ರಂಜಾನ್ ಹಬ್ಬ ಪ್ರಯುಕ್ತ ಬಡವರು ಮತ್ತು ಅಲ್ಪಸಂಖ್ಯಾತರಿಗೆ ರೇಷನ್ ಕಿಟ್ ವಿತರಣೆ

5 years ago

ಚಿತ್ರದುರ್ಗ: ರಂಜಾನ್  ಹಬ್ಬದ ಅಂಗವಾಗಿ  ಚಿತ್ರದುರ್ಗದ 10ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಎಲ್ಲ ಬಡವರು, ಅಲ್ಪಸಂಖ್ಯಾತ  ಸಮುದಾಯವರಿಗೆ  ಆಹಾರ  ಧಾನ್ಯಗಳನ್ನು ವಿತರಣೆ  ಮಾಡಲಾಯಿತು.

ಚಿತ್ರದುರ್ಗ  ನಗರಸಭೆ 10 ನೇ ವಾರ್ಡ್ ನ  ಸದಸ್ಯೆ ಕವಿತಾ ಬಾಳೆಕಾಯಿ ಶ್ರೀನಿವಾಸ ಮತ್ತು ದಲಿತ  ಮುಖಂಡ  ಬಾಳೆಕಾಯಿ  ಶ್ರೀನಿವಾಸ  ದಂಪತಿ  ಆಹಾರ ಧಾನ್ಯಗಳ ಕಿಟ್ ಗಳನ್ನು  ವಿತರಣೆ  ಮಾಡುವ ಮೂಲಕ ಚಿತ್ರದುರ್ಗದಲ್ಲೇ ಪ್ರಥಮ ಆಹಾರ ಧ್ಯಾನಗಳ ಕಿಟ್ ವಿತರಣೆ  ಮಾಡಿದ ನಗರ ಸಭಾ ಸದಸ್ಯರು ಎಂದು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಣೆ ಮಾಡಿ ಮಾತನಾಡಿದ ಶ್ರೀ  ಬಸವನಾಗಿದೇವ ಸ್ವಾಮೀಜಿ, ಛಲವಾದಿಮಠ, ಬಾಳೆಕಾಯಿ ಶ್ರೀನಿವಾಸ  ದಂಪತಿ  ಬಡವರು, ಅಸಹಾಯಕರನ್ನು ಗುರುತಿಸಿ ಕಿಟ್ ಗಳನ್ನು ವಿತರಣೆ  ಮಾಡುತ್ತಿರುವುದು ಮಾನವೀಯತೆಯ  ಸಂಕೇತ ಎಂದರು.

 ಶ್ರೀಮಂತಿಕೆ ಇದ್ದರು ಕೊಡುವ ಮನಸ್ಸು  ಇರಬೇಕು, ಇವರಿಗೆ ನಿರ್ಗತಿಕರು, ಬಡವರು, ಹೀಗೆ ಪ್ರತಿಯೊಬ್ಬರನ್ನು ಗುರುತಿಸಿ ಕೊಡುವಂತಹ ಮನಸ್ಸು  ಇದೆಯಲ್ಲಾ ಅದೇ ದೊಡ್ಡದು. ರಂಜಾನ್  ಹಬ್ಬದ ಸಂದರ್ಭದಲ್ಲಿ  ಆಹಾರದ ಕಿಟ್ ಗಳನ್ನು ವಿತರಣೆ ಮಾಡುವ ಮುಖಾಂತರ ಜನಸೇವೆ ಮಾಡಿರುವುದು ಸಮಯೋಚಿತವಾಗಿದೆ ಎಂದರು.

ಕರ್ನಾಟಕ  ವಿದ್ಯಾರ್ಥಿ ಸಂಘಟನೆಯ ರಾಜ್ಯ ಅಧ್ಯಕ್ಷ ಸರೋವರ್ ಬೆಂಕಿಕೆರೆ ಮಾತನಾಡಿ, ಸರ್ಕಾರ  ಕೊರೋನಾ ಸಾಂಕ್ರಮಿಕ ರೋಗ ನಿಯಂತ್ರಣಕ್ಕೆ ಲಾಕ್  ಡೌನ್ ಜಾರಿ ಮಾಡಿದೆ. ಆದರೆ ಬಡವರು, ನಿರ್ಗತಿಕರು, ವಯೋವೃದ್ಧರು ಜೀವನ ಮಾಡುವುದಾದರು ಹೇಗೆ ಎಂದು ಪ್ರಶ್ನಿಸಿದರು.

ಇಂತಹ ಸಂಕಷ್ಟದ ಸಮಯದಲ್ಲಿ ನಗರಸಭಾ ಸದಸ್ಯರು  ಜಾತಿ, ಧರ್ಮದ ತಾರತಮ್ಯವಿಲ್ಲದೇ ಬಡವರಿಗಾಗಿ ಆಹಾರ ಧಾನ್ಯಗಳ ಕಿಟ್ ವಿತರಣೆ  ಮಾಡುತ್ತಿರುವುದು  ತುಂಬಾ  ಉತ್ತಮವಾದ ಕೆಲಸ ಎಂದು ಶ್ಲಾಘಿಸಿದರು.

ಆಹಾರ ಧ್ಯಾನ ಕಿಟ್ ವಿತರಣೆ  ಸಂದರ್ಭದಲ್ಲಿ  ನಗರಸಭಾ ಸದಸ್ಯೆ ಕವಿತಾ ಶ್ರೀನಿವಾಸ ಮತ್ತು ಬಾಳಿಕಾಯಿ ಶ್ರೀನಿವಾಸ, ಕರ್ನಾಟಕ ಶಾಂತಿ & ಸೌಹಾರ್ದ  ವೇದಿಕೆ  ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್, ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ  ಹೆಚ್.ಲಕ್ಷ್ಮಣ್ ಮುಂತಾದವರು  ಹಾಜರಿದ್ದರು. ಇದೇ ಸಂದರ್ಭದಲ್ಲಿ  150ಕ್ಕೂ ಹೆಚ್ಚು  ಜನರಿಗೆ ರೇಷನ್ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

Leave a Reply