ನೆಹರೂರವರ ಕುಟುಂಬ ದೇಶಕ್ಕೆ ಏನು ಮಾಡಿದೆ ಎಂದು ಕೇಳುವವರಿಗೆ ಶ್ರೀಮತಿ ಇಂದಿರಾಗಾಂಧಿರವರ ಮತ್ತು ರಾಜೀವ್ ಗಾಂಧಿ ರವರ ಬದುಕು ಉತ್ತರವಾಗಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಭಾರತದ ಸಮಗ್ರತೆ ಮತ್ತು ಐಕ್ಯತೆಗಾಗಿ ಶ್ರೀಮತಿ ಇಂದಿರಾ ಗಾಂಧಿ ರವರು ಮತ್ತು ರಾಜೀವ್ ಗಾಂಧಿ ರವರು ತಮ್ಮ ಪ್ರಾಣವನ್ನ ನೀಡಿರುತ್ತಾರೆ. ಇಂತಹ ತ್ಯಾಗದ ಕುಟುಂಬದ ಬಗ್ಗೆ ಮಾತನಾಡುವ ಜನರು ನಿಜಕ್ಕೂ ಪೂರ್ವಾಗ್ರಹಪೀಡಿತರಾಗಿದ್ದಾರೆ.
1984ರ ಅಕ್ಟೋಬರ್ 31ರಂದು ಶ್ರೀಮತಿ ಇಂದಿರಾ ಗಾಂಧಿ ರವರು ತಮ್ಮ ಅಂಗರಕ್ಷಕರಿಂದ ಹತ್ಯೆಯಾದ ಸಂದರ್ಭದಲ್ಲಿ ರಾಜೀವ್ ಗಾಂಧಿರವರು ದೇಶದ ಪ್ರಧಾನಿಯಾಗಿ ಪ್ರಮಾಣವಚನವನ್ನು ಸ್ವೀಕರಿಸಿ ತದನಂತರ ಲೋಕಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಘೋಷಣೆಯನ್ನು ಮಾಡಿರುತ್ತಾರೆ. 1984ರ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಗಾಂಧಿ ರವರಿಗೆ ದೇಶದ ಜನತೆ ಅತ್ಯಂತ ಹೆಚ್ಚಿನ ಬಹುಮತವನ್ನು ನೀಡಿರುತ್ತಾರೆ. 418 ಸ್ಥಾನಗಳನ್ನ ನೀಡುವುದರ ಮೂಲಕ ಇತಿಹಾಸವನ್ನು ಬರೆದಿರುತ್ತಾರೆ.
ಇನ್ನು ಯುವಕರಾಗಿದ್ದ ಕಾರಣದಿಂದ ರಾಜೀವ್ ಗಾಂಧಿ ರವರ ಆಲೋಚನೆಗಳು ಮತ್ತು ಕಾರ್ಯಕ್ರಮಗಳು ಯುವಜನರನ್ನ ಉತ್ತೇಜಿಸುವ ಮತ್ತು ಅವರಿಗೆ ಬದುಕನ್ನ ಕಟ್ಟಿಕೊಡುವ ನಿಟ್ಟಿನಲ್ಲಿ ರೂಪಗೊಂಡಿತು.
18 ವರ್ಷದವರೆಗೆ ಮತದಾನದ ಹಕ್ಕನ್ನು ನೀಡಿ ಯುವಜನರು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಾಲುದಾರರಾಗಲು ಕಾರಣಕರ್ತರಾದರು.
ಸಂವಿಧಾನದ 73 ಮತ್ತು 74ನೇ ಕಾಲಂಗಳಿಗೆ ತಿದ್ದುಪಡಿಯನ್ನ ತಂದು ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದರು. ಸ್ಥಳೀಯ ಸಂಸ್ಥೆಗಳಲ್ಲಿ ಆರು ತಿಂಗಳ ಅವಧಿಗಿಂತ ಹೆಚ್ಚು ಕಾಲ ಆಡಳಿತ ಅಧಿಕಾರಿ ಅಧಿಕಾರ ನಡೆಸುವಂತಿಲ್ಲ. ಚುನಾವಣೆಗಳು ಕಾಲಕಾಲಕ್ಕೆ ನಡೆಯಬೇಕೆನ್ನುವುದು ಇವರ ಆಶಯವಾಗಿತ್ತು. ದುರಂತವೆಂದರೆ ಸಂವಿಧಾನದ ತಿದ್ದುಪಡಿಗೆ ಯಾರು ಬೆಲೆಯನ್ನು ಕೊಡುತ್ತಿಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನ ಕುಂಟು ನೆಪಗಳನ್ನು ಹೇಳುತ್ತಾ ಮುಂದೂಡುತ್ತಲೇ ಇದ್ದಾರೆ ಇದಕ್ಕೆ ಕರ್ನಾಟಕ ರಾಜ್ಯವು ಹೊರತಲ್ಲ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರವಾದಂತಹ ಬೆಳವಣಿಗೆಯನ್ನು ಮಾಡಿದಂತಹ ಇವರು ಸೂಪರ್ ಕಂಪ್ಯೂಟರ್ ತರುವುದರ ಮೂಲಕ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ನಾಂದಿಯನ್ನು ಹಾಡಿದರು.
ಸೀ ಡಾಟ್ ತಂತ್ರಜ್ಞಾನದ ಮೂಲಕ ದೂರಸಂಪರ್ಕ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಿದರು. ಇವರ ಕಾರಣದಿಂದಲೇ ಇಂದು ದೇಶದ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಗಳಿರುವುದು ಮತ್ತು ತಮ್ಮ ಮೊಬೈಲ್ಗಳ ಮೂಲಕವೇ ವ್ಯಾಪಾರ ವ್ಯವಹಾರವನ್ನ ಮಾಡುವಂತಹ ಆಧುನಿಕ ಜಗತ್ತಿಗೆ ಸಮಾಜ ಸಮರ್ಪಣೆಗೊಂಡಿರುವುದು.
ವೈಜ್ಞಾನಿಕ ಸಂಶೋಧನೆಗಳಿಗೆ ಹೆಚ್ಚಿನ ಗಮನವನ್ನು ನೀಡಿದವರು ಬಾಹ್ಯಾಕಾಶ ಕ್ಷೇತ್ರದ ಯೋಜನೆಗಳಿಗೆ ಆರ್ಥಿಕ ನೆರವನ್ನು ನೀಡಿದರು. ಹೊಸ ಹೊಸ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿದರು. ಉನ್ನತ ಶಿಕ್ಷಣದ ವ್ಯಾಸಂಗಕ್ಕಾಗಿ ಮತ್ತಷ್ಟು ಸಂಸ್ಥೆಗಳನ್ನು ಸ್ಥಾಪಿಸಿದರು.
ಈ ರೀತಿಯಲ್ಲಿ ಭಾರತವನ್ನು ವೈಜ್ಞಾನಿಕ ತಳಹದಿಯ ಮೇಲೆ ಕಟ್ಟುವಂತಹ ನೆಹರೂರವರ ಆಲೋಚನೆಗಳ ಮುಂದುವರಿಕೆಯ ಭಾಗವಾಗಿ ಕಾರ್ಯವನ್ನು ನಿರ್ವಹಿಸಿರುತ್ತಾರೆ.
ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷದ ನಾಯಕರನ್ನು ಅತ್ಯಂತ ಹಗುರವಾಗಿ ಟೀಕಿಸುವುದು, ಅವರ ಮೇಲೆ ದ್ವೇಷದ ರಾಜಕಾರಣವನ್ನ ಮಾಡುವ ಸಲುವಾಗಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಇವುಗಳು ಹೆಚ್ಚಾಗಿರುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರ ಜೊತೆಯಲ್ಲಿ ಯಾವ ರೀತಿಯಲ್ಲಿ ಮಾನವೀಯತೆಯ ನೆಲೆಯಲ್ಲಿ ಬಾಂಧವ್ಯವನ್ನ ಹೊಂದಿರಬೇಕು ಎನ್ನುವುದಕ್ಕೆ ರಾಜೀವ್ ಗಾಂಧಿರವರು ದೊಡ್ಡ ಉದಾಹರಣೆಯಾಗಿದ್ದಾರೆ. ಇವರ ಸಾವಿನ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿರವರು ಆಡಿರುವ ಮಾತುಗಳು ರಾಜೀವ್ ಗಾಂಧಿರವರ ವ್ಯಕ್ತಿತ್ವವನ್ನು ತೋರಿಸುತ್ತದೆ. ರಾಜೀವ್ ಗಾಂಧಿರವರು ಎಂದು ಸಹ ವಿರೋಧ ಪಕ್ಷದ ನಾಯಕರನ್ನು ಶತ್ರುಗಳು ಎಂದು ಭಾವಿಸಿರಲಿಲ್ಲ. ಕೇವಲ ಸೈದ್ಧಾಂತಿಕ ಅಭಿಪ್ರಾಯ ಭೇದ ಇರುವ ನಾಯಕರುಗಳು ಎಂಬ ಭಾವನೆಯಿಂದ ಗೌರವಿಸುತ್ತಿದ್ದರು.
1991ರ ಮೇ 21ರಂದು ರಾಜೀವ್ ಗಾಂಧಿರವರು ಮಾನವ ವಿರೋಧಿ ಸಂಘಟನೆಯ ವ್ಯಕ್ತಿಗಳಿಂದ ಹತ್ಯೆಯಾಗುತ್ತಾರೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಮತ್ತು ಪ್ರಿಯಾಂಕ ಗಾಂಧಿರವರು ಇನ್ನು ಚಿಕ್ಕ ವಯಸ್ಸಿನವರಾಗಿದ್ದರು. ಶ್ರೀಮತಿ ಸೋನಿಯಾ ಗಾಂಧಿರವರು ಇಂತಹ ಕಠಿಣ ಪರಿಸ್ಥಿತಿಯಲ್ಲಿ ಗಟ್ಟಿಯಾಗಿ ನಿಂತು ಪರಿಸ್ಥಿತಿಯನ್ನ ನಿಭಾಯಿಸಿ ತಮ್ಮ ಮಕ್ಕಳ ಬೆಳವಣಿಗೆಯ ಕಡೆಗೆ ಗಮನವನ್ನು ನೀಡಿದ್ದು ಸಾಮಾನ್ಯವಾಗಿ ಸಂಗತಿಯಲ್ಲ.
ಶ್ರೀಮತಿ ಇಂದಿರಾ ಗಾಂಧಿರವರ ಹತ್ಯೆಯ ನೆನಪು ಮಾಸುವ ಮುನ್ನವೇ ರಾಜೀವ್ ಗಾಂಧಿ ಅವರ ಪ್ರಾಣಪಕ್ಷಿಯು ಹಾರಿಹೋದದ್ದು, ಸೋನಿಯಾ ಗಾಂಧಿರವರಿಗೆ ಮತ್ತು ಇನ್ನೂ ಚಿಕ್ಕವರಾಗಿದ್ದ ರಾಹುಲ್ ಗಾಂಧಿ ರವರಿಗೆ ಮತ್ತು ಪ್ರಿಯಾಂಕ ಗಾಂಧಿ ಅವರಿಗೆ ಸಾಮಾನ್ಯವಾಗಿ ಮರೆಯುವ ನೋವಿನ ಕ್ಷಣಗಳಾಗಿರಲಿಲ್ಲ.
ರಾಹುಲ್ ಗಾಂಧಿರವರು ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ, ಸಂವಿಧಾನದ ಆಶಯಗಳನ್ನ ಎತ್ತಿ ಹಿಡಿಯುವ ಸಲುವಾಗಿ, ಸರ್ವಾಧಿಕಾರದ ವ್ಯವಸ್ಥೆಯನ್ನು ಕೊನೆಗಾಣಿಸುವ ಸಲುವಾಗಿ, ತಮ್ಮ ರಕ್ಷಣೆಯ ಕೋಟೆಯನ್ನ ಭೇದಿಸಿಕೊಂಡು ಸಾಮಾನ್ಯರಂತೆ ಜನರೊಂದಿಗೆ ಬೆರೆಯುತ್ತಾ ಭಾರತ್ ಜೋಡೋ ಯಾತ್ರೆಯ ಮೂಲಕ ಇಡೀ ದೇಶದಾದ್ಯಂತ ಸಂಚರಿಸುತ್ತಿರುವುದು ಅವರ ಆತ್ಮವಿಶ್ವಾಸವನ್ನ ತೋರಿಸುತ್ತದೆ.
ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ನೆಹರು ಶ್ರೀಮತಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹಾಗೂ ಶ್ರೀಮತಿ ಸೋನಿಯಾ ಗಾಂಧಿರವರು ನೀಡಿದಂತಹ ಕೊಡುಗೆಗಳು ಈಗ ರಾಹುಲ್ ಗಾಂಧಿರವರಿಗೆ ಬಿಜೆಪಿಯ ನಾಯಕರುಗಳು ಮತ್ತು ಕೆಲವು ಮಾರಿಕೊಂಡಿರುವ ಮಾಧ್ಯಮದವರು ಎಷ್ಟೇ ಕೆಳಮಟ್ಟದ ಟೀಕೆಯನ್ನು ಮಾಡಿದರು, ರಾಜಕೀಯವಾಗಿ ಅನೇಕ ರೀತಿಯ ತೊಂದರೆಗಳನ್ನು ನೀಡಿದರು ಸಹ ಇವುಗಳನ್ನ ಧಿಕ್ಕರಿಸಿ ಮುನ್ನಡೆಯುತ್ತಿರುವಂತಹ ರೀತಿಯನ್ನ ಗಮನಿಸಿದಾಗ ಅವರಲ್ಲಿರುವಂತಹ ಧೈರ್ಯ ಮತ್ತು ಪ್ರಭುದ್ಧವಾದ ನಡವಳಿಕೆಗಳ ಮೂಲಕ ಉತ್ತರವನ್ನು ಕೊಡುತ್ತಿದ್ದಾರೆ.
– ಕೆ ಎಸ್ ನಾಗರಾಜ್, ಬೆಂಗಳೂರು




