ಮಹಿಳೆಗೆ 3.46 ಲಕ್ಷ ವಂಚಿಸಿದ ಆನ್ಲೈನ್ ವಂಚಕರು

2 years ago

ಬೆಂಗಳೂರು: ಸಾಫ್ಟ್ವೇರ್ ಎಂಜಿನಿಯರ್ ಮಹಿಳೆಯೊಬ್ಬರಿಗೆ ಮುಂಬೈ ಸೈಬರ್ ಪೊಲೀಸರ ಹೆಸರಿನಲ್ಲಿ ಕರೆ ಮಾಡಿದ ದುಷ್ಕರ್ಮಿಗಳು ಅವರನ್ನು ಹೆದರಿಸಿ 3.46 ಲಕ್ಷ ರೂ ವಂಚಿಸಿದ್ದಾರೆ. ಈ ಕುರಿತು ಬೆಂಗಳೂರಿನ ವೈಟ್ಫಿಲ್ಡ್ನ ಬಿಇಎಂಎಲ್ ಲೇಔಟ್ ನಿವಾಸಿ ಮೇಘನಾ ದುಬೆ(25) ನೀಡಿರುವ ದೂರು ಆಧರಿಸಿ ವೈಟ್ಫಿಲ್ಡ್ ಪೊಲೀಸರು ವಂಚಕರ ಪತ್ತೆಗೆ ಶೋಧ ಆರಂಭಿಸಿದ್ದಾರೆ.

ಮೇಘನಾ ದುಬೆ ಅವರಿಗೆ ನ.28ರಂದು ಬೆಳಗ್ಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತಾನು ಮುಂಬೈ ಸೈಬರ್ ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದು, ನಿಮ್ಮ ಹೆಸರಿನಲ್ಲಿ ಮುಂಬೈನಿಂದ ತೈವಾನ್ಗೆ ಇಂಟರ್ ನ್ಯಾಷನಲ್ ಎಂಡಿಎಂಎ ಡ್ರಗ್ಸ್ ಡೆಲಿವರಿಗೆ ಬಂದಿದೆ. ಇದನ್ನು ಮುಂಬೈನ ಫೆಡೆಕ್ಸ್ ಕೊರಿಯರ್ ಏಜೆನ್ಸಿಯಲ್ಲಿ ಮುಂಬೈ ಕಸ್ಟಮ್ಸ್ ಅಧಿಕಾರಿಗಳು ಬ್ಲಾಕ್ ಮಾಡಿದ್ದಾರೆ ಎಂದಿದ್ದಾನೆ.

ಇದರಿಂದ ಭಯಗೊಂಡ ಮೇಘನಾ, ನನಗೂ ಆ ಪಾರ್ಸೆಲ್ಗೂ ಸಂಬಂಧವಿಲ್ಲ ಎಂದಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಸ್ಕೈಪ್ ಆ್ಯಪ್ ಮುಖಾಂತರ ಸೈಬರ್ ದೂರು ನೀಡುವಂತೆ ಹೇಳಿದ್ದಾರೆ. ಅದರಂತೆ ಮೇಘನಾ ಸ್ಕೈಪ್ ಆ್ಯಪ್ ಇನ್ಸ್ಸ್ಟಾಲ್ ಮಾಡಿಕೊಂಡಿದ್ದಾರೆ. ಅನಂತರ ದುಷ್ಕರ್ಮಿಗಳು, ತನಿಖೆಗಾಗಿ ಆರ್ಬಿಐ ವೆರಿಫಿಕೇಶನ್ಗಾಗಿ ಹಣ ಹಾಕಬೇಕು. ಪರಿಶೀಲನೆ ಬಳಿಕ ಆ ಹಣ ವಾಪಸ್ ನೀಡುವುದಾಗಿ ಹೇಳಿದ್ದಾರೆ. ದುಷ್ಕರ್ಮಿಗಳ ಮಾತು ನಂಬಿದ ಮೇಘನಾ, ಸೈಬರ್ ಕಳ್ಳರು ಹೇಳಿದ ಬ್ಯಾಂಕ್ ಖಾತೆಗೆ ಹಂತಹಂತವಾಗಿ ಒಟ್ಟು ₹3.46 ಲಕ್ಷ ಹಣ ಹಾಕಿದ್ದಾರೆ.

ಇದಾದ ನಂತರ ಕಳ್ಳರು ಸಂಪರ್ಕಕ್ಕೆ ಸಿಗದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿ ಕೈಕೊಟ್ಟಿದ್ದಾರೆ. ನಂತ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಮೇಘನಾ ಅವರಿಗೆ ಅರಿವಿಗೆ ಬಂದಿದೆ. ಇದಾದ ಬಳಿಕ ವೈಟ್ಫಿಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply