ಬೆಂಗಳೂರು: ಪತ್ರಕರ್ತ ಮಾಲತೇಶ್ ಅರಸ್ ಚೊಚ್ಚಲ ನಿರ್ದೇಶನದ ಸಲ್ಯೂಟ್ ವಾರಿಯರ್ಸ್ ಆಲ್ಬಂ ಸಾಂಗ್ ಅನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಸಿಎಂ ಗೃಹ ಕಚೇರಿ ಕಾವೇರಿಯಲ್ಲಿ ಬಿಡುಡೆ ಮಾಡಿದರು. ಕೊರೋನಾ ಸಂದರ್ಭದಲ್ಲಿ ಜನರಿಗಾಗಿ ಹೋರಾಟ ಮಾಡಿದ ಚಿತ್ರದುರ್ಗದ ರಿಯಲ್ ವಾರಿಯರ್ಸ್‌ಗಳನ್ನೇ ಬಳಸಿಕೊಂಡು ಚಿತ್ರೀಕರಿಸಲಾಗಿದೆ.
ಹಾಡನ್ನು ವೀಕ್ಷಿಸಿದ ಯಡಿಯೂರಪ್ಪ, ವಾರಿಯರ್ಸ್‌ಗಳ ಕಾಯಕ ಸೇವೆಯನ್ನು ಮತ್ತು ಅವರನ್ನು ಬಳಸಿಕೊಂಡು ಸಾಂಗ್ ಮಾಡಿರುವ ಕ್ರಿಯಾಶೀಲತೆಯನ್ನು ಶ್ಲಾಘಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಸಾಂಗ್ ನಿರ್ದೇಶಕ ಮತ್ತು ಕ್ರಿಯೇಟಿವ್ ಹೆಡ್ ಮಾಲತೇಶ್ ಅರಸ್, ಸಾಹಿತಿ ಮತ್ತು ನಿರ್ದೇಶಕ ದೇವರತ್ನ ಮಂಜು ಮತ್ತಿರರು ಇದ್ದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ನಂದಿನಿದೇವಿ ಮಾರ್ಗದರ್ಶನದಲ್ಲಿ ಕೋವಿಡ್ ಸಂದರ್ಭದಲ್ಲಿ ಸಂಪೂರ್ಣ ಚಿತ್ರೀಕರಣ ಮಾಡಲಾಗಿತ್ತು. ಶೀಘ್ರದಲ್ಲಿಯೇ ಈ ಆಲ್ಬಂ ಸಾಂಗ್ ಚಿತ್ರದುರ್ಗದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.



