ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ಗಳಿಸುತ್ತೇವೆ ಎಂದು ಕೆಲವು ಮಾಧ್ಯಮಗಳ ಮೂಲಕ ಚುನಾವಣಾ ಪೂರ್ವ ಸಮೀಕ್ಷೆಗಳೆಂಬ ನಾಟಕವನ್ನು ಆಡಿದರೂ ಸಹ ರಾಷ್ಟ್ರದ ಜನತೆ ಸತ್ಯವನ್ನು ಅರಿತು ಇವರಿಗೆ ಕಡಿಮೆ ಸ್ಥಾನಗಳನ್ನ ನೀಡುವುದರ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಈ ಹಿನ್ನೆಲೆಯಲ್ಲಿ ಬಿಜೆಪಿ ವಿಚಾರಧಾರೆಯನ್ನು ಒಪ್ಪಿರುವ ಅವರ ಬೆಂಬಲಿಗರು ಬಿಜೆಪಿಯನ್ನ ಹೆಚ್ಚಿನ ಸ್ಥಾನದಲ್ಲಿ ಗೆಲ್ಲಿಸದ ಮತದಾರರಿಗೆ ಅನೇಕ ರೀತಿಯ ಟೀಕೆಗಳನ್ನು ಮಾಡುತ್ತಾ ತಮ್ಮ ಆಕ್ರೋಶವನ್ನ ಹೊರ ಹಾಕುತ್ತಿದ್ದಾರೆ. ಇದು ಅವರ ಹತಾಶೆಯ ಸಂಕೇತ. ಇವರಿಗೆ ಪ್ರಜಾಪ್ರಭುತ್ವದ ಆಶಯಗಳ ಅರಿವೇ ಇರುವುದಿಲ್ಲ.
ಈ ದೇಶದಲ್ಲಿ ಗೌತಮ ಬುದ್ಧರ ವಿಚಾರವನ್ನು ಒಪ್ಪಿಕೊಂಡಿರುವ ಹಿಂದುಗಳು ಇದ್ದಾರೆ, ಬಸವಣ್ಣನವರ ವಿಚಾರಧಾರೆಯನ್ನು ಒಪ್ಪಿಕೊಂಡಿರುವ ಹಿಂದುಗಳು ಇದ್ದಾರೆ, ಸ್ವಾಮಿ ವಿವೇಕಾನಂದರ ವಿಚಾರಗಳನ್ನ ಒಪ್ಪಿಕೊಂಡಿರುವ ಹಿಂದುಗಳು ಇದ್ದಾರೆ, ನಾರಾಯಣ ಗುರುಗಳ ವಿಚಾರಗಳನ್ನ ಅನುಸರಿಸುವ ಹಿಂದುಗಳು ಇದ್ದಾರೆ. ಅದೇ ರೀತಿಯಲ್ಲಿ ಪ್ರಗತಿಪರರು ಸೂಚಿಸಿದಂತಹ ಅನೇಕ ವಿಚಾರಧಾರೆಗಳನ್ನು ಒಪ್ಪಿದವರು ಇದ್ದಾರೆ. ಮೂಢನಂಬಿಕೆ ಮತ್ತು ಮೌಡ್ಯಗಳನ್ನ ಧಿಕ್ಕರಿಸಿದಂತಹ ಕುವೆಂಪುರವರ ಆರಾಧಕರು ಇದ್ದೇವೆ. ಇವರೆಲ್ಲರೂ ಸಹ ಹಿಂದುಗಳೇ ಆಗಿರುತ್ತಾರೆ. ಹಿಂದೂ ಎಂದರೆ ಕೇವಲ ಬಿಜೆಪಿಯ ಬೆಂಬಲಿಗರಲ್ಲ ಅಥವಾ ಅವರ ವಿಚಾರಗಳನ್ನು ಒಪ್ಪುವರು ಮಾತ್ರವೇ ಅಲ್ಲ, ಬಿಜೆಪಿ ಹೇಳುವ ವಿಚಾರಕ್ಕೂ ಸ್ವಾಮಿ ವಿವೇಕಾನಂದರು ಹೇಳುವಂತಹ ವಿಚಾರಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕೆಂಬ ಕಾನೂನು ಇಲ್ಲ ಅಥವಾ ಎಲ್ಲ ಹಿಂದುಗಳು ಬಿಜೆಪಿಯ ಗುಲಾಮರಲ್ಲ ಅಥವಾ ಮೋದಿಯವರ ಆರಾಧಕರು ಆಗಿರಬೇಕಾಗಿಲ್ಲ.
ಮಾನವೀಯತೆ ಮನುಷ್ಯತ್ವ ಸಾಮರಸ್ಯ ಇವುಗಳನ್ನು ಬಯಸುವ ಮನಸ್ಸುಗಳು ಇರುತ್ತವೆ.
ಇನ್ನು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನ ನೀಡಿದರು ಸಹ ನಿರೀಕ್ಷಿತ ಪ್ರಮಾಣದಲ್ಲಿ ಮತ ನೀಡಿರುವುದಿಲ್ಲ. ಆ ಕಾರಣಕ್ಕೆ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸಬೇಕೆಂದು ಕೆಲವರು ಶಾಸಕರು ಮತ್ತು ಮಂತ್ರಿಗಳು ಹೇಳುತ್ತಿದ್ದಾರೆ. ಮತದಾರರು ಗ್ಯಾರಂಟಿ ಯೋಜನೆಗಳನ್ನ ಪಡೆದುಕೊಂಡು ಎಲ್ಲ ಚುನಾವಣೆಗಳಲ್ಲಿ ನೀವು ಹೇಳಿದವರಿಗೆ ಮತವನ್ನ ಹಾಕುತ್ತೇವೆ ಎಂದು ಪ್ರಮಾಣ ಪತ್ರವನ್ನೇ ನೀಡಿರುವುದಿಲ್ಲ. ಮತದಾರರು ಯಾರು ಯಾರ ಗುಲಾಮರಲ್ಲ. ಅವರಿಗೆ ಅವರಿಗೆ ಆದಂತಹ ಸ್ವಂತ ಅಭಿಪ್ರಾಯಗಳಿರುತ್ತದೆ.
ನಿಲ್ಲಿಸಬೇಕಾದದ್ದು ಗ್ಯಾರಂಟಿಗಳನ್ನಲ್ಲ ಜನರ ವಿಶ್ವಾಸವನ್ನು ಗಳಿಸುವಲ್ಲಿ ವಿಫಲರಾಗಿರುವ ಗೂಟದ ಕಾರಿನಲ್ಲಿ ಓಡಾಡುವ ನಾಯಕರುಗಳ ಕಾರುಗಳ ಓಡಾಟವನ್ನ.
2023ರ ಚುನಾವಣೆಯಲ್ಲಿ ಗ್ಯಾರಂಟಿಗಳನ್ನ ನೀಡಿರುವುದು ವಿಧಾನಸಭೆಯಲ್ಲಿ ಬಹುಮತವನ್ನು ಕೊಡಿ ಎಂದು ಮಾತ್ರವೇ ಹೊರತು ಐದು ವರ್ಷಗಳಲ್ಲಿ ನಡೆಯುವ ಎಲ್ಲಾ ಚುನಾವಣೆಯಲ್ಲೂ ನಮಗೆ ಮತ ನೀಡಿ ಎಂದು ಯಾರೂ ಹೇಳಿರುವುದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಜನ ನಮ್ಮ ಗ್ಯಾರಂಟಿಗಳ ಬಗ್ಗೆ ಭರವಸೆಯನ್ನ ಇಟ್ಟು ಬಹುಮತವನ್ನು ಕೊಟ್ಟಿರುತ್ತಾರೆ. ಈ ಬಹುಮತವನ್ನು ಪಡೆದುಕೊಂಡಿರುವ ಸರ್ಕಾರ ಐದು ವರ್ಷಗಳ ಕಾಲ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನ ನೀಡಲೇಬೇಕು. ಏಕೆಂದರೆ ಜನರು ನೀಡಿರುವ 136 ಸ್ಥಾನಗಳ ನಂಬಿಕೆಗೆ ದ್ರೋಹವನ್ನು ಮಾಡುವ ಹಾಗಿಲ್ಲ.
ಲೋಕಸಭಾ ಚುನಾವಣೆಯ ವಿಚಾರಗಳು ಮತ್ತು ಅಭ್ಯರ್ಥಿಗಳು ಇವುಗಳ ಹಿನ್ನೆಲೆಯಲ್ಲೂ ಸಹ ಚುನಾವಣೆಯ ಫಲಿತಾಂಶಗಳು ಏರುಪೇರು ಆಗುತ್ತದೆ. 1984 ರಲ್ಲಿ ರಾಮಕೃಷ್ಣ ಹೆಗಡೆಯವರು ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಆಗಿದ್ದರು. ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕೇವಲ ನಾಲ್ಕು ಸ್ಥಾನಗಳನ್ನಷ್ಟೇ ಗಳಿಸಿಕೊಂಡರು. ಆದರೆ ಅವರು ವಿಧಾನಸಭೆಯನ್ನ ಈ ಹಿನ್ನೆಲೆಯಲ್ಲಿ ವಿಸರ್ಜಿಸಿ ಚುನಾವಣೆಯನ್ನು ನಡೆಸಿದಾಗ 139 ಸ್ಥಾನಗಳನ್ನು ವಿಧಾನಸಭೆಯಲ್ಲಿ ನೀಡಿದರು. ಈ ರೀತಿಯಲ್ಲಿ ಲೋಕಸಭೆ ಮತ್ತು ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಇಲ್ಲಿ ಫಲಿತಾಂಶಗಳು ಭಿನ್ನವಾಗಿರುತ್ತದೆ. ಮತದಾರರ ಆಯ್ಕೆಗಳು ಸಹ ಬೇರೆ ಸ್ವರೂಪದಲ್ಲಿ ಇರುತ್ತದೆ. ಸ್ಥಳೀಯ ವಿಚಾರಗಳು ಪ್ರಸ್ತುತವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಯಾರು ಸಹ ಅವಿಶ್ವಾಸದಿಂದ ಆತುರದ ಮಾತುಗಳನ್ನ ಆಡುವ ಅವಶ್ಯಕತೆ ಇಲ್ಲ.
2019ರಲ್ಲಿ ಒಂದು ಸ್ಥಾನವನ್ನು ನೀಡಿದ ಮತದಾರ ಒಂಬತ್ತು ಸ್ಥಾನಗಳನ್ನ ನೀಡುವುದರ ಜೊತೆಗೆ ಮತಗಳ ಪ್ರಮಾಣವನ್ನು ಹೆಚ್ಚು ಮಾಡಿರುವುದರಿಂದ ಗ್ಯಾರಂಟಿ ಯೋಜನೆಗಳ ಪರಿಣಾಮ ಇರುವುದರಿಂದಲೇ ಬಡವರು ಮತ್ತು ಹಿಂದುಳಿದ ವರ್ಗದವರು ಹಾಗೂ ಶ್ರಮದ ಜನರು ಬದುಕುವ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಮತವನ್ನ ಗಳಿಸಿದ್ದಾರೆ. ಹೊಟ್ಟೆ ತುಂಬಿದ ಜನ ಮತ್ತು ಧರ್ಮದ ಆಧಾರದ ಮೇಲೆ ನಿರ್ಣಯಗಳನ್ನ ಮಾಡುವ ಕೆಲವು ಮತದಾರರು ಭಿನ್ನ ಅಭಿಪ್ರಾಯವನ್ನು ನೀಡಿರುತ್ತಾರೆ.
ಒಂದು ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತ ಬರಲಿಲ್ಲ ಎಂದು ಗ್ಯಾರೆಂಟಿಗಳನ್ನು ನಿಲ್ಲಿಸುತ್ತೇವೆ ಎನ್ನುವ ಮಾತುಗಳು ಪ್ರಬುದ್ಧತೆಯ ಪ್ರಲಾಪಗಳಲ್ಲ. ಅದು ಒಂದು ರೀತಿಯಲ್ಲಿ ಸಿಟ್ಟಿನ ಅಭಿಪ್ರಾಯಗಳಾಗಿರುತ್ತದೆ. ಪ್ರಜಾಪ್ರಭುತ್ವದಲ್ಲಿ ಮತದಾರರು ಎಲ್ಲರೂ ಸಹ ಸ್ವತಂತ್ರರು. ಸೂರ್ಯ ಹುಟ್ಟದಿದ್ದರೆ ಮಳೆ ಬಾರದಿದ್ದರೆ ಗಾಳಿ ಬೀಸದಿದ್ದರೆ ರೈತ ಬೆಳೆಯನ್ನ ಬೆಳೆಯದಿದ್ದರೆ ಆಸ್ಪತ್ರೆಗಳು ಕರ್ತವ್ಯ ನಿರ್ವಹಿಸದಿದ್ದರೆ ಆಗ ಮಾತ್ರ ಜನ ಆತಂಕ ಪಡುತ್ತಾರೆ. ಯಾರು ಏನು ಕೊಡಲಿ ಬಿಡಲಿ ಜನರು ಬದುಕಿಯೇ ಬದುಕುತ್ತಾರೆ. ಯಾರನ್ನು ನಂಬಿ ಸಹ ಜನರು ಜೀವನವನ್ನು ನಡೆಸುವುದಿಲ್ಲ. ಜನ ಜೀವನವನ್ನು ನಡೆಸುವುದು ತಮ್ಮ ದುಡಿಮೆ ಮತ್ತು ಬೆವರನ್ನು ನಂಬಿ. ಈ ಒಂದು ಸತ್ಯವನ್ನು ಅರಿತು ಮಾತನಾಡಬೇಕು.
ಮೋದಿರವರು ಪ್ರಧಾನಿಯಾಗುವ ಮುನ್ನವು ಈ ದೇಶದಲ್ಲಿ ಶಾಲೆಗಳಿತ್ತು ಆಸ್ಪತ್ರೆಗಳಿತ್ತು ಹೊಲಗದ್ದೆಗಳಲ್ಲಿ ಕೃಷಿಕರು ದುಡಿಯುತ್ತಿದ್ದರು ಕಾರ್ಖಾನೆಗಳು ಸದ್ದು ಮಾಡುತ್ತಿತ್ತು ಕಾರ್ಮಿಕರು ಬೆವರು ಹರಿಸುತ್ತಿದ್ದರು ಸೈನಿಕರು ದೇಶ ಕಾಯುತ್ತಿದ್ದರು ತೆರಿಗೆ ಕಟ್ಟುತ್ತಿದ್ದರು ಮಳೆ ಬರುತ್ತಿತ್ತು ಸೂರ್ಯ ಕಾಲ ಕಾಲಕ್ಕೆ ಉದಯಿಸುತ್ತಿದ್ದ ಗಾಳಿಯು ಬೀಸುತ್ತಿತ್ತು ಮರ-ಗಿಡಗಳು ಇತ್ತು ನದಿಗಳು ಹರಿಯುತ್ತಿತ್ತು ಸಮುದ್ರವೂ ತನ್ನ ಆರ್ಭಟವನ್ನು ಮಾಡುತ್ತಲೇ ಇತ್ತು. ಹೀಗಾಗಿ ಇವರು ಬರುವ ಮುನ್ನ ಜನರೇನು ಹಸಿವಿನಿಂದ ಇರಲಿಲ್ಲ ಇವರು ಬಂದ ಮೇಲಷ್ಟೇ ಎಲ್ಲವೂ ಆಗಲಿಲ್ಲ ಹಾಗಾಗಿ ಆಕಾಶವೇ ಕಳಚಿ ಬಿದ್ದಂತೆ ವರ್ತಿಸುವುದು ಬೇಕಿಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




