ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಗುರುವಾರ ಸುರಿದ ಮಳೆ ವಿವರದನ್ವಯ ಸರಾಸರಿ 17.7 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 20.2 ಮಿ.ಮೀ., ಚಿತ್ರದುರ್ಗ ತಾಲ್ಲೂಕು 16.5 ಮಿ.ಮೀ., ಹಿರಿಯೂರು ತಾಲ್ಲೂಕು 10.2 ಮಿ.ಮೀ., ಹೊಳಲ್ಕೆರೆ ತಾಲ್ಲೂಕು 11.2 ಮಿ.ಮೀ., ಹೊಸದುರ್ಗ ತಾಲ್ಲೂಕು 33.3ಮಿ.ಮೀ. ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 9.4 ಮಿ.ಮೀ. ಮಳೆಯಾಗಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಹೋಬಳಿವಾರು ಮಳೆ ವಿವರ: ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 14.8 ಮಿ.ಮೀ, ನಾಯಕನಹಟ್ಟಿ 31.1 ಮಿ.ಮೀ, ಪರಶುರಾಂಪುರ 9.4 ಮಿ.ಮೀ, ತಳಕು 25.8 ಮಿ.ಮೀ, ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 11.5 ಮಿ.ಮೀ, ಭರಮಸಾಗರ 23.6 ಮಿ.ಮೀ, ಹಿರೇಗುಂಟನೂರು 12.9 ಮಿ.ಮೀ, ತುರುವನೂರು 29.9 ಮಿ.ಮೀ, ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 16.6 ಮಿ.ಮೀ,. ಐಮಂಗಲ 9.5 ಮಿ.ಮೀ, ಧರ್ಮಪುರ 5.1 ಮಿ.ಮೀ, ಜವನಗೊಂಡನಹಳ್ಳಿ 15 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 12.1 ಮಿ.ಮೀ, ಬಿ.ದುರ್ಗ 12.9 ಮಿ.ಮೀ, ರಾಮಗಿರಿ 17.7 ಮಿ.ಮೀ, ತಾಳ್ಯ 9.7 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 35 ಮಿ.ಮೀ, ಮಾಡದಕೆರೆ 15.9 ಮಿ.ಮೀ,, ಮತ್ತೋಡು 27.4 ಮಿ.ಮೀ, ಶ್ರೀರಾಂಪುರ 32.6 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 11.5ಮಿ.ಮೀ, ದೇವಸಮುದ್ರದಲ್ಲಿ 7.2 ಮಿ.ಮೀ ಮಳೆಯಾಗಿದೆ.
38 ಮನೆಗಳು ಹಾನಿ: ಅಕ್ಟೋಬರ್ 19 ರಿಂದ 23 ರವರೆಗೆ ಮಳೆಯಿಂದಾಗಿ ಜಿಲ್ಲೆಯಾದ್ಯಂತ 37 ಮನೆಗಳು ಭಾಗಶಃ ಹಾನಿಯಾಗಿದ್ದು, 1 ಮನೆ ಪೂರ್ಣಹಾನಿಯಾಗಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 03 ಭಾಗಶಃ ಮನೆಹಾನಿ, ಚಳ್ಳಕೆರೆ ತಾಲ್ಲೂಕಿನಲ್ಲಿ 05 ಭಾಗಶಃ ಮನೆಹಾನಿಯಾಗಿವೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 08 ಭಾಗಶಃ ಮನೆಹಾನಿ ಹಾಗೂ 1 ಮನೆ ಪೂರ್ಣಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 12 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಹಿರಿಯೂರು ತಾಲ್ಲೂಕಿನಲ್ಲಿ 07 ಮನೆಗಳು ಭಾಗಶಃ ಹಾನಿ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 02 ಮನೆಗಳು ಭಾಗಶ ಹಾನಿಯಾಗಿವೆ.




