ಸುಲೋಚನ ಅವರ ನೇತ್ರದಾನ ಮಾಡಿದ ಕುಟುಂಬ

2 years ago

#Sulochana #eye #donation #family

ಬೆಂಗಳೂರು: ಆನೇಕಲ್ಲಿನ ಸಂಜನಾ ಆಪ್ಟಿಕಲ್ಸ್ ರಾಜು ಅವರ ಅತ್ತೆ ಸುಲೋಚನ ವಯಸ್ಸು 60ವರ್ಷ ಹನುಂತನಗರದಲ್ಲಿ ಮೃತಪಟ್ಟಿದ್ದು ಅವರ ಕಣ್ಣುಗಳನ್ನು ಡಾ.ರಾಜಕುಮಾರ್ ನೇತ್ರನಿಧಿ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದೆ.

ಮೃತರ ಮಕ್ಕಳಾದ ವೀಣಾ, ಸಂಧ್ಯಾ, ಅಶ್ವಿನಿ ಮಾತನಾಡಿ, ನಮ್ಮ ತಾಯಿಯ ನೇತ್ರದಾನ ಮಾಡುತ್ತಿರುವುದು ನಮಗೆ ಹೆಮ್ಮೆ ಮತ್ತು ಗೌರವತಂದಿದೆ. ನಮ್ಮ ಅಮ್ಮನ ಕಣ್ಣುಗಳು ಇನ್ನಿಬ್ಬರ ಮನೆಯಲ್ಲಿ ಬೆಳಗಲಿ ಎಂದು ಹೇಳಿದ್ದು, ನಮಗೆ ಡಾ.ಪುನೀತ್ ರಾಜಕುಮಾರ್ ಸ್ಪೂರ್ತಿಯಾಗಿದ್ದಾರೆ. ನೇತ್ರದಾನ ನಮ್ಮೆಲ್ಲರ ಕುಟುಂಬಗಳ ಸಂಪ್ರದಾಯವಾಗಿಸಿದ್ದೇವೆ ಎಂದರು.

ಮೃತರ ಕಣ್ಣುಗಳನ್ನು ಹೊಸಬೆಳಕು ಟ್ರಸ್ಟ್ನ ಮುಖಾಂತರ ನಾರಾಯಣ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ದಾನ ಮಾಡಿಸಿದ್ದು, ಈ ಹಿಂದೆಯೂ ಸಹ 3 ಜನರ ಕಣ್ಣುಗಳನ್ನು ಸಂಜನಾ ರಾಜು ಅವರು ದಾನಮಾಡಿಸಿ ಮಾನವೀಯತೆ ಮೆರೆದು ಮಾದರಿಯಾಗಿದ್ದಾರೆ.

ಸಾವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಅಂಧರಿಗೆ ಹೊಸಬೆಳಕು ನೀಡಬೇಕೆಂದು ಜಿಗಣಿ ರಾಮಕೃಷ್ಣ ಮನವಿ ಮಾಡಿದ್ದಾರೆ.

ನೇತ್ರದಾನದ ಸಮಯ ಬಂದಾಗ ಹತ್ತಿರದ ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) ಅಥವಾ ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್ 9945028899 ಸಂಪರ್ಕಿಸಬಹುದಾಗಿದೆ.

Leave a Reply