ಬಿ.ಕೆ ಹರಿಪ್ರಸಾದ್ ಅವರೇ, ನಿಮ್ಮ ಹೇಳಿಕೆ ಉದ್ಧಟತನದ್ದು ಮಾತ್ರವಲ್ಲ, ದುರಹಂಕಾರದ ಪರಮಾವಧಿ. ನಮ್ಮಿಂದಲೇ ರಾಜ್ಯ, ನಮ್ಮಿಂದಲೇ ಸರಕಾರ ಎನ್ನುವ ದರ್ಪ ನಿಮ್ಮ ಮಾತಿನಲ್ಲಿ ದ್ವನಿಸುತ್ತಿದೆ. ಇದು ಸರಿಯಲ್ಲ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಹಿಂದೆ ರಾಜ್ಯದಲ್ಲಿ ಹೆಂಡದ ದೊರೆಗಳಿಂದಲೇ ಸರಕಾರ ನಡೆಯುತ್ತಿತ್ತು ಎಂದು ಜನರು ಹೇಳುತ್ತಿದ್ದರು. ಕೆಲ ರಾಜಕಾರಣಿಗಳು ಹೆಂಡದ ದೊರೆಗಳ ಮನೆ ಬಾಗಿಲು ಕಾಯುತ್ತಿದ್ದರು. ಆ ರಾಜಕಾರಣಿಗಳು ಯಾರು ಎನ್ನುವುದು ನಿಮಗೂ ಚೆನ್ನಾಗಿ ಗೊತ್ತಿದೆ. ಹೀಗೆಂದ ಮಾತ್ರಕ್ಕೆ ಇಡೀ ಸರಕಾರ, ರಾಜ್ಯ ನಿಮ್ಮ ಹಣದಿಂದಲೇ ನಡೆಯುತ್ತಿದೆ ಎನ್ನುವುದು ಮೂರ್ಖತನ.
ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡುತ್ತಿರುವುದು ನಮ್ಮ ಹಣದಿಂದ ಎನ್ನುತ್ತೀರಿ. ಬಡಜನರ ಸಬಲೀಕರಣ ಎನ್ನುತ್ತೀರಿ. ಹಾಗಿದ್ದರೆ ಬೀದಿ ಬೀದಿಯಲ್ಲಿ ನಾಯಿಕೊಡೆಗಳಂತೆ ವೈನ್ಸ್ ಸ್ಟೋರ್, ಬಾರುಗಳನ್ನು ತೆರೆಯಲು ಪರವಾನಗಿ ಕೊಟ್ಟು ಜನರ ನೆಮ್ಮದಿಯ ಬದುಕು ಹಾಳು ಮಾಡುತ್ತಿರುವುದು ಯಾರು? ನೀವಲ್ಲವೇ? ಎಷ್ಟೋ ಕುಟುಂಬಗಳು ಬೀದಿ ಪಾಲಾಗಿವೆ. ಅದಕ್ಕೆ ಹೊಣೆ ನೀವು, ನಿಮ್ಮವರು ಮಾತ್ರವೇನಾ? ನಿಮ್ಮ ಅವಿವೇಕದಿಂದ ನಿಮ್ಮ ಸಮುದಾಯಕ್ಕೆ ಯಾಕೆ ಮಸಿ ಬಳಿಯುತ್ತೀರಿ?
ಇವತ್ತು ಮದ್ಯ ಮಾರಾಟವನ್ನು ನಿಮ್ಮವರು ಮಾತ್ರವೇ ಮಾಡುತ್ತಿಲ್ಲ, ಇತರೆ ಸಮುದಾಯಗಳವರು ಮಾಡುತ್ತಿದ್ದಾರೆ ಎನ್ನುವ ಪ್ರಜ್ಞೆ ನಿಮಗೆ ಇಲ್ಲವೇ? ಬಡಜನರಿಗೆ ಕುಡಿಸಿ ಮಹಲು, ಸೌಧಗಳನ್ನು ಕಟ್ಟಿಕೊಂಡು ಮೆರೆದವರೆಲ್ಲರೂ ಏನಾದರು ಎನ್ನುವ ಸಾಮಾನ್ಯ ತಿಳಿವಳಿಕೆ ನಿಮಗಿದೆಯೇ? ಎಷ್ಟೋ ಹೆಣ್ಣು ಮಕ್ಕಳು ಮಾಂಗಲ್ಯ ಕಳೆದುಕೊಂಡರು, ಅದೆಷ್ಟೋ ಕುಟುಂಬಗಳು ಬೀದಿ ಪಾಲಾದವು. ಅವರ ಶಾಪ ತಟ್ಟದೇ ಇರುತ್ತದೆಯೇ? ಈ ಪಾಪ ಸುಮ್ಮನೆ ಬಿಡುತ್ತದೆಯೇ?
ನಿಮ್ಮ ಪ್ರಕಾರ ಬಡಜನರು ಕುಡಿದು ಕುಡಿದೂ ಸಾಯಬೇಕೆ? ನೀವು ಮಾತ್ರ ಮಹಡಿಯ ಮಹಡಿ ಕಟ್ಟುತ್ತಾ ಮೆರೆಯಬೇಕೆ? ಮದ್ಯ ಎನ್ನುವುದು ಒಂದು ಸಮುದಾಯದ ಸಂಬಂಧಿಸಿದ ವಿಷಯ ಅಥವಾ ಲಾಭ ನಷ್ಟದ ವಿಷಯವಲ್ಲ. ಅದು ಸಾಮಾಜಿಕ ಪಿಡುಗು, ಅನಿಷ್ಟ. ಮಹಾತ್ಮ ಗಾಂಧೀಜಿ ಅವರು ಹೇಳಿರುವ ಮಾತು ನಿಮಗೆ ಗೊತ್ತಿಲ್ಲವೇ? ಕಾಂಗ್ರೆಸ್ ಕಟ್ಟರ್ ನಾಯಕನಾಗಿ ನಿಮಗೆ ಬಾಪೂಜಿ ಅವರ ಸಂದೇಶವೇ ಗೊತ್ತಿಲ್ಲದಿದ್ದರೆ ಹೇಗೆ ಹರಿಪ್ರಸಾದ್ ಅವರೇ?
ಹಿಂದೆ H D Kumaraswamy ಅವರು ಮುಖ್ಯಮಂತ್ರಿ ಆಗಿದ್ದಾಗ ಸೇಂದಿ, ಹೆಂಡವನ್ನು ನಿಷೇಧಿಸಿದರು. ಜನರು ಇಂಥ ವಿಷ ಕುಡಿದು ಹೆಣವಾಗುತ್ತಿದ್ದಾರೆ ಎನ್ನುವುದು ಮನಗಂಡು ಅವರು ಅದಕ್ಕೆ ಚರಮಗೀತೆ ಹಾಡಿದ್ದರು.
ಆದರೆ, ನಿಮ್ಮ Indian National Congress – Karnataka ಸರಕಾರ ಏನು ಮಾಡುತ್ತಿದೆ? ಒಂದು ಕೈಯ್ಯಲ್ಲಿ ಗ್ಯಾರಂಟಿ ಕೊಡುತ್ತೇವೆ ಎಂದು ಹೇಳುತ್ತಾ ಇನ್ನೊಂದು ಕಡೆ ಗಲ್ಲಿಗೊಂದು ಬಾರು ತೆರೆಯಲು ಪರ್ಮಿಟ್ ಕೊಡುತ್ತಿದ್ದೀರಿ. ಎಣ್ಣೆ ಮಾರಿ ರಾಜಕೀಯ ಮಾಡಿಕೊಂಡಿರುವ ಅನಿಷ್ಟ ಸರ್ಕಾರ ನಿಮ್ಮದು. ನಾಚಿಕೆಯಾಗಬೇಕು ನಿಮಗೆ. ಗಾಂಧೀಜಿ ಹೆಸರು ಹೇಳಲಿಕ್ಕೆ ನಿಮಗೆ ಸ್ವಲ್ಪವಾದರೂ ನೈತಿಕತೆ ಎನ್ನುವುದು ಇದೆಯೇ?
– ಜೆಡಿಎಸ್




