ಭುವನೇಶ್ವರ್: 169 ಸಮುದಾಯಗಳನ್ನು ರಾಜ್ಯದ ಎಸ್‌ಟಿ ಪಟ್ಟಿಗೆ ಮತ್ತು ಹಲವಾರು ಬುಡಕಟ್ಟು ಭಾಷೆಗಳನ್ನು ಸಂವಿಧಾನದ 8 ನೇ ಶೆಡ್ಯೂಲ್‌ಗೆ ಸೇರಿಸಬೇಕು ಎಂದು ಒಡಿಶಾ ವಿಧಾನಸಭೆಯ ವಿಪಕ್ಷ ನಾಯಕ ನವೀನ್ ಪಟ್ನಾಯಕ್ ಎಂದು ಒತ್ತಾಯಿಸಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಪಕ್ಷದ ಪ್ರಧಾನ ಕಚೇರಿಯಲ್ಲಿ ವಿಶ್ವ ಸ್ಥಳೀಯ ಜನರ ಅಂತರಾಷ್ಟ್ರೀಯ ದಿನವನ್ನು ಆಚರಿಸುವ ಸಮಾರಂಭದಲ್ಲಿ ಭಾಗವಹಿಸಿ ಮಾತಾಡಿದವ ಅವರು, ಬಿಜೆಡಿ ಸರ್ಕಾರ ಒಡಿಶಾದ ಎಸ್ಟಿ ಪಟ್ಟಿಗೆ 169 ಸಮುದಾಯಗಳನ್ನು ಸೇರಿಸಲು ಪ್ರಸ್ತಾವನೆಯನ್ನು ಕಳುಹಿಸಿದೆ. ಇದು ಬಹಳ ಹಿಂದಿನಿಂದಲೂ ಕೇಂದ್ರದಲ್ಲಿ ಬಾಕಿ ಉಳಿದಿದೆ ಎಂದರು.
ನಮ್ಮ ಸಂವಿಧಾನದ 8 ನೇ ಶೆಡ್ಯೂಲ್‌ನಲ್ಲಿ ಹೋ, ಮುಂಡಾರಿ, ಭೂಮಿಜ್, ಸೌರಾ ಮತ್ತು ಇತರ ಬುಡಕಟ್ಟು ಭಾಷೆಗಳನ್ನು ಸೇರಿಸಲು ಬಿಜೆಡಿ ಸರ್ಕಾರ ಕೇಂದ್ರಕ್ಕೆ ಪದೇ ಪದೇ ಮನವಿ ಮಾಡಿದೆ ಎಂದರು.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಒಡಿಶಾದ ಜನಸಂಖ್ಯೆಯಲ್ಲಿ ಸುಮಾರು 25 ಪ್ರತಿಶತದಷ್ಟು ಬುಡಕಟ್ಟು ಜನಾಂಗದವರು ಇದ್ದಾರೆ. ಒಡಿಶಾದಲ್ಲಿ 64 ಪ್ರಮುಖ ಬುಡಕಟ್ಟುಗಳು ಮತ್ತು 13 ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳು (PVTG) ವಾಸಿಸುತ್ತಿದ್ದಾರೆ ಎಂದರು.
ತಮ್ಮ ನೇತೃತ್ವದ ರಾಜ್ಯ ಸರ್ಕಾರ ಆದಿವಾಸಿಗಳ ಸಂಸ್ಕೃತಿಯನ್ನು ರಕ್ಷಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯದ ಚುಕ್ಕಾಣಿ ಹಿಡಿದಾಗ ಹಲವು ಸಂಸ್ಥೆಗಳಿಗೆ ಪ್ರಮುಖ ಬುಡಕಟ್ಟು ನಾಯಕರ ಹೆಸರನ್ನು ಇಡಲಾಗಿದೆ ಎಂದರು.
ಬುಡಕಟ್ಟು ಸಂಸ್ಕೃತಿಯನ್ನು ರಕ್ಷಿಸಲು, BJD ಸರ್ಕಾರ ವಿಶೇಷ ಅಭಿವೃದ್ಧಿ ಮಂಡಳಿಯನ್ನು ರಚಿಸಿತು. ಇದು ದೇಶದಲ್ಲಿ ಹೊಸ ಪರಿಕಲ್ಪನೆಯಾಗಿದೆ. ನಮ್ಮ ಸರ್ಕಾರ ವಿವಿಧ ವಸತಿ ಶಾಲೆಗಳಲ್ಲಿ ಬುಡಕಟ್ಟು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯ ಹಾಸ್ಟೆಲ್‌ಗಳನ್ನು ಸ್ಥಾಪಿಸಿದೆ ಎಂದರು.
ನಮ್ಮ ಬುಡಕಟ್ಟು ಸಹೋದರ ಸಹೋದರಿಯರ ಬಗ್ಗೆ ನಮಗೆ ಹೆಮ್ಮೆ ಇದೆ. ಅವರ ಅಭಿವೃದ್ಧಿ ಮತ್ತು ಅವರ ವಿಶಿಷ್ಟ ಗುರುತಿನ ರಕ್ಷಣೆಗಾಗಿ BJD ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತದೆ ಎಂದರು.




