ಬೆಂಗಳೂರು: ರಾಜಾಜಿನಗರದ ಶಿವನಗರದಲ್ಲಿ ಸಿದ್ದಗಂಗಾ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯಿತ ಬಳಗ ಮತ್ತು ವಿಶ್ವ ವೀರಶೈವ ಯುವ ವೇದಿಕೆ ವತಿಯಿಂದ ಪ್ರಸ್ತುತ ಕರ್ನಾಟ ರಾಜ್ಯ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ದೊರಕಿಸಿಕೊಡಬೇಕೆಂದು ಅಗ್ರಹಿಸಿ ಸಭೆ ನಡೆಯಿತು. ಕ್ರಾಂತಿಯೋಗಿ ಶ್ರೀ ಬಸವೇಶ್ವರರ ಬಾವಚಿತ್ರಕ್ಕೆ ಪುಷ್ಪನಮನಸಲ್ಲಿಸಿ, ಸಭೆಗೆ ಚಾಲನೆ ನೀಡಲಾಯಿತು
ಕರ್ನಾಟಕ ರಾಜ್ಯದಲ್ಲಿ ವೀರಶೈವ ಲಿಂಗಾಯಿತ ಜನಸಂಖ್ಯೆ 1ಕೋಟಿ 50 ಲಕ್ಷ ಜನ ಇದ್ದಾರೆ. ನಮ್ಮಲ್ಲಿ ಭೇದಬಾವವಿಲ್ಲ. ವೀರಶೈವ ಲಿಂಗಾಯಿತರಿಗೆ ರಾಜಕೀಯವಾಗಿ, ಸಾಮಾಜಿಕವಾಗಿ ಅನ್ಯಾಯವಾದಾಗ ನಾವು ಸುಮ್ಮನೆ ಇರಲು, ಕೂರಲು ಬರುವುದಿಲ್ಲ ಎಂದರು.
ಬೆಂಗಳೂರು ನಗರ 28 ವಿಧಾನಸಭಾ ಕ್ಷೇತ್ರದಲ್ಲಿ 25 ಲಕ್ಷಕ್ಕೂ ಹೆಚ್ಚು ಜನರು ವೀರಶೈವ ಲಿಂಗಾಯಿತರು ವಾಸವಿದ್ದಾರೆ. ನಮ್ಮ ಸಮುದಾಯ ಟಿಕೇಟು ಕೇಳಿದರೆ ನಾನಾ ಕಾರಣ ಹೇಳಿ ಟಿಕೇಟು ತಪ್ಪುವುಂತೆ ಮಾಡುತ್ತಾರೆ. 1956ರಿಂದ ಇದುವರಗೆ ಬೆಂಗಳೂರು ನಗರದಲ್ಲಿ ವಿಧಾನಸಭಾ ಚುನಾವಣೆಗೆ ವೀರಶೈವ ಲಿಂಗಾಯಿತರಿಗೆ ಟಿಕೇಟು ನೀಡಿಲ್ಲ. ಅದು ಎಲ್ಲ ಪಕ್ಷದವರಿಗೆ ಆನ್ವಯವಾಗುತ್ತದೆ ಎಂದರು.
ನಮ್ಮ ಸಮುದಾಯ ಶಿಕ್ಷಣ, ಅನ್ನದಾಸೋಹದಲ್ಲಿ ಮಹತ್ವವಾದ ಕ್ರಾಂತಿ ತಂದು ಎಲ್ಲ ಸಮಾಜವನ್ನು ಮುನ್ನಡೆಸಿಕೊಂಡು ಹೋಗುತ್ತಿದೆ. ಈ ಬಾರಿ ವೀರಶೈವ ಲಿಂಗಾಯಿತ ಸಮುದಾಯಕ್ಕೆ ನಾಲ್ಕು ಪ್ರಮುಖ ವಿಧಾನಸಭಾ ಕ್ಷೇತ್ರಗಳಾದ ರಾಜಾಜಿನಗರ, ಗೋವಿಂದರಾಜನಗರ ಮತ್ತು ವಿಜಯನಗರ ಮತ್ತು ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ರೀತಿಯಲ್ಲಿ ನಮ್ಮ ಬೇಡಿಕೆಗಳು ಈಡೇರದಿದ್ದರೆ ಚುನಾವಣೆಯಲ್ಲಿ ನಮ್ಮ ಸಮುದಾದ ಒಗ್ಗಟ್ಟಾಗಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಎಲ್ಲ ಮುಖಂಡರು ತೀರ್ಮಾನ ಮಾಡಿದರು.
ಸಮಾಜದ ಮುಖಂಡರಾದ ಗುರುಸ್ವಾಮಿ, ವಿಶ್ವನಾಥ, ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ಮಹಂತೇಶ್ ಪಾಟೀಲ್, ಶೋಭಾ, ಪ್ರಶಾಂತ್ ಕಲ್ಲೂರು, ಮಹಾಲಿಂಗಪ್ಪ, ಸಾಹಿತಿ ಮಹದೇವಪ್ಪ ಚಿಕ್ಕಹೆಜ್ಜಾಜಿ, ರಾಹುಲ್ ಮಲ್ಲಿಕಾರ್ಜುನ್, ಡಾ.ನಾಗರಾಜ್ ಮೊದಲಾದವರು ಭಾಗವಹಿಸಿದ್ದರು.




