ಗುವಾಹಟಿ: ಶಾಸಕ ಸ್ಥಾನದಿಂದ ಅನರ್ಹತೆ ಪ್ರಕರಣದಲ್ಲಿ ಶಿವಸೇನೆಯ ಬಂಡಾಯ ಶಾಸಕರಿಗೆ ಸುಪ್ರೀಂ ಕೋರ್ಟ್ ಜುಲೈ 12 ರವೆರೆಗೆ ನಿರಾಳ ನೀಡಿದ ಬೆನ್ನಲ್ಲೆ ಗುವಾಹಟಿಯಿಂದ ಮುಂಬಯಿಗೆ ಶಾಸಕರು ವಾಪಸ್ಸಾಗುತ್ತಿದ್ದಾರೆ.
ಗುವಾಹಟಿಯ ರೆಸಾರ್ಟ್ ನಟ್ನಲ್ಲಿ ತಂಗಿರುವ ಶಾಸಕರೆಲ್ಲರು ಮುಂಬಯಿಗೆ ತೆರಳಲಿದ್ದಾರೆ ಎಂದು ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಏಕನಾಥ ಶಿಂಧೆ ಮಾಧ್ಯಮದವರಿಗೆ ತಿಳಿಸಿದ್ದಾರೆ. ನನ್ನ ಜೊತೆ 50 ಶಾಸಕರಿದ್ದು, ಹಿಂದುತ್ವಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನಾವೆಲ್ಲರೂ ಮುಂಬಯಿಗೆ ತೆರಳಲಿದ್ದೇವೆ ಎಂದು ಶಿಂಧೆ ತಿಳಿಸಿದ್ದಾರೆ.




