ಬೆಂಗಳೂರು: ಎನ್.ಆರ್.ರಮೇಶ್ ರವರ ಅಭಿಮಾನಿ ಬಳಗದ ವತಿಯಿಂದ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷರು, ಆಡಳಿತ ಪಕ್ಷದ ಮಾಜಿ ನಾಯಕರಾದ ಎನ್.ಆರ್.ರಮೇಶ್ ರವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಅಚರಿಸಲಾಯಿತು.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಎನ್.ಆರ್.ರಮೇಶ್ ರವರು ಅಭಿಮಾನಿಗಳು, ಸ್ನೇಹಿತರು ತಂದ ಕೇಕ್ ಆನ್ನು ಕತ್ತರಿಸಿ ಎಲ್ಲರಿಗೂ ಸಿಹಿ ವಿತರಿಸಿದರು. ಸಾರ್ವಜನಿಕರು ಮತ್ತು ಅಭಿಮಾನಿಗಳು ಹಾಗೂ ಸ್ನೇಹಿತರು ಎನ್.ಆರ್.ರಮೇಶ್ ರವರನ್ನು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಊ ಎನ್.ಆರ್.ರಮೇಶ್, ಜನಶಕ್ತಿ ಮುಂದೆ ಯಾವ ಶಕ್ತಿಯು ಇಲ್ಲ, ಜನರ ಸೇವೆಯನ್ನ ದೇವರ ಸೇವೆ ಎಂದು ಮಾಡುತ್ತಿದ್ದೇನೆ. ಯಡಿಯೂರು ವಾರ್ಡ್ ಇಂದು ಏಷಿಯದ ಅತ್ಯಂತ ಸುಂದರ ವಾರ್ಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಯಡಿಯೂರು ವಾರ್ಡ್ ನಲ್ಲಿ ಯಡಿಯೂರು ಕೆರೆಯನ್ನು ನವಿನವೀನ ಪ್ರವಾಸಿತಾಣವಾಗಿ ಮಾಡಲಾಗಿದೆ. ಉದ್ಯಾನವನ ಸುಂದರ, ಸೌಂದರ್ಯೀಕರಣ ಮಾಡಲಾಗಿದೆ. ಧನ್ವಂತರಿ ಉದ್ಯಾನವನ ಆಯುರ್ವೇದ ಸಸಿಗಳನ್ನು ನೆಟ್ಟು ಜನರ ಆರೋಗ್ಯಕ್ಕೆ ಪೂರಕವಾಗಿದೆ ಉದ್ಯಾನವನ.
ಕನ್ನಡ ಮೇರುನಟ ಡಾ.ರಾಜ್ ಕುಮಾರ್ ಮತ್ತು ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರತಿಮೆ ಸೌತ್ ಎಂಡ್ ನಲ್ಲಿ ಸ್ಥಾಪಿಸಲಾಗಿದೆ ಮೂರು ಮಹನೀಯರುಗಳು ಒಂದೇ ಜಾಗದಲ್ಲಿ ಇರುವುದು ರಾಜ್ಯದಲ್ಲಿಯೆ ಪ್ರಥಮ ಎಂದರು.
ಕನ್ನಡ ಸಾಹಿತ್ಯ ಲೋಕದ 8 ಜ್ಞಾನ ಪೀಠ ಪುರಸ್ಕೃತ ಹಲವು ಮಹನೀಯರುಗಳು ಪ್ರತಿಮೆಗಳನ್ನು ಉದ್ಯಾನವನಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಕಾರಣ ಮುಂದಿನ ಪೀಳಿಗೆ ಯುವ ಸಮುದಾಯ ಮಹನೀಯರುಗಳ ಸಾಧನೆ ನೋಡಿ ಅವರ ಆದರ್ಶ ಮಾರ್ಗದರ್ಶನದಲ್ಲಿ ಸಾಗಲಿ ಎಂದರು.
ಬಯೋಗ್ಯಾಸ್ ಘಟಕದಿಂದ ಯಡಿಯೂರು ವಾರ್ಡ್ ನಲ್ಲಿರುವ ಪಾರ್ಕ್ ಬಿಬಿಎಂಪಿ ಕಛೇರಿಗಳಿಗೆ ವಿದ್ಯುತ್ ಉಚಿತವಾಗಿ ಸಿಗುತ್ತಿದೆ. ಇದರಿಂದ ಆರ್ಥಿಕವಾಗಿ ಉಳಿತಾಯವಾಗುತ್ತಿದೆ ಎಂದರು.
ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಉಚಿತ ಉದ್ಯೋಗ ಮೇಳ ಆಯೋಜಿಸಿ ಸಾವಿರಾರು ಯುವಕ, ಯುವತಿಯರಿಗೆ ಉದ್ಯೋಗ ಅವಕಾಶಕ್ಕೆ ನೀಡಲಾಗಿದೆ. ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ಒಳಾಂಗಣ ಕ್ರೀಡಾಂಗಣ ಮತ್ತು ಹೊರಂಗಣ ಕ್ರೀಡಾಂಗಣ ನಿರ್ಮಾಣ ಹಾಗೂ ಗ್ರಂಥಾಲಯ ಸ್ಥಾಪನೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮತ್ತು ವೈಟ್ ಟಾಫಿಂಗ್ ಕಾಮಗಾರಿ ಪೂರ್ಣ ಮಾಡಿ ಸಾರ್ವಜನಿಕರ ತೆರಿಗೆ ಹಣ ಸಮರ್ಪಕವಾಗಿ ಉಳಿತಾಯ ಮಾಡಲಾಗಿದೆ ಎಂದರು.
ಕಳೆದ 15 ವರ್ಷಗಳಿಂದ ಯಡಿಯೂರು ವಾರ್ಡ್ ನಲ್ಲಿ ಜನಸಂಪರ್ಕ ಅಭಿಯಾನ ಯಶ್ವಸಿಯಾಗಿ ನಡೆಯುತ್ತಿದೆ. ಪ್ರತಿ ಭಾನುವಾರ ಮನೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಅಲಿಸಿ, ಪರಿಹರಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಭ್ರಷ್ಟ ಬಿಬಿಎಂಪಿ ಮತ್ತು ಸರ್ಕಾರ ಅಧಿಕಾರಿಗಳ ವಿರುದ್ಧ ಹೋರಾಟದಲ್ಲಿ ನೂರಾರು ಅಧಿಕಾರಿಗಳು ವಿರುದ್ದ ಸಮರ ಸಾರಲಾಗಿದೆ. ಭಷ್ಟರ ಮುಖ ಬಯಲು ಮಾಡುವ ತನಕ ನನ್ನ ಹೋರಾಟ ನಿಲ್ಲದು. ನನ್ನ ಹೋರಾಟ, ಅಭಿವೃದ್ಧಿ ಕೆಲಸಗಳಿಗೆ ಮತ್ತು ಸಂಘಟನೆಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿರುವ ಜನರಿಗೆ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಉಚಿತ ಆರೋಗ್ಯ ತಪಾಸಣೆ, ಕ್ಯಾನ್ಸರ್ ತಪಾಸಣೆ, ಉಚಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.




