ಕಳೆದ ನಾಲ್ಕು ವರ್ಷದಿಂದ ಉಚಿತವಾಗಿ ಅಕ್ಕಿಯನ್ನು ಕೊಟ್ಟು ಎಲ್ಲವನ್ನು ಕೊಟ್ಟೆ ಎನ್ನುವ ರೀತಿಯಲ್ಲಿ ಚುನಾವಣಾ ಪ್ರಚಾರದ ಭಾಷಣದಲ್ಲಿ ಹೇಳುತ್ತಾ ಪುಣ್ಯವನ್ನ ಕಟ್ಟಿಕೊಳ್ಳಿ, ಮತವನ್ನು ನೀಡಿ ಎಂದು ಹೇಳುವ ಪ್ರಧಾನಿಗಳು ಕಳೆದ ಹತ್ತು ವರ್ಷದಲ್ಲಿ ಜನರಿಂದ ಕಸಿದುಕೊಂಡಿರುವುದನ್ನು ಹೇಳಬೇಕಲ್ಲವೇ?
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಅಕ್ಕಿಯನ್ನು ಕೊಟ್ಟು ದೊಡ್ಡ ಸಹಾಯವನ್ನು ಮಾಡಿದೆ ಎಂದು ಹೇಳುವ ಪ್ರಧಾನಿಗಳಿಗೆ ನೆನಪಿರಲಿ ಕರ್ನಾಟಕದಲ್ಲಿ ನೀವು ಪ್ರಧಾನಿಯಾಗುವ ಮೊದಲೇ 2013ರಲ್ಲಿ ಅನ್ನಭಾಗ್ಯ ಯೋಜನೆ, ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿದ ಮರು ಘಳಿಗೆ ಕಾರ್ಯಕ್ರಮವನ್ನು ಜಾರಿಗೊಳಿಸಿದರು.
ಈ ದೇಶದಲ್ಲಿ ಲಕ್ಷಾಂತರ ಮಂದಿಗೆ ಉದ್ಯೋಗವನ್ನು ಕೊಟ್ಟವರಿದ್ದಾರೆ. ಹಸಿರು ಕ್ರಾಂತಿ ಮಾಡಿದವರಿದ್ದಾರೆ. ಕ್ಷೀರಕ್ರಾಂತಿ ಮಾಡಿದ್ದಾರೆ. ಕೈಗಾರಿಕಾ ಕ್ರಾಂತಿ ಮಾಡಿದ್ದಾರೆ. ನೀಲಿ ಕ್ರಾಂತಿ ಮಾಡಿದ್ದಾರೆ. ಆರ್ಥಿಕ ಕ್ರಾಂತಿ ಮಾಡಿದ್ದಾರೆ. ಅಧಿಕಾರ ವಿಕೇಂದ್ರೀಕರಣದ ಕ್ರಾಂತಿ ಮಾಡಿದ್ದಾರೆ. ಉಳುವವನಿಗೆ ಭೂಮಿಯನ್ನು ಕೊಟ್ಟಿದ್ದಾರೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ನೀವು ಪ್ರಧಾನಿಯಾಗುವ ಮೊದಲೇ ಈ ದೇಶದಲ್ಲಿ ಅನೇಕ ನೆರವುಗಳನ್ನು ದೇಶದ ಜನರಿಗೆ ಕಾಲಕಾಲಕ್ಕೆ ಒದಗಿಸಿ ಕೊಟ್ಟಿದ್ದಾರೆ. ಅದರಿಂದಾಗಿಯೇ ದೇಶದಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದೆ .ಬಡವರ ಬದುಕು ಬದಲಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳಾಗಿದೆ. ಸ್ವಾಭಿಮಾನದಿಂದ ಬದುಕುವಂತಹ ವ್ಯವಸ್ಥೆ ನಿರ್ಮಾಣವಾಗಿದೆ.
ಅಕ್ಕಿಯನ್ನು ಕೊಟ್ಟು ಈ ದೇಶದಲ್ಲಿ ಇಂತಹ ಕಾರ್ಯವನ್ನು ಯಾರೂ ಮಾಡಿಲ್ಲ ಎಂದು ಪ್ರಚಾರವನ್ನು ಪಡೆಯುವ ಮೊದಲು ಕಳೆದ ಹತ್ತು ವರ್ಷದಲ್ಲಿ ನಿಮ್ಮ ಆರ್ಥಿಕ ಮತ್ತು ಉದ್ಯೋಗದ ನೀತಿ ಇತರೆ ಕಾರಣಗಳಿಂದ ರಾಷ್ಟ್ರದ ಜನತೆ ಕಳೆದುಕೊಂಡದ್ದು ಎಷ್ಟು ಎನ್ನುವ ಲೆಕ್ಕವನ್ನು ತಮಗೆ ತಿಳಿಸಿ ಕೊಡಬೇಕಿದೆ.
ಜಿಎಸ್‌ಟಿ ತೆರಿಗೆ ಪದ್ಧತಿಯಿಂದ ರಾಷ್ಟ್ರದಲ್ಲಿ ಉದ್ಯಮಿಗಳು ಮತ್ತು ಸಾಮಾನ್ಯ ಜನರು ಅನುಭವಿಸುತ್ತಿರುವ ಕಷ್ಟಗಳು ಎಷ್ಟು ಎಂದು ಅರಿವಿದೆಯೇ? ದುಡಿಯುವ ಹಣವೆಲ್ಲವೂ ತೆರಿಗೆಯ ರೂಪದಲ್ಲಿ ಖಜಾನೆಯನ್ನ ಸೇರುತ್ತದೆ ಬಡವರ ಕಿಸೆಗಳು ಖಾಲಿಯಾಗುತ್ತಿದೆ.
ಬ್ಯಾಂಕುಗಳಲ್ಲಿ ಕನಿಷ್ಠ ಪ್ರಮಾಣದಲ್ಲಿ ಖಾತೆಗಳಲ್ಲಿ ಹಣ ಇಲ್ಲವೆಂದು ಹಾಕಿರುವ ದಂಡ. ಹೆಚ್ಚು ಬಾರಿ ಎಟಿಎಂ ಅಲ್ಲಿ ಹಣವನ್ನ ತೆಗೆದರೆಂಬ ಕಾರಣಕ್ಕೆ ವಿಧಿಸಿರುವ ದಂಡ. ಬೇರೆ ಬೇರೆ ಕಾರಣಗಳಿಗೆ ಹಾಕಿರುವಂತಹ ದಂಡದ ಪ್ರಮಾಣ 35000 ಕೋಟಿ.
ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಅಡಿಗೆ ಅನಿಲಗಳ ಮೇಲೆ ಸೆಸ್ ರೂಪದಲ್ಲಿ ಸಂಗ್ರಹಿಸಿರುವ ಹಣ ಜನರಿಂದ ಪಡೆದುಕೊಂಡದ್ದು ಇದರ ಮೊತ್ತ 32 ಲಕ್ಷ ಕೋಟಿ ಬೆಲೆಗಳು ಏರಿಕೆಯಿಂದ ಜನಗಳು ಅನುಭವಿಸಿದ ಯಾತನೆ ಗೊತ್ತಿಲ್ಲವೇ?
ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೇರಿ ಜನತೆ ತಾವು ದುಡಿಯುವ ಹಣಕ್ಕಿಂತ ಹೆಚ್ಚಿನ ಹಣವನ್ನು ಖರೀದಿಗಾಗಿ ನೀಡಬೇಕಾಗಿ ಸಾಲವನ್ನ ಮಾಡುತ್ತಿರುವ ವಿಚಾರ ತಿಳಿದಿದೆಯೇ?
ಕೊರೊನಾ ಸಂದರ್ಭದಲ್ಲಿ ತಮ್ಮ ರೋಗಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ನೀಡಿದಂತಹ ಹಣದ ಮೊತ್ತ ತಿಳಿದಿದೆಯೇ? ಆಸ್ಪತ್ರೆಗಳಲ್ಲಿ ಔಷಧಿ ಮತ್ತು ಚಿಕಿತ್ಸೆಗೆ ವಿಧಿಸಿರುವ ಬೆಲೆಗಳ ಪರಿಚಯ ತಮಗೆ ತಿಳಿದಿದೆಯೇ?
ದಿನದಿಂದ ದಿನಕ್ಕೆ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಾ ಯುವ ಜನರು ಆತಂಕದಿಂದ ಬದುಕನ್ನ ಸಾಗಿಸುತ್ತಾ ಆತ್ಮ ವಿಶ್ವಾಸವನ್ನು ಕಳೆದುಕೊಂಡು ನೂರಾರು ಮಂದಿ ಆತ್ಮಹತ್ಯೆಯ ಹಾದಿಯನ್ನ ಹಿಡಿಯುತ್ತಿರುವುದು ನಿಮ್ಮ ಕಿವಿಗೆ ಬಿದ್ದಿದೆಯೇ?
ರೈತ ವಿರೋಧಿ ಮಸೂದೆಗಳನ್ನ ತಂದು ಇದರ ವಿರುದ್ಧ ಹೋರಾಟ ಮಾಡಿ 700ಕ್ಕೂ ಹೆಚ್ಚು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡದ್ದು ತಮಗೆ ಏನು ಅನಿಸಲೇ ಇಲ್ಲವೇ?
ಹೀಗೆ ಪಟ್ಟಿ ಮಾಡುತ್ತಾ ಹೋದರೆ ಕೊಟ್ಟಿರುವುದಕ್ಕಿಂತ ಕಿತ್ತುಕೊಂಡಿರುವುದು ಮತ್ತು ಜನರ ಬದುಕನ್ನ ಮತ್ತಷ್ಟು ಕಷ್ಟದ ದಾರಿಗೆ ದೂಡಿದ್ದು ನಿಮ್ಮ ಸರ್ಕಾರದ ಪ್ರಮುಖ ಸಾಧನೆಗಳಾಗಿದೆ ಅಕ್ಕಿಯನ್ನು ಕೊಟ್ಟೆ ಎಂದು ಹೇಳುವ ನೀವು ಇದನ್ನು ದೇಶದ ಖಜಾನೆಯ ಹಣದಿಂದ ಕೊಟ್ಟಿರುವುದು ಖಜಾನೆಯ ಹಣ ತುಂಬುತ್ತಿರುವುದು ವಿಧಿಸಿರುವ ಅವೈಜ್ಞಾನಿಕ ಜಿಎಸ್ಟಿ ತೆರಿಗೆ ರೂಪದಿಂದ ಎಂದು ಹೇಳಬೇಕಲ್ಲವೇ?
- ಕೆ ಎಸ್ ನಾಗರಾಜ್, ಬೆಂಗಳೂರು




