ಬಾಗಲಕೋಟೆ ಬಾಪೂಜಿ ಸೌಹಾರ್ದ ಸಹಕಾರಿ 3.27 ಕೋಟಿ ಲಾಭ

4 years ago

ಬಾಗಲಕೋಟೆ: ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಈ ವರ್ಷ 3.27 ನಿವ್ವಳ ಲಾಭಗಳಿಸಿದೆ. ಲಾಭಗಳಿಕೆಯಲ್ಲಿ 119.6 ಲಕ್ಷ.ರೂ ಹೆಚ್ಚಳವಾಗಿದೆ. ಈ ಬಾರಿಗೆ ಶೇ.7% ರಷ್ಟು ಡಿವ್ಹಿಡೆಂಡ್ ಹಂಚಲು ಅನುಮೋದಿಸಲಾಗಿದೆ ಎಂದು ಬಾಪೂಜಿ ಸಹಕಾರಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.

ಬಾಗಲಕೋಟೆ ಶ್ರೀನಿವಾಸ ಕಲ್ಯಾಣ ಮಂಟಪ ಹಳೆ ಬಸ್ ನಿಲ್ದಾಣ ಹತ್ತಿರ ಎಸ್.ಆರ್.ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ 15ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು 61 ಶಾಖೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಸಕ್ತ ರಾಜ್ಯದಲ್ಲಿರುವ 5630 ಸೌಹಾರ್ದ ಸಹಕಾರಿಗಳಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಗತಿ ಹೊಂದಿ ರಾಜ್ಯದಲ್ಲಿನ ಸಹಕಾರಿಗಳಲ್ಲಿ ಅತ್ಯುನ್ನತ ಸ್ಥಾನ ಪಡೆದಿದೆ ಎಂದರು.

49,375 ಸದಸ್ಯರಿದ್ದರು. ಒಂದು ವರ್ಷದಲ್ಲಿ ಹೊಸದಾಗಿ 5,102 ಸದಸ್ಯರು ಸದಸ್ಯತ್ವ ಪಡೆದಿದ್ದಾರೆ. ಶೇರು ಬಂಡವಾಳ 639.63 ಲಕ್ಷ ಆಗಿದೆ. ಸಹಕಾರಿಯಲ್ಲಿ ಕಾಯ್ದಿಟ್ಟ ಹಾಗೂ ಇತರ ನಿಧಿ 818.40 ಲಕ್ಷ ಇದ್ದದ್ದು 971.91 ಲಕ್ಷ ಆಗಿದೆ. 153.51 ಲಕ್ಷ ಹೆಚ್ಚಳವಾಗಿದೆ ಎಂದರು.

ಸಹಕಾರಿಯಲ್ಲಿ ವಿವಿಧ ಪ್ರಕಾರದ ಠೇವಣಿ 582.43 ಕೋಟಿ ಇದ್ದದ್ದು 707.14 ಕೋಟಿ ಸಂಗ್ರಹಣೆಯಾಗಿ ದಾಖಲೆ ನಿರ್ಮಾಣವಾಗಿದೆ. ಒಟ್ಟು ಠೇವಣಿಯಲ್ಲಿ 124.71೧ ಕೋಟಿ. ರೂ. ಹೆಚ್ಚಳ ಠೇವಣಿ ಸಂಗ್ರಹವಾಗಿದೆ. 21%ರಷ್ಟು ಠೇವಣಿ ಹೆಚ್ಚಳವಾಗಿದೆ. ಸಹಕಾರಿಯ ಮೇಲೆ ಇಟ್ಟ ಅಚಲ ವಿಶ್ವಾಸ, ಆಕರ್ಷಕ ಬಡ್ಡಿದರಗಳು ಹಾಗೂ ಠೇವಣಿ ಸಂಗ್ರಹಣೆಗಾಗಿ ಶಾಖಾ ಸಲಹಾ ಸಮಿತಿಯವರ ಪರಿಶ್ರಮ ಸೇವೆಯೇ ಕಾರಣವಾಗಿದೆ ಎಂದರು.

ಬಾಗಲಕೋಟೆ ಪಟ್ಟಣ ಅಭಿವೃದ್ಧೀ ಪ್ರಾಧಿಕಾರದಿಂದ ನಿವೇಶನ ಪಡೆದಿದ್ದು, ಪ್ರಧಾನ ಕಚೇರಿಯ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅದರಂತೆ ಇಳಕಲ್ಲ ಹಾಗೂ ಕಲಗುರ್ಕಿ ಶಾಖೆಗಳು ಸ್ವಂತ ನಿವೇಶನದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರ ಇವರು ನಡೆಸುವ ಸಹಕಾರ ಹಾಗೂ ಬ್ಯಾಂಕಿಂಗ್ ಮ್ಯಾನೇಜ್ಮೆಂಟ್ ಡಿಪ್ಲೋಮಾ ಕೋರ್ಸನ ಪರೀಕ್ಷೆಯಲ್ಲಿ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಬಾಗಲಕೋಟೆ ಸಿಬ್ಬಂದಿ ಬೋರಮ್ಮ ಶ್ರೀಧರ ಅಣ್ಣಿಗೇರಿ ಪ್ರಥಮ ಸ್ಥಾನ, ಮುದ್ದೇಬಿಹಾಳ ವಿಜಯಲಕ್ಷ್ಮಿ ಸುರಪೂರ ದ್ವೀತಿಯ ಸ್ಥಾನ, ಅಮೀನಗಡ ಸಾವಿತ್ರಿ ಹೊಸಮನಿ ತೃತೀಯ ಸ್ಥಾನ ಪಡೆದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಜಿ.ಎನ್.ಪಾಟೀಲ, ನಿರ್ದೇಶಕ ಎ.ಎಮ್.ಶೆಟ್ಟರ, ಎಸ್.ಕೆ.ಯಡಹಳ್ಳಿ, ಎಸ್.ಆರ್.ಮೇಲ್ನಾಡ, ಎಮ್.ಎಸ್.ಪಾಟೀಲ, ಪಿ.ಆರ್.ಗೌಡರ, ಎಲ್.ಕೆ.ಬಳಗಾನೂರ, ಎಸ್.ಬಿ.ಬೆಳಗಲಿ, ವಿ.ಎಲ್,ಕುರ್ತಕೋಟಿ, ಎಸ್.ಎಸ.ಪಾತ್ರೋಟ, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಸಿ.ಮೋಟಗಿ ಸೇರಿದಂತೆ ಅನೇಕರು ಇದ್ದರು.

Leave a Reply