ಎರಡು ದಿನಗಳ ಕೃಷಿ-ಡ್ರೋನ್ ತಂತ್ರಜ್ಞಾನ ಪ್ರಾತ್ಯಕ್ಷಿಕೆ

2 years ago

ಬಳ್ಳಾರಿ: ಐಸಿಎಆರ್ ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣಾ ಸಂಸ್ಥೆ, ಸಂಶೋಧನಾ ಕೇಂದ್ರದ ವತಿಯಿಂದ ಸೋಮಸಮುದ್ರ ಮತ್ತು ಲಕ್ಷ್ಮಿ ನಗರ ಗ್ರಾಮಗಳಲ್ಲಿ ಎರಡು ದಿನಗಳ ಕೃಷಿ-ಡ್ರೋನ್ ತಂತ್ರಜ್ಞಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು. ಮೆಣಸಿನಕಾಯಿ, ಭತ್ತ ಮತ್ತು ಮೆಕ್ಕೆಜೋಳ ಬೆಳೆಗಳ ಮೇಲೆ ಕೃಷಿ ಡ್ರೋನ್ ಮೂಲಕ ಸಿಂಪರಣೆ ಪ್ರಾತ್ಯಕ್ಷಿಕೆಯನ್ನು 20 ಎಕರೆ ಭೂಪ್ರದೇಶದಲ್ಲಿ ನಡೆಸಲಾಯಿತು.

ಸೋಮಸಮುದ್ರ, ಲಕ್ಷ್ಮಿ ನಗರ ಕ್ಯಾಂಪ್, ಕೋಳೂರು, ಮದಿರೆ, ಕೃಷ್ಣಾನಗರ ಕ್ಯಾಂಪ್, ಭಾಗ್ಯನಗರ ಕ್ಯಾಂಪ್, ಶ್ರೀಧರಗಡ್ಡ ಗ್ರಾಮಗಳ ಸುಮಾರು 49 ರೈತರು ಮತ್ತು ಅನೇಕ ದಾರಿಹೋಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಐಸಿಎಆರ್‌ನ ಹಿರಿಯ ವಿಜ್ಞಾನಿ (ಅರಣ್ಯ) ಡಾ.ಎಂ.ಎನ್.ರಮೇಶ ಅವರು ಮಾತನಾಡಿ, ಬೆಳೆಗಳಿಗೆ ರಾಸಾಯನಿಕಗಳನ್ನು ಅನ್ವಯಿಸಲು ಬೇಕಾಗುವ ಕಾರ್ಮಿಕರನ್ನು ಕಡಿಮೆ ಮಾಡುತ್ತದೆ. ಕೇಂದ್ರೀಕೃತವಾಗಿ ಮತ್ತು ನಿಖರವಾಗಿ ರಾಸಾಯನಿಕವನ್ನು ಯಂತ್ರದ ಮೂಲಕ ಅನ್ವಯಿಸುವುದರಿಂದ, ಮಾನವನ-ಚರ್ಮದ ಅಲರ್ಜಿಕ್ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವುದರ ಜೊತೆಗೆ ಮತ್ತು ರಸಾಯನಿಕಗಳ ಅನ್ವಯಿಕತೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ ಎಂದರು.

ಹಳ್ಳಿಗಳಲ್ಲಿ ಮೆಣಸಿನಕಾಯಿ ಬೆಳೆಗೆ ಸೂಕ್ಷö್ಮ ಪೋಷಕಾಂಶಗಳನ್ನು ಸಿಂಪಡಿಸಲು ಡ್ರೋನ್‌ಗಳನ್ನು ಬಾಡಿಗೆಗೆ ಪಡೆದು ಸಿಂಪರಣೆ ಮಾಡಲು ಪ್ರೇರೇಪಿತರಾದರು.

ಭಾಗವಹಿಸಿದ ಅನೇಕ ರೈತರು ಡ್ರೋನ್‌ನ ಬೆಲೆಯನ್ನು ಕೇಳಿದರು ಮತ್ತು ಅವರಲ್ಲಿ ಕೆಲವರು ಮುಂಬರುವ ವರ್ಷಗಳಲ್ಲಿ ಡ್ರೋನ್ ಖರೀದಿಸಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು.

ಐಸಿಎಆರ್ ಸಂಸ್ಥೆಯ 100 ದಿನಗಳ ಗುರಿಯಡಿ ಈ ಪ್ರದೇಶದ ರೈತರ ಹೊಲಗಳಲ್ಲಿ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯ ಪ್ರದರ್ಶನವನ್ನು ನಡೆಸಲಾಯಿತು.

ಈ ವೇಳೆ ಐಸಿಎಆರ್‌ನ ಡಾ.ರವಿ ದೂಪದಾಳ್, ಡಾ.ಕೆ.ಎನ್.ರವಿ, ಡಾ.ಎನ್.ಎಂ.ಅನುಷಾ ಹಾಗೂ ರೈತರು ಭಾಗವಹಿಸಿದ್ದರು.

Leave a Reply