ಕನ್ನಡ ಭಾಷೆ ಬೆಳೆಸಲು ವಿ.ಸೋಮಣ್ಣ ಪ್ರತಿಷ್ಟಾನ ಕಟ್ಟಿಬದ್ದ ಶೈಲಜ ಸೋಮಣ್ಣ

4 years ago

ಬೆಂಗಳೂರು: ಗೋವಿಂದರಾಜನಗರ ವಿಧಾನಸಭೆ, ಗೋವಿಂದರಾಜನಗರ ವಾರ್ಡ್ ಪಾಲಿಕೆ ಸೌಧ ಸಭಾಂಗಣದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮಾತಾಡ್ ಮಾತಾಡ್ ಕನ್ನಡ ಮತ್ತು ಕನ್ನಡಕ್ಕಾಗಿ ನಾವು ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು..

ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮತ್ತು ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜ ವಿ.ಸೋಮಣ್ಣ ಹಾಗೂ ಗೋವಿಂದರಾಜನಗರ ವಾರ್ಡ್ ನ ಮಾಜಿ ಬಿ.ಬಿ.ಎಂ.ಪಿ. ಸದಸ್ಯ ಕೆ.ಉಮೇಶ್ ಶೆಟ್ಟಿ ಮತ್ತು ಮೂಡಲಪಾಳ್ಯ ವಾರ್ಡ್ ಮಾಜಿ ಬಿ.ಬಿ.ಎಂ.ಪಿ. ಸದಸ್ಯ ದಾಸೇಗೌಡ ಹಾಗೂ  ಮಂಡಲ ಬಿ.ಜೆ.ಪಿ. ಅಧ್ಯಕ್ಷ ವಿಶ್ವನಾಥಗೌಡ, ಕನ್ನಡಪರ ಹೋರಾಟಗಾರ ಫಾಲನೇತ್ರ ದೀಪ ಬೆಳಗಿಸಿ ಉದ್ಘಾಟಿಸಿದರು.

ಶೈಲಜ ಸೋಮಣ್ಣ ಮಾತನಾಡಿ, ಕನ್ನಡಕ್ಕಾಗಿ ನಾವು ಅಭಿಯಾನ ಅಂಗವಾಗಿ ವಸತಿ ಸಚಿವ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ಬಳಸೋಣ, ಕನ್ನಡ ಉಳಿಸೋಣ ಅಭಿಯಾನ ಆರಂಭಿಸಲಾಗಿದೆ. ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆ ಮಾತನಾಡಲು ಸುಲಭ ಮತ್ತು ಬಹಳ ಬೇಗನೆ ಕಲಿಯುವ ಭಾಷೆಯಾಗಿದೆ. ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿದೆ . ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮರು, ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬಂತೆ ಪ್ರತಿ ನಿತ್ಯ ಕನ್ನಡ ಭಾಷೆ ಬಳಸೋಣ ಎಂದರು.

ಸಿ.ಸೋಮಶೇಖರ್ ಮಾತನಾಡಿ, ಕನ್ನಡ ಭಾಷೆ ಹೃದಯದಿಂದ ಆಡುವ ಭಾಷೆ. ಇಂದಿನ ಮಕ್ಕಳಿಗೆ ಕನ್ನಡ ಭಾಷೆಯ ಬಗ್ಗೆ ಅರಿವು ಇಲ್ಲ, ಜ್ಞಾನವು ಇಲ್ಲ. ತಂದೆ ತಾಯಂದಿರು ತಮ್ಮ ಮಕ್ಕಳಿಗೆ ನಾಡಿನ ಇತಿಹಾಸದ ಬಗ್ಗೆ ತಿಳಿ ಹೇಳಿಕೊಡಬೇಕು. ಇಂದಿನಿಂದ ಕರ್ನಾಟಕದಲ್ಲಿ ಇರುವ ಪ್ರತಿಯೊಬ್ಬ ನಾಗರಿಕರು ಪ್ರತಿ ದಿನ ಕನ್ನಡ ಭಾಷೆಯಲ್ಲಿ ಮಾತನಾಡುತ್ತೇನೆ ಎಂಬ ಪ್ರತಿಜ್ಞೆ ಮಾಡಬೇಕು ಎಂದರು.

ಜೋಗಿಲ ಸಿದ್ದರಾಜುರವರ ತಂಡದಿಂದ ಜಾನಪದ ಗೀತೆ ಗಾಯನ ಮತ್ತು ಮಕ್ಕಳಿಂದ ಭರತನಾಟ್ಯ ಪ್ರದರ್ಶನ, ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.

Leave a Reply