ಅವ್ವನ ದಿನ

5 years ago

ಅವ್ವನ ದಿನ

ತುಂಬಾ ಸಂತೋಷ. ನೀವು ನಿಮ್ಮ ಅವ್ವನ ಸೇವೆ ಮಾಡುತ್ತಿರುವಿರಿ ಧನ್ಯವಾದಗಳು… ನಾವೆಲ್ಲರು ತಾಯಿ ಋಣ ತೀರಿಸಲು ಸಾಧ್ಯವಿಲ್ಲ. ನಾವು ಎಲ್ಲರೂ ಪ್ರತಿದಿನ ತಾಯಿ-ತಂದೆ ಸೇವೆ ಮಾಡುತ್ತೇವೆ. ಆ ಕುರಿತು ಮನೆಯಲ್ಲಿ ಶಿಕ್ಷಣ, ಸಂಸ್ಕಾರ   ಇದೆ. ಅವಿಭಕ್ತ ಕುಟುಂಬದಲ್ಲಿ ಹಿರಿಯರು ಪ್ರತಿದಿನ ಅದನ್ನು ಹೇಳಿ ಕೊಡುತ್ತಾರೆ. ಇಲ್ಲಿ ಪ್ರತಿದಿನ ತಾಯಿ ದಿನ  ತಂದೆಯ ದಿನ. ಭಾರತದಲ್ಲಿ ಪ್ರತಿದಿನ ತಾಯಿ ಮಕ್ಕಳು ಕೂಡಿ ಬದುಕುತ್ತಿರುವೆವು. “ತಾಯಿ ದಿನ” ಇದೊಂದು ಉತ್ತಮ ಉದ್ದೇಶದ ಆಚರಣೆ. ಇದನ್ನು ಮಾಡಿದವರಿಗೆ ಧನ್ಯವಾದಗಳು.

ಪಾಶ್ಚಿಮಾತ್ಯರು ಎಲ್ಲೆಲ್ಲೋ ಬದುಕುವರು, ತಂದೆ ತಾಯಿ ಕಾಲಾಂತರದಲ್ಲಿ ಬೇರೆಬೇರೆ ಆಗಿರುತ್ತಾರೆ. ಮಕ್ಕಳು ಬೇರೆ ಕಡೆ ಇರುವದು ಅಲ್ಲದೇ ಅಲ್ಲಿ ಯಾವುದೇ  ಸಂಬಂಧ ಉಳಿದಿರುವುದಿಲ್ಲ. ಭಾರತದಂತೆ ಒಮ್ಮೆ ಮದುವೆ ಆದರೆ ಜೀವನ ಅಂತ್ಯದವರೆಗೆ ಗಂಡಹೆಂಡತಿಯಾಗಿ ಬದುಕುತ್ತಾರೆ ಎಂಬ ಗ್ಯಾರಂಟಿ ಇಲ್ಲ. ಆಗ ಮಕ್ಕಳು ಬೇರೆ ಬದುಕುತ್ತಾರೆ. ಮಕ್ಕಳಿಗೆ ತಂದೆ ತಾಯಿ ಸಹವಾಸ ನಿರಂತರ ದೊರೆಯದು.  ಅವರಿಗೆ ವರ್ಷಕ್ಕೆ ಒಮ್ಮೆಯಾದರೂ ನೆನೆಸೋಣ,  ಭೆಟ್ಟಿ ಆಗೋಣ  ಗೌರವಿಸೋಣ, ಆಶೀರ್ವಾದ ಪಡೆಯೋಣ  ಎನ್ನುವ ಸದುದ್ದೇಶದಿಂದ ತಾಯಿ ದಿನ, ತಂದೆ ದಿನ, ಸಹೋದರ ದಿನ, ಸ್ನೇಹಿತರ ದಿನ, ಪ್ರೇಮಿಗಳ ದಿನ ಹೀಗೆ ಆಚರಿಸುವರು.

ಅದು ಭಾರತದಲ್ಲಿಯೂ ನಡೆಯುತ್ತಿದೆ. ಇತ್ತಿತ್ತಲಾಗಿ ಭಾರತದಲ್ಲಿಯೂ ತಂದೆ -ತಾಯಿ ನಿರ್ಲ೯ಕ್ಷಿಸುವದು, ಅನಾಥಾಶ್ರಮದಲ್ಲಿಡುವದು, ವೃದ್ಧರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುವ ಕಥೆ ಕೇಳುತ್ತೇವೆ. ತಂದೆತಾಯಂದಿರ ಆಸ್ತಿ ಬೇಕು, ಅವರ ಸಂಬಳ, ಪೆನ್ಶನ್ ಬೇಕು. ಆದರೆ ಅವರು ಬೇಡ, ಅವರ ಸೇವೆ ಮಾಡುವದು ಬೇಡ,  ಅವರಿಗೆ ಶಕ್ತಿ ಇದ್ದರೆ ಅವರ ಸೇವೆ ಬೇಕು ಆದರೆ ಪ್ರತಿಯಾಗಿ ಅವರಿಗೆ ಸೇವೆ ಮಾಡುವದು ಬೇಡ. ನಾನು ನನ್ನ ಹೆಂಡತಿ, ಮಕ್ಕಳು ಆದರೆ ಮುಗಿಯಿತು, ವಿಶಾಲತೆಯ ಶಿಕ್ಷಣ ತಂದೆ ತಾಯಿ ಅವರಿಂದ ಪಡೆದು  ಅವರಿಗೇ  ಸೇವೆಯ  ಅವಶ್ಯಕತೆ ಇದ್ದಾಗ ಕುಬ್ಜರಾಗಿ,  ಸಂಕುಚಿತ ಭಾವನೆ ಹೊಂದಿ ತಂದೆ ತಾಯಿ ಅವರ ಮೇಲೆ ಪಡಬಾರದ ಪಾಪ ಕೃತ್ಯ ಮಾಡುವುದನ್ನು ನೋಡಿದ್ದೇವೆ.

ವಿದೇಶಕ್ಕೆ ಶಿಕ್ಷಣಕ್ಕೆ ಹೋದ ಮಗ ಅಲ್ಲಿಯೇ ಹೇಳದೇ ಕೇಳದೆ ಮದುವೆ ಆಗಿ ಬಂದು ಕ್ಷಮೆ ಕೇಳಿದಂತೆ ನಾಟಕವಾಡಿ ವಿದೇಶಕ್ಕೆ ತಂದೆ ತಾಯಿಯರನ್ನು  ಕರೆದೊಯ್ಯುವುದಾಗಿ ಪುಸಲಾಯಿಸಿ ತಂದೆ-ತಾಯಿಯ ಭೂಮಿ ಸೀಮಿ ಮನೆ ಎಲ್ಲ ಆಸ್ತಿ ಮಾರಿ ಆ ಹಣ, ಅವರಲ್ಲಿದ್ದ ಹಣ ಪಡೆದು, ದೋಚಿ ವಿದೇಶಕ್ಕೆ ಕರೆದೊಯ್ಯುವಂತೆ ನಟಿಸಿ ವಿಮಾನ ನಿಲ್ದಾಣಕ್ಕೆ ಎರಡು ಕಾರಿನಲ್ಲಿ ಹೊರಟು ತಂದೆ ತಾಯಿಯರನ್ನು ಬೇರೆ ಕಾರ್ ಡ್ರೈವರನಿಗೆ ಮೊದಲೇ ಹಣ ನೀಡಿ ಬೇರೆಡೆ ಒಯ್ಯುವಂತೆ ಮಾಡಿ ವಿಮಾನದಿಂದ ಹಾರಿ ಹೋದ ವಿಷಯ ಓದಿದ್ದೇವೆ.

ತಂದೆ ತಾಯಿ ಎಲ್ಲ ಆಸ್ತಿ ಕಳೆದುಕೂಂಡು ಭಿಕ್ಷೆ ಬೇಡುವಂಥೆ ಮಾಡಿದ ಮಕ್ಕಳ ಕಥೆಗಳನ್ನು ಕೇಳಿರುವೆವು.  ಮಕ್ಕಳು ತಂದೆ ತಾಯಿ ಅವರನ್ನು ಮನೆಯಿಂದ ಹೊರ ಹಾಕಿದ್ದನ್ನು,  ಹೊಡೆದು ಚಿತ್ರಹಿಂಸೆ ಮಾಡಿದ್ದನ್ನು, ಕೊನೆಗೆ ಕೋಲೆ ಮಾಡಿದ ವಿಷಯವನ್ನೂ ನೋಡಿದ್ದೇವೆ. ಇದೆಲ್ಲದರ ನಡುವೆ ತಂದೆ ತಾಯಿಯವರನ್ನು  ತುಂಬಾ ಚನ್ನಾಗಿ ನೋಡಿಕೊಳ್ಳುವವರೂ ಇದ್ದಾರೆ. ಈ ಸಂಖ್ಯೆಯೇ ಹೆಚ್ಚಿಗಿದೆ. ಅವರೆಲ್ಲರಿಗೂ ಧನ್ಯವಾದಗಳು.

ತಾಯಿ ತಂದೆಯವರನ್ನು ಮತ್ತು ಹಿರಿಯರನ್ನೂ ಪ್ರೀತಿಸುವಂತೆ, ಮುಪ್ಪಾವಸ್ಥೆಯಲ್ಲಿ ಸಲಹುವಂತೇ ಈ ದಿನ ತಾಯಿ ತಂದೆಯವರನ್ನೂ ಪ್ರೀತಿಸುವ ದಿನವಾಗಲಿ. ನಾಗರಿಕ ಸಮಾಜವು ಆದರ್ಶ ಮತ್ತು ಮಾದರಿಯ ಜೀವನ ಸಾಗಿಸುವಂತಾಗಲಿ. ಎಂಬುದೇ ಈ ದಿನದ ಉದ್ದೇಶ ಎನಿಸುತ್ತದೆ.

ಬಸವರಾಜ ಮ ಹಟ್ಟಿಗೌಡರ, ಭಾರತ ಸೇವಾದಳ ಉಪದಳಪತಿ

Leave a Reply