ಯೋಗ ಸ್ಪರ್ಧೆ: ವಿಜಯ ಅರಳಿಕಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆ

1 year ago

ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಜಿಲ್ಲಾ ಮಟ್ಟದ ಓಲಂಪಿಯಾಡ್ ಯೋಗ ಸ್ಪರ್ಧೆಯನ್ನು ಧಾರವಾಡದ ಸರಕಾರಿ ಶಿಕ್ಷಕಿಯರ ತರಬೇತಿ ಶಾಲೆಯಲ್ಲಿ ಮೇ 31, 2025 ರಂದು ಏರ್ಪಡಿಸಲಾಗಿತ್ತು.

ಬಾಲಕರ ಯೋಗ ಸ್ಪರ್ಧೆ ವಿಭಾಗದಲ್ಲಿ ಶ್ರೀ ಎನ್.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಕು. ವಿಜಯ ಸಂಗಪ್ಪ ಅರಳಿಕಟ್ಟಿ ಉತ್ತಮ ಪ್ರದರ್ಶನ ನೀಡಿ, ಪ್ರಥಮ ಸ್ಥಾನ ಗಳಿಸಿ, ರಾಜ್ಯಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.

ಶಾಲೆಯ ಉಸ್ತುವಾರಿ ಸದಸ್ಯರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ್ ಎಮ್. ಬ್ಯಾಕೋಡ ಅವರು ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.

Leave a Reply