ದೆಹಲಿ: ದೇಶದ ವಿಮಾನ ನಿಲ್ದಾಣವನ್ನು 50 ವರ್ಷಗಳ ಕಾಲ ತನ್ನ ಸ್ನೇಹಿತರಿಗೆ ಗುತ್ತಿಗೆ ಕೊಟ್ಟು ‘ದೌಲತವೀರ’ ಮಾಡುತ್ತಿರುವ ಪ್ರಧಾನಿ ಮೋದಿ ಅವರು ಯುವಕರಿಗೆ ಕೇವಲ 4 ವರ್ಷಗಳ ಗುತ್ತಿಗೆಯ ನೌಕರಿ ನೀಡಿ ‘ಅಗ್ನಿವೀರ’ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
प्रधानमंत्री अपने ‘मित्रों’ को 50 साल के लिए देश के एयरपोर्ट देकर 'दौलतवीर' और युवाओं को सिर्फ़ 4 साल के ठेके पर 'अग्निवीर' बना रहे हैं।
आज देश भर में कांग्रेस पार्टी ‘अग्निपथ’ के ख़िलाफ़ #SatyagrahaForYouth कर रही है। जब तक युवाओं को इंसाफ़ नहीं मिलता, ये सत्याग्रह नहीं रुकेगा।
— Rahul Gandhi (@RahulGandhi) June 27, 2022
ಇಂದು ದೇಶದಾದ್ಯಂತ ಯುವಕರಿಗಾಗಿ ಕಾಂಗ್ರೆಸ್ ಪಕ್ಷ ಸತ್ಯಾಗ್ರಹ ಮಾಡುತ್ತಿದೆ. ಯುವಕರಿಗೆ ಎಲ್ಲಿಯವರೆಗೆ ನ್ಯಾಯ ಸಿಗುವುದಿಲ್ಲ ಅಲ್ಲಿಯವರೆಗೆ ನಮ್ಮ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಗ್ನಿವೀರ ಯೋಜನೆಯ ವಿರುದ್ಧ ಕಾಂಗ್ರೆಸ್ ಪಕ್ಷ ದೇಶದಾದ್ಯಂತ ಸತ್ಯಾಗ್ರಹ ನಡೆಸುತ್ತಿದೆ. ಇದು ದೇಶಸೇವೆಗಾಗಿ ಸೇನೆಯನ್ನು ಸೇರುವ ಯುವಕರನ್ನು ಅವಮಾನಿಸುವ ಯೋಜನೆ ಎಂದು ಆರೋಪಿಸಿದೆ.




