ಮುಂಬೈ: ಮುಂಬೈ ಕಾಲೇಜಿನ ಆವರಣದಲ್ಲಿ ಹಿಜಾಬ್, ನಿಖಾಬ್, ಬುರ್ಖಾ, ಕ್ಯಾಪ್ ಮತ್ತು ಅಂತಹುದೇ ಉಡುಗೆಗಳನ್ನು ಧರಿಸುವುದನ್ನು ನಿಷೇಧಿಸಿ ಹೊರಡಿಸಿದ್ದ ಸುತ್ತೋಲೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ, ಧಾರ್ಮಿಕ ಚಿಹ್ನೆಗಳ ಮೇಲಿನ ಕಾಲೇಜಿನ ಆಯ್ದ ನಿಷೇಧವನ್ನು ಪ್ರಶ್ನಿಸಿತು, ಏಕರೂಪದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವ ಉದ್ದೇಶವಿದ್ದರೆ ಅದು ನಿಷೇಧವನ್ನು ಏಕೆ ಇತರ ಧರ್ಮದ ಗುರುತುಗಳಾದ ತಿಲಕ ಮತ್ತು ಬಿಂದಿಗೆ ವಿಸ್ತರಿಸಲಿಲ್ಲ ಎಂದು ಪ್ರಶ್ನಿಸಿತು.
ತಿಲಕವನ್ನು ಧರಿಸಿದವರನ್ನು ಅನುಮತಿಸಲಾಗುವುದಿಲ್ಲ ಎಂದು ನೀವು ಹೇಳಬಹುದೇ? ಇದು ನಿಮ್ಮ ಸೂಚನೆಗಳ ಭಾಗವಲ್ಲವೇ? ಎಂದು ನ್ಯಾ. ಕುಮಾರ್ ಕೇಳಿದರು.
ಕಳೆದ ಜೂನ್ ತಿಂಗಳಿಂದ ನಿಷೇಧವನ್ನು ಜಾರಿಗೊಳಿಸುವ ಕಾಲೇಜಿನ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ವಿಜ್ಞಾನ ಪದವಿ ಕೋರ್ಸ್‌ನ ಎರಡನೇ ಮತ್ತು ಮೂರನೇ ವರ್ಷಕ್ಕೆ ದಾಖಲಾದ ಒಂಬತ್ತು ವಿದ್ಯಾರ್ಥಿನಿಯರು ತಮ್ಮ ಧರ್ಮವನ್ನು ಆಚರಿಸುವ ಹಕ್ಕು, ಖಾಸಗಿತನದ ಹಕ್ಕು ಮತ್ತು ಆಯ್ಕೆಯ ಹಕ್ಕು ಸೇರಿದಂತೆ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕಾಗಿ ಕಾಲೇಜಿನ ನಿರ್ದೇಶನವನ್ನು ಪ್ರಶ್ನಿಸಿದ್ದರು.
ವಿವಾದದ ಆರಂಭ ಎಲ್ಲಿಂದ?: ಮೇ 1 ರಂದು ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಯ ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜು ತನ್ನ ಅಧಿಕೃತ ವಾಟ್ಸಾಪ್ ಗುಂಪಿನಲ್ಲಿ, ಕಾಲೇಜು ಆವರಣದಲ್ಲಿ ಹಿಜಾಬ್, ನಿಖಾಬ್, ಬುರ್ಖಾ, ಕ್ಯಾಪ್ಸ್, ಬ್ಯಾಡ್ಜ್ ಗಳು ಮತ್ತು ಸ್ಟೋಲ್‌ಗಳನ್ನು ಧರಿಸುವುದನ್ನು ನಿಷೇಧಿಸುವ ಡ್ರೆಸ್ ಕೋಡ್ ಅನ್ನು ನೋಟಿಸ್ ನೀಡಿತು. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಸದರಿ ನೋಟಿಸ್ ನೀಡಿದಾಗ ವಿವಾದ ಪ್ರಾರಂಭವಾಯಿತು.
ಅರ್ಜಿದಾರರು ತಮ್ಮ ಮನವಿಯಲ್ಲಿ, ಈ ನಿರ್ದೇಶನವನ್ನು ಯಾವುದೇ ಕಾನೂನು ಅಧಿಕಾರವಿಲ್ಲದೆ ಹೊರಡಿಸಲಾಗಿದೆ. ಆದ್ದರಿಂದ ಇದು ಒಂದು ಕೆಟ್ಟ ಮತ್ತು ಅನೂರ್ಜಿತ ಕಾನೂನು ಎಂದು ವಾದಿಸಿದರು.
ವಿದ್ಯಾರ್ಥಿಗಳು ಆರಂಭದಲ್ಲಿ ಕಾಲೇಜು ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರನ್ನು ಸಂಪರ್ಕಿಸಿ, ಹಿಜಾಬ್, ನಿಖಾಬ್ ಮತ್ತು ಬುರ್ಖಾದ ಮೇಲಿನ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವಂತೆ ವಿನಂತಿಸಿಕೊಂಡರು. ತಮ್ಮ ಆಯ್ಕೆಯ ಹಕ್ಕು, ಘನತೆ ಮತ್ತು ತರಗತಿಯಲ್ಲಿ ಖಾಸಗಿತನವನ್ನು ಉಲ್ಲೇಖಿಸಿದರು. ಅವರ ಮನವಿಗಳನ್ನು ನಿರ್ಲಕ್ಷಿಸಿದಾಗ, ಅವರು ಮುಂಬೈ ವಿಶ್ವವಿದ್ಯಾಲಯದ ಕುಲಪತಿ ಮತ್ತು ಉಪಕುಲಪತಿಗಳಿಗೆ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ ವಿಷಯವನ್ನು ತಲುಪಿಸಿ ಮಧ್ಯಪ್ರವೇಶಿಸುವಂತೆ ಕೋರಿ ತಾರತಮ್ಯವಿಲ್ಲದೆ ಶಿಕ್ಷಣವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು ಮನವಿ ಮಾಡಿದರು. ಆದರೆ, ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್‌ನಲ್ಲಿ ವಿಚಾರಣೆ ಸಂದರ್ಭದಲ್ಲಿ, ಅರ್ಜಿದಾರರ ಪರ ವಕೀಲ ಅಲ್ತಾಫ್ ಖಾನ್, ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಾಗಿದೆ ಎಂದು ವಾದಿಸಲು ಕುರಾನ್‌ನ ಪದ್ಯಗಳನ್ನು ಉಲ್ಲೇಖಿಸಿದರು. ಕಾಲೇಜಿನ ಕ್ರಮ “ನಿರಂಕುಶ, ಅಸಮಂಜಸ, ದುಷ್ಟ ಮತ್ತು ವಿಕೃತ” ಎಂದು ವಾದಿಸಿದರು.
ಆದರೆ ಈ ಕ್ರಮವನ್ನು ಕಾಲೇಜು ಆಡಳಿತ ಮಂಡಳಿ ಮುಸ್ಲಿಂ ಸಮುದಾಯದ ವಿರುದ್ಧ ತಾರತಮ್ಯ ಮಾಡುವ ಯಾವುದೇ ಉದ್ದೇಶ ತಮಗಿಲ್ಲ. ಏಕರೂಪದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಲು ಮತ್ತು ಶಿಸ್ತನ್ನು ಕಾಪಾಡಿಕೊಳ್ಳಲು ಬುರ್ಖಾ ನಿಷೇಧ ಮಾಡಲಾಗಿದೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದೆ. ಕಾಲೇಜನ್ನು ಪ್ರತಿನಿಧಿಸಿದ ಹಿರಿಯ ವಕೀಲ ಅನಿಲ್ ಅಂತೂರಕರ್, ಎಲ್ಲಾ ಧರ್ಮ ಮತ್ತು ಜಾತಿಯ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಅನ್ವಯಿಸುತ್ತದೆ ಎಂದಿದ್ದಾರೆ.




