ವಿಶ್ವ ದೃಷ್ಟಿದಿನದಂದು ಬನ್ನೇರುಘಟ್ಟದ ಭೀಮ್ ಸಿಂಗ್ ಅವರ ನೇತ್ರದಾನ

3 years ago

#Eyedonation#BhimSingh #Bannerghatta

ಬೆಂಗಳೂರು: ಬನ್ನೇರುಘಟ್ಟದ ಶ್ರೀ ಸಾಯಿ ಸದ್ಭಾವನ ಶಾಲೆಯ ಸಂಸ್ಥಪಕ ಭೀಮ್ ಸಿಂಗ್ (85) ವಯೋಸಹಜ ಖಾಯಿಲೆಯಿಂದ ಆಸ್ಪತ್ರೆಯ ಮೃತಪಟ್ಟಿದ್ದು, ಮೃತರ ಕಣ್ಣುಗಳನ್ನು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ.

ಮೃತರ ತಮ್ಮ ಪ್ರತಾಪ್ ಸಿಂಗ್ ಕಂಬನಿ ಮಿಡಿಯುತ್ತಾ, ನನ್ನ ಅಣ್ಣನವರ ನೇತ್ರದಾನ ಮಾಡಿರುವುದು ನಮ್ಮ ಕುಟುಂಬದ ಹೆಮ್ಮೆ ಮತ್ತು ಸಂತಸ ತಂದಿದೆ. ನನ್ನ ಅಣ್ಣನ ಕಣ್ಣುಗಳು ನಾಳೆ ಯಾರದೋ ಇಬ್ಬರು ಅಂಧರ ಮನೆಯಲ್ಲಿ ಬೆಳಗುತ್ತವೆ ಎನ್ನುವ ಸಂತಸ ನಮಗಿದೆ. ಕೊರೋನಾಗಿಂತ ಮುಂಚೆ ನನ್ನ ಪತ್ನಿ ಮೀನಾ ಭಾಯಿ ತೀರಿಕೊಂಡಾಗ ಅವರ ಕಣ್ಣುಗಳನ್ನೂ ದಾನಮಾಡಿದ್ದು ನಮ್ಮದು ಹೆಮ್ಮೆಯ ನೇತ್ರದಾನಿಗಳ ಕುಟುಂಬ ಎಂದರು.

ಮೃತರ ಮಗ ಅನಂತ ಸಿಂಗ್ ಮಾತನಾಡಿ, ನೇತ್ರದಾನಿ ಪುನೀತ್ ರಾಜಕುಮಾರ್ ನಮಗೆ ಮಾದರಿ. ಅವರು ಇಂದು ನಾಲ್ಕು ಜನ ಅಂಧರಿಗೆ ಬೆಳಕು ನೀಡಿ ಅಮರರಾಗಿದ್ದಾರೆ. ನಾವು ಕಳೆದುಕೊಂಡಿದ್ದು ನಮ್ಮ ತಂದೆ ಒಬ್ಬರನ್ನು. ಆದರೆ ಅವರ ಕಣ್ಣುಗಳು ನಾಲ್ಕು.ಜನರಲ್ಲಿ ಬದುಕಿರುತ್ತವೆ ಎಂದರು.

ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಅಂಧರಿಗೆ ಹೊಸಬೆಳಕು ನೀಡಬೇಕೆಂದು ಅನಂತ ಸಿಂಗ್ ಮನವಿ ಮಾಡಿದರು.

ಬಾಬು ಸಿಂಗ್, ಮುನಿರಾಜು, ಹೊಸಬೆಳಕು ಟ್ರಸ್ಟಿನ ಜಿಗಣಿ ರಾಮಕೃಷ್ಣ, ನಾರಾಯಣ ನೇತ್ರಾಲಯದ ವೈದ್ಯರು ಮತ್ತು ಕುಟುಂಬಸ್ತರು ಹಾಜರಿದ್ದರು.

ನೇತ್ರದಾನ – ಅಂಗಾಂಗದಾನ – ದೇಹದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದಾಗಿದೆ.

ನೇತ್ರದಾನ – ಅಂಗಾಂಗದಾನ – ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ.

Leave a Reply