್ಲಿ ಕೂಡಲೇ ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಪಾಸ್ ಪುಸ್ತಕದೊಂದಿಗೆ ಸಂಬಂಧಿಸಿದ ಬ್ಯಾಂಕ್/ಅಂಚೆ ಇಲಾಖೆಗೆ ನವೆಂಬರ್ ತಿಂಗಳ ಅಂತ್ಯದೊಳಗೆ ಭೇಟಿ ನೀಡಿ ಎನ್ಪಿ ಸಿಐ ಮ್ಯಾಪಿಂಗ್ ಮಾಡಿಸಲು ಕ್ರಮ ವಹಿಸುವಂತೆ ತಿಳಿಸಿದೆ. ನವೆಂಬರ್ ಅಂತ್ಯದೊಳಗೆ ಎನ್ಪಿನಸಿಐ ಲಿಂಕ್ ಮಾಡದಿದ್ದಲ್ಲಿ ಪಿಂಚಣಿಯನ್ನು ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದ್ದಾರೆ.




