ಬೆಂಗಳೂರು: ಡಿಜಿಟಲ್ ಅರೆಸ್ಟ್ ಬಗ್ಗೆ ಸರ್ಕಾರ ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುತ್ತಲೇ ಇದೆ. ಹೀಗಿದ್ದರೂ ಸಹ ಬಂಧನಕ್ಕೊಳಗಾದ ವೈದ್ಯರು, ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಉದ್ಯಮಿಗಳು ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಸದ್ಯ ಇದರಿಂದ ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿಯೊಬ್ಬರು ತಮ್ಮ ಸ್ವಂತ ಫ್ಲ್ಯಾಟ್, ಸೈಟ್‌ಗಳನ್ನು ಮಾರಾಟ ಮಾಡಿ ಸುಮಾರು 2 ಕೋಟಿ ರೂ.ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಕಳೆದ ಜೂನ್ ತಿಂಗಳಲ್ಲಿ ಟೆಕ್ಕಿಗೆ, ಬ್ಲೂ ಡಾರ್ಟ್ ಕೋರಿಯರ್ ಹೆಸರಿನಲ್ಲಿ ಕರೆ ಬಂದಿತ್ತು. ಅಧಿಕಾರಿಯ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ, ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಬ್ಯಾಗ್ ಒಂದನ್ನು ಸೀಜ್ ಮಾಡಲಾಗಿದ್ದು, ಅದರಲ್ಲಿ ಅನುಮಾನಾಸ್ಪದ ವಸ್ತುಗಳಿವೆ ಎಂದು ಬೆದರಿಕೆ ಹಾಕಿದ್ದ. ಕೊರಿಯರ್ ಹೆಸರಿನಲ್ಲಿ ಬಂದ ಕರೆಯನ್ನು ಮುಂಬೈ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿದ್ದ ವ್ಯಕ್ತಿಗಳಿಗೆ ವರ್ಗಾಯಿಸಲಾಯಿತು.
ಈ ವಂಚಕರು ಮಹಿಳೆಯನ್ನು ಬಂಧಿಸುವುದಾಗಿ ಬೆದರಿಸಿದ್ದಲ್ಲದೆ, ಪರಿಶೀಲನೆ ಪೂರ್ಣಗೊಳ್ಳುವರೆಗೂ ಮನೆಯಿಂದ ಹೊರಗೆ ಬರದಂತೆ ನಿರ್ಬಂಧ ಹೇರಿ ‘ಡಿಜಿಟಲ್ ಅರೆಸ್ಟ್’ ಮಾಡಿದ್ದರು. ಅಲ್ಲದೆ, ಮೊಬೈಲ್‌ನಲ್ಲಿ ನಿರ್ದಿಷ್ಟ ಅಪ್ಲಿಕೇಶನ್ ಒಂದನ್ನು ಇನ್‌ಸ್ಟಾಲ್ ಮಾಡುವಂತೆ ಸೂಚಿಸಿದ್ದರು.
ಮಗನ ಮುಂದಿಟ್ಟುಕೊಂಡು ಬೆದರಿಕೆ ಹಾಕಿದ ವಂಚಕರು: ತನಿಖೆಗೆ ಸಹಕರಿಸದೇ ಹೋದರೆ ಅದರ ಪರಿಣಾಮವನ್ನು ನಿಮ್ಮ ಮಗ ಎದುರಿಸುತ್ತಾನೆ. ಅವನ ಭವಿಷ್ಯಕ್ಕೆ ಇದು ಖಂಡಿತ ತೊಂದರೆಯಾಗಬಹುದು ಎಂದು ಬೆದರಿಕೆ ಹಾಕಿದ್ದರು. ಮಗನಿಗೆ ಯಾವುದೇ ಸಮಸ್ಯೆಯಾಗಕೂಡದು ಎಂದು ಬಬಿತಾ ಅವರು ವಂಚಕರು ಹೇಳುವ ಎಲ್ಲ ಆದೇಶಗಳನ್ನು ಪಾಲಿಸಲು ಒಪ್ಪಿಕೊಂಡರು.
ಸೈಬರ್ ವಂಚಕರ ಬೇಡಿಕೆಯಂತೆ ಬಬಿತಾ ಅವರು ಮಾಲೂರಿನಲ್ಲಿದ್ದ ತಮ್ಮ ಎರಡು ನಿವೇಶನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದರು. ಅಷ್ಟೇ ಅಲ್ಲದೆ, ತಾವು ವಾಸವಿದ್ದ ವಿಜ್ಞಾನ ನಗರದ ಫ್ಲಾಟ್ ಅನ್ನು ಸಹ ಮಾರಾಟ ಮಾಡಿದರು. ಇದರ ಜೊತೆಗೆ ಬ್ಯಾಂಕ್‌ನಿಂದ ಸಾಲವನ್ನೂ ಪಡೆದರು. ಹೀಗೆ ಆಸ್ತಿ ಮಾರಾಟದಿಂದ ಬಂದ ಹಣ ಮತ್ತು ಸಾಲದ ಹಣ ಸೇರಿದಂತೆ ಒಟ್ಟು ಸುಮಾರು 2 ಕೋಟಿ ರೂ.ಗಳನ್ನು ವಂಚಕರ ಖಾತೆಗಳಿಗೆ ವರ್ಗಾಯಿಸಿದ್ದಾರೆ
ನಿಮ್ಮ ಹಣವನ್ನು ಹಿಂಪಡೆಯಲು ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಎಂದು ಸೈಬರ್ ವಂಚಕರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಆಗ ಮಹಿಳಾ ಟೆಕ್ಕಿಗೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಕೂಡಲೇ ಬಬಿತಾ ದಾಸ್ ಅವರು ವೈಟ್‌ಫೀಲ್ಡ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.




