ಮಹಿಳೆಯರು ಅಬಲೆಯಲ್ಲ, ಸಬಲೆ ಎಂದು ನಿರೂಪಿಸಿದ್ದಾರೆ: ವಿನುತಾ ಹರೀಶ್

4 years ago

ಬೆಂಗಳೂರು: ತಾಯಿಯಾಗಿ, ತಂಗಿ, ಅಕ್ಕ ಮತ್ತು ಹೆಂಡತಿಯಾಗಿ ಸಮಾಜದ ಅಭಿವೃದ್ದಿಗೆ ಮಹಿಳೆ ಶ್ರಮಿಸುತ್ತಾಳೆ ಎಂದು ಇನ್ಸರ್ ವೀಲ್ ಅಧ್ಯಕ್ಷೆ ವಿನುತಾ ಹರೀಶ್ ಹೇಳಿದರು.

ಅರಮನೆ ಮೈದಾನ ಪ್ಯಾಲೇಸ್ ಗ್ರೌಂಡ್ ನಲ್ಲಿ ಇನ್ನರ್ ವೀಲ್ ಡಿಸ್ಟ್ರಿಕ್ಟ್ 319ರ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಇಂದು ಮಹಿಳೆಯರು ಪುರುಷರಷ್ಟೆ ಸಮಾನವಾಗಿ ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ ಎಂದರು.

ಮಹಿಳೆ ಅಬಲೆಯಲ್ಲ, ಸಬಲೆ ಎಂದು ರೂಪಿಸಲು ಮತ್ತು ಮಹಿಳೆಯರಿಗೆ ಉತ್ತೇಜನ ನೀಡಲು ಇನ್ಸರ್ ವೀಲ್ ಸಹಾಯ ಹಸ್ತ ನೀಡಿದೆ. ಮಹಿಳೆಯರಿಗೆ ಉದ್ಯೋಗ ಅವಕಾಶ, ಸ್ವಯಂ ಉದ್ಯೋಗಕ್ಕೆ ಸಹಕಾರ ಮತ್ತು ಬಾಲಕಿಯರ ಮತ್ತು ಯುವತಿಯರಿಗೆ ಶಿಕ್ಷಣಕ್ಕೆ ಪ್ರೋತ್ಸಾಹ, ಆದ್ಯತೆ ನೀಡಲಾಗಿದೆ ಎಂದರು.

ಗರ್ಭಿರ್ಣಿ ಸ್ತ್ರೀ ಆರೋಗ್ಯ ರಕ್ಷಣೆ, ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಮತ್ತು ಮಕ್ಕಳ ಅಪೌಷ್ಟಿಕತೆ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಟೈಲರಿಂಗ್ ಯಂತ್ರ ವಿತರಣೆ ಮಹಿಳೆಯರು ತಮ್ಮ ಸ್ವಂತ ಕಾಲ ಮೇಲೆ ನಿಲ್ಲಲು ಇನ್ನರ್ ವೀಲ್ ಸಹಕಾರ ನೀಡುತ್ತಿದೆ ಎಂದರು.

ಇನ್ಸರ್ ವೀಲ್ ರಾಷ್ಟ್ರೀಯ ಅಧ್ಯಕ್ಷ ಸುಜೀತ್ ಕೌರ್, ಗೌರ್ನರ್ ಜೀತೇಂದ್ರ ಆನೇಜಾ, ಮಾಜಿ ಉಪಮಹಾಪೌರ ಎಸ್.ಹರೀಶ್ಮ ಇನ್ನರ್ ವೀಲ್ ಸದಸ್ಯರು ಮೊದಲಾದವರು ಹಾಜರಿದ್ದರು.  ಇದೇ ವೇಳೆ ಮಹಿಳೆಯರ ಸಂವಾದ ಕಾರ್ಯಕ್ರಮ ಮತ್ತು ಫ್ಯಾಶನ್ ಶೋ, ಉದ್ಯೋಗದ ಮಹಿಳೆಯರ ಪಾತ್ರದ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.

Leave a Reply