ಬೆಂಗಳೂರು: ಶ್ರೀ ಲಲಿತ ಕಲಾನಿಕೇತನ 20ನೇ ವಾರ್ಷಿಕೋತ್ಸವ ಮತ್ತು ಆಂಗಿಕ ನೃತ್ಯೋತ್ಸವ, ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.
ಶಾಸಕ ದಿನೇಶ್ ಗುಂಡೂರಾವ್,ವೆಂಕಟೇಶ್ವರ ನಾಟ್ಯ ಮಂದಿರದ ನಿರ್ದೇಶಕಿ ರಾಧ ಶ್ರೀಧರ್, ರಾಜರಾಜೇಶ್ವರಿ ಕಲಾನಿಕೇತನದ ವೀಣಾ ಮೂರ್ತಿ ವಿಜಯ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕಿ ಬನಶಂಕರಿ ವಿ.ಅಂಗಡಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ನವೀನ್ ಕುಮಾರ್, ಶಶಿಕುಮಾರ್ ಹಾಗೂ ಲೇಖಕಿ ಸಂಧ್ಯಾ ಶರ್ಮ, ಶ್ರೀ ಕಲಾ ನಿಕೇತನದ ಪ್ರಧಾನ ಕಾರ್ಯದರ್ಶಿ ರೇಖಾ ಜಗದೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ದಿನೇಶ್ ಗುಂಡೂರಾವ್ ಮಾತನಾಡಿ, ಭಾರತಕ್ಕೆ ಸ್ವಾತಂತ್ಯ್ರ ಲಭಿಸಿ 75 ವರ್ಷಗಳು ಸಂದಿದೆ. ನಮ್ಮ ಹಿರಿಯರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಭಾರದ ದೇಶ ಹಲವಾರು ಧರ್ಮ, ಜಾತಿಗಳು ಭಾಷೆ ವಿವಿಧತೆಯಿಂದ ಕೂಡಿರುವ ಜಾತ್ಯತೀತ ರಾಷ್ಟ್ರವಾಗಿದೆ ಎಂದರು.
ನಮ್ಮ ದೇಶದಲ್ಲಿ ನೃತ್ಯಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಸಾಕ್ಷತ್ ಶಿವನ ಶಿವತಾಂಡವ ರೂಪ ತಾಳಿದ ಎಂದು ಪುರಾಣದಲ್ಲಿ ಉಲ್ಲೇಖವಿದೆ. ಭಾರತದ ದೇಶದ ಸಂಸ್ಕೃತಿ, ಸಂಪ್ರಾದಯ ಪ್ರತೀಕವಾಗಿರುವ ಭರತನಾಟ್ಯ, ಕೂಚುಪುಡಿ ನೃತ್ಯ ಕಲೆಗಳನ್ನು ಉಳಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೃತ್ಯ ಕಲಾವಿದರುಗಳಿಗೆ ಪ್ರೋತ್ಸಾಹ ನೀಡಬೇಕು. ಕಲೆ ಉಳಿದರೆ ಮಾತ್ರ ದೇಶದ ಇತಿಹಾಸ ಉಳಿಯುತ್ತದೆ ಎಂದರು.




