ನಾವು ಮನುಶ್ಯರಾಗುವುದು ಯಾವಾಗ?

3 years ago

#When #do #we #become #human #manipura #harshakumarkugwe

ಮಣಿಪುರದ ಆ ಕುಕಿ ಹೆಣ್ಣುಮಕ್ಕಳಿಗೆ ಆಗಿರಬಹುದಾದ ಇನ್ನೂ ಆಗುತ್ತಿರಬಹುದಾದ ಮಾನಸಿಕ ಆಗಾತ, ಮನೋಯಾತನೆ ಯೋಚಿಸಿದರೆ ನಾವೆಂತಾ ಕ್ರೂರ ಸಮಾಜದಲ್ಲಿದ್ದೇವೆ ಅನಿಸಿಬಿಡುತ್ತದೆ. ನೂರಾರು ಕ್ರೂರಿ ಗಂಡಸರ ಗುಂಪು ಬೆತ್ತಲೆ ಮೆರವಣಿಗೆ ಮಾಡಿ ದಾರಿಯುದ್ದಕ್ಕೂ ಹಿಂಸೆ ನೀಡಿ, ಸಾಮೂಹಿಕ  **ಚಾರ ನಡೆಸಿದೆ.‌

ಈ ಗಟನೆ ನಡೆದು ಎರಡು ತಿಂಗಳಾಯಿತು. ಇದರ ಮಾಹಿತಿ ಮೋದಿ ಅಮಿತ್ ಶಾಗಳಿಗೆ ಕಂಡಿತವಾಗಿ ಇರುತ್ತದೆ.‌ ಆದರೂ ಈ ಎರಡು ತಿಂಗಳಲ್ಲಿ ಇವರಿಬ್ಬರು ವಹಿಸಿದ ಮೌನ, ಬದಲಾಗಿ ಮಣಿಪುರದಲ್ಲಿ ದೌರ್ಜನ್ಯ ನಡೆಸುವವರಿಗೇ ಕುಮ್ಮಕ್ಕು ನೀಡುತ್ತಾ ಬಂದಿರುವುದನ್ನು ನೋಡಿದಾಗ ಬಾರತ ಎಂತಹ ಅಪಾಯಕಾರಿಗಳ ಕಪಿಮುಶ್ಟಿಯಲ್ಲಿದೆ ಎಂದು ಗಾಬರಿಯಾಗುತ್ತದೆ.

ಅದು ಕೈರ್ಲಾಂಜಿ ಇರಲಿ, ಕುನಾಂವ್  ಪೋಶ್ಪುರಾ ಆಗಲಿ, ಗುಜರಾತ್ ಇರಲಿ…. ಇದೀಗ ಮಣಿಪುರ ಇರಲಿ; 
ಅದು ಜಾತಿ ಕಾರಣದ ದೌರ್ಜನ್ಯ ಇರಲಿ, ಜನಾಂಗೀಯ ದೌರ್ಜನ್ಯ ಇರಲಿ, ದರ್ಮದ ಕಾರಣದ ಹಿಂಸೆ ಇರಲಿ ಮೊದಲು ಗುರಿಯಾಗುವುದು ದುರ್ಬಲ ಸಮುದಾಯದ ಮಹಿಳೆ. ಅದರಲ್ಲೂ ಲೈಂಗಿಕ ದೌರ್ಜನ್ಯ ಎನ್ನುವುದು ಪ್ರಬಲ ಅಸ್ತ್ರವಾಗಿಬಿಡುತ್ತದೆ. ಹಿಂದುತ್ವ ಸಿದ್ದಾಂತಕ ರೂವಾರಿ ಸಾರ್ವರ್ಕರ್ ಸಹ ಲೈಂಗಿಕ ದೌರ್ಜನ್ಯವನ್ಜು ಒಂದು ಸಾದನವಾಗಿ ಬಳಸಬೇಕು ಎಂದು ಪ್ರತಿಪಾದಿಸಿದ್ದ.‌

ನಾವು ಮನುಶ್ಯರಾಗುವುದು ಯಾವಾಗ?


– ಹರ್ಶಕುಮಾರ್ ಕುಗ್ವೆ, ಪತ್ರಕರ್ತರು

( ಈ ಬರಹದಲ್ಲಿ ಉದ್ದೇಶಪೂರ್ವಕವಾಗಿ ಮಹಾಪ್ರಾಣ ಅಕ್ಷರಗಳನ್ನು ಬಳಸಿಲ್ಲ)

Leave a Reply