ಅವಳಿ ಬಾಂಬ್ ಸ್ಫೋಟಿಸಿದ ಉಗ್ರರು

5 years ago

ಕಾಬೂಲ್: ಕಾಬೂಲ್‌ ವಿಮಾನ ನಿಲ್ದಾಣದ ಹೊರಗೆ ಭಾರೀ ಬಾಂಬ್ ಸ್ಫೋಟವಾಗಿದೆ. ಈ ವಿಮಾನ ನಿಲ್ದಾಣ ಅಪಾಯದದ್ದು, ಉಗ್ರರ ದಾಳಿ ಬೆದರಿಕೆ ಇದೆ ಎಂದು ಇಂಗ್ಲೆಂಡ್ ಹೇಳಿಕೆ ನೀಡಿದ ನಂತರ ಈ ದುಷ್ಕೃತ್ಯ ನಡೆದಿದೆ.

https://twitter.com/ElectionWiz/status/1430907745507561480?s=20

ಆಗಸ್ಟ್ 31ರೊಳಗೆ ಕಾಬೂಲ್ ತೊರೆಯುವಂತೆ ಅಮೆರಿಕಾ, ಬ್ರಿಟನ್ ಸೇರಿದಂತೆ ಇತರ ರಾಷ್ಟ್ರಗಳಿಗೆ ತಾಲಿಬಾನ್ ಎಚ್ಚರಿಸಿತ್ತು. ಗಡುವು ಮುಗಿಯುವುದರ ಒಳಗೇ ಕಾಬೂಲ್ ನಲ್ಲಿ ಬಾಂಬ್ ಸ್ಫೋಟ ನಡೆಯತೊಡಗಿವೆ. ಮೂಲಗಳ ಪ್ರಕಾರ, ಬಾಂಬ್ ಸ್ಫೋಟದಲ್ಲಿ 13 ನಾಗರಿಕರು ಬಲಿಯಾಗಿದ್ದಾರೆ. 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಅರ್ಧ ಗಂಟೆಯ ನಡುವಿನ ಅಂತರದಲ್ಲೇ ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸನಿಹದಲ್ಲೇ ಎರಡು ಬಾಂಬ್ ಸ್ಫೋಟಿಸಲಾಗಿದೆ. ಒಂದೆಡೆ ನಿಲ್ದಾಣದ ಗೇಟ್ ಬಳಿ, ಮತ್ತೊಂದೆಡೆ ವಿಮಾನ ನಿಲ್ದಾಣದ ಹೊರಗೆ ಹೋಟೆಲ್ ಬಳಿ ಸ್ಫೋಟ ಸಂಭವಿಸಿದೆ. ಅಮೆರಿಕಾ, ಬ್ರಿಟನ್ ಯೋಧರು ನೆಲೆಸಿದ್ದ ಹೋಟೆಲ್ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

Leave a Reply