ಲೊಯೋಲ ಕಾಲೇಜಿನಲ್ಲಿ ಪದವಿ ಪ್ರಧಾನ ಸಮಾರಂಭ

2 years ago

#Convocation #Graduation #ceremony #LoyolaCollege

ಬೆಂಗಳೂರು: ಬೆಂಗಳೂರಿನ ಲೊಯೋಲ ಪದವಿ ಕಾಲೇಜಿನಲ್ಲಿ ದಿನಾಂಕ 11.11.2023 ರಂದು ಶನಿವಾರ 2023 ನೇ ಪದವಿ ಪ್ರಧಾನ ಸಮಾರಂಭ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಾಡೋಜ ಡಾ. ವೂಡೆ ಪಿ ಕೃಷ್ಣ ಪಾಲ್ಗೊಳ್ಳಲಿದ್ದಾರೆ. ಉಪಸ್ಥಿತಿಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲ ಸಚಿವ ಡಾ.ಶ್ರೀನಿವಾಸ್ ಚೌಡಪ್ಪ ವಹಿಸಲಿದ್ದಾರೆ.  ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯಸ್ಥ ವಂ.ಫಾ.ಅಂತೋನಿ ಜೋಸೆಫ್ ಯೇ.ಸ. ವಹಿಸಲಿದ್ದಾರೆ. ಆಯೋಜನೆ ಜವಾಬ್ದಾರಿಯನ್ನು ಪ್ರಾಚಾರ್ಯರಾದ ಡಾ.ಫಾ.ಅಲ್ಫೋನ್ಸ್ ಯೇ.ಸ., ಮತ್ತು ಕಲಾ ವಿಭಾಗದ ಡೀನ್ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ ಅವರು ವಹಿಸಿಕೊಂಡಿದ್ದಾರೆ.

ಕೊರೋನ ಲಾಕ್ ಡೌನ್ ಸಮಯದಲ್ಲಿ ನೂರಕ್ಕೂ ಹೆಚ್ಚು ವೆಬಿನಾರ್ ಗಳನ್ನು ಮಾಡಿ ನಾಡಿನ ಮೆಚ್ಚುಗೆಯನ್ನು ಗಳಿಸಿದ್ದ ಲೊಯೋಲ ಕಾಲೇಜು ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದೆ.

Leave a Reply