ಅಕ್ಟೋಬರ್ 21 ರಿಂದ ಆರಂಭ: ಗಂಗಾಧರಸ್ವಾಮಿ ಜಿ.ಎಂ.
ದಾವಣಗೆರೆ: ಜಿಲ್ಲೆಯಲ್ಲಿನ ಜಾನುವಾರುಗಳಿಗೆ ಕಾಲುಬಾಯಿ ರೋಗ ತಡೆಗಾಗಿ 6 ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಅಕ್ಟೋಬರ್ 21 ರಿಂದ ನೆವಂಬರ್ 20 ರವರೆಗೆ ಸತತವಾಗಿ ಒಂದು ತಿಂಗಳ ಕಾಲ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರದಡಿ 6 ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 20 ನೇ ಜಾನುವಾರು ಗಣತಿಯಂತೆ 329697 ದನ ಮತ್ತು ಎಮ್ಮೆಗಳಿದ್ದು ಇವುಗಳಿಗೆ ಶೇ 100 ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಕೇಂದ್ರ ಸರ್ಕಾರದಿಂದ 2,60,700 ಡೋಸ್ ಕಾಲು ಬಾಯಿ ರೋಗ ಲಸಿಕೆ ಸರಬರಾಜಾಗಿದ್ದು ಅಷ್ಟೇ ಪ್ರಮಾಣದ ಸಿರಿಂಜ್ ಸಹ ಸರಬರಾಜಾಗಿದೆ ಎಂದರು.
ಜಾನುವಾರುಗಳಿಗೆ ಲಸಿಕೆ ಹಾಕಲು ಒಂದು ಬ್ಲಾಕ್‍ಗೆ 100-120 ಜಾನುವಾರುಗಳಂತೆ 2800 ಬ್ಲಾಕ್ ಗಳನ್ನು ರಚಿಸಿದ್ದು 321 ಲಸಿಕಾದಾರರಿಗೆ ಬ್ಲಾಕ್‍ವಾರು ಲಸಿಕಾ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಹಾಗೂ ಲಸಿಕಾ ಸಂದರ್ಭದಲ್ಲಿ ಆಕಸ್ಮಿಕ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಅವಶ್ಯಕ ಔಷಧಿಗಳನ್ನು ಕೂಡಾ ಸಂಗ್ರಹಿಸಿಡಲಾಗಿದೆ. 4 ತಿಂಗಳ ಮೇಲಿನ ಎಲ್ಲಾ ಜಾನುವಾರುಗಳಿಗೆ ಮನೆಬಾಗಿಲಲ್ಲೆ ಲಸಿಕೆ ಹಾಕಲಾಗುತ್ತದೆ. ಮತ್ತು ಕರುಗಳಿಗೆ 28 ದಿನಗಳ ನಂತರ ಬೂಸ್ಟರ್ ಲಸಿಕೆ ಹಾಕಲಾಗುತ್ತದೆ. ಗರ್ಭ ಇರುವ, ರೋಗಗ್ರಸ್ತ ಮತ್ತು ಮಾಲೀಕರು ನಿರಾಕರಿಸಿದ ಜಾನುವಾರುಗಳಿಗೆ ಕೂಂಬಿಂಗ್ ಕಾರ್ಯಕ್ರಮದಲ್ಲಿ ಲಸಿಕೆ ಹಾಕಲಾಗುವುದು ಎಂದರು.
ದಾವಣಗೆರೆ ಜಿಲ್ಲೆಯ ಜಾನುವಾರು ಸಂಖ್ಯೆ: ದನಗಳು 237801, ಎಮ್ಮೆಗಳು 91896 ಸೇರಿ ಒಟ್ಟು 329697, ಕುರಿಗಳು 238367, ಮೇಕೆಗಳು 79429 ಸೇರಿ ಒಟ್ಟು 317796, ಮೊಲ 98, ಇತರೆ 45, ನಾಯಿಗಳು 12091, ಹಂದಿಗಳು 2117 ಸೇರಿ ಒಟ್ಟು ಜಾನುವಾರಗಳು 661844, ಕುಕ್ಕಟಗಳು 2505966 ಇರುತ್ತವೆ.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಚಂದ್ರಶೇಖರ್ ಸುಂಕದ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.




