ಹಿಂದೂ ಧರ್ಮಕ್ಕೆ ಮತಾಂತರ ಹೊಂದಿದ ಇಂಡೋನೇಷ್ಯಾ ಮೊದಲ ಅಧ್ಯಕ್ಷರ ಪುತ್ರಿ

4 years ago

ಬುಲೆಲೆಂಗ್: ಇಂಡೋನೇಷ್ಯಾದ ಮೊದಲ ಅಧ್ಯಕ್ಷ, ಸುಕರ್ನೊ ಮಗಳು ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಬಾಲಿಯ ಬುಲೆಲೆಂಗ್ ರೀಜೆನ್ಸಿಯಲ್ಲಿರುವ ಸುಕರ್ನೊ ಸೆಂಟರ್ ಹೆರಿಟೇಜ್ ಪ್ರದೇಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಕ್ಮಾವತಿ ಸುಕರ್ಣಪುತ್ರಿ ತಮ್ಮ 70ನೇ ಜನ್ಮದಿನಾಚರಣೆಯಂದು ‘ಸುಧಿ ವಡಾನಿ’ ಎಂಬ ಆಚರಣೆಯಲ್ಲಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ವರದಿಯಾಗಿದೆ.

ಬಾಲಿಯಲ್ಲಿ ಆಚರಣೆಯಲ್ಲಿರುವ ಹಿಂದೂ ಧರ್ಮ ಭಾರತದಲ್ಲಿ ಅಸ್ತಿತ್ವದಲ್ಲಿರುವ ಹಿಂದೂ ಧರ್ಮಕ್ಕಿಂತ ಭಿನ್ನವಾಗಿದೆ. ಸುಕ್ಮಾವತಿ ಅವರ ನಿರ್ಧಾರದ ಕುರಿತು ಮಾಹಿತಿ ನೀಡಿರುವ ಸುಕ್ಮಾವತಿಯವರ ವಕೀಲರು, ಸುಕ್ಮಾವತಿ ಸುಕರ್ಣಪುತ್ರಿ ಹಿಂದೂ ಧರ್ಮಶಾಸ್ತ್ರದ ಆಚರಣೆಗಳು ಮತ್ತು ಸಿದ್ಧಾಂತಗಳ ಕುರಿತು ವ್ಯಾಪಕ ಜ್ಞಾನ ಹೊಂದಿದ್ದಾರೆ ಎಂದಿದ್ದಾರೆ.

2018ರಲ್ಲಿ ಇಸ್ಮಾಂ ಧರ್ಮಕ್ಕೆ ಸುಕ್ಮಾವತಿ ಸುಕರ್ಣಪುತ್ರಿ ಅವಹೇಳನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರಡಿಯಲ್ಲಿ ದೂರನ್ನು ಕೂಡ ದಾಖಲಿಸಲಾಗಿತ್ತು. ಕೆಲವು ವರದಿಗಳ ಪ್ರಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕ್ಮಾವತಿ ಕ್ಷಮೆಕೋರಿದ್ದರು.

Leave a Reply