ಬೆಂಗಳೂರು: ಕೇವಲ ಮೂರು ದಿನಗಳ ಹಿಂದಷ್ಟೇ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡುವ ಮೂಲಕ ಪೊಲೀಸ್ ಆಡಳಿತದಲ್ಲಿ ಭಾರಿ ಬದಲಾವಣೆ ಮಾಡಿದ ರಾಜ್ಯ ಸರ್ಕಾರ ಇದೀಗ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿ 23 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಆಡಳಿತ ಯಂತ್ರದಲ್ಲಿ ಬದಲಾವಣೆ ತಂದಿದೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಮುಡಾ ಹಗರಣದ ಮೂಲಕ ದೊಡ್ಡ ಸುದ್ದಿಯಾಗಿರುವ ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ 23 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರನ್ನು ಪ್ರವಾಸೋದ್ಯಮ ನಿರ್ದೇಶಕರಾಗಿ ನೇಮಿಸಲಾಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಇನ್ನು ಮೊಹಮದ್ ರೋಷನ್ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ:
1. ಡಾ.ರಾಮ್ ಪ್ರಸಾದ್ ಮನೋಹರ್, ಹೆಚ್ಚುವರಿ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಅಧ್ಯಕ್ಷರು,ಬೆಂಗಳೂರು ಜಲಮಂಡಳಿ
2. ಬಿ.ಶರತ್, ವ್ಯವಸ್ಥಾಪಕ ನಿರ್ದೇಶಕರು ,ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ
3. ಸೆಲ್ವಮಣಿ, ವ್ಯವಸ್ಥಾಪಕ ನಿರ್ದೇಶಕರು,ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
4. ನಿತೀಶ್ ಪಾಟೀಲ್, ನಿರ್ದೇಶಕರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು
5. ಡಾ. ಅರುಂಧತಿ ಚಂದ್ರಶೇಖರ್, ಆಯುಕ್ತರು, ಪಂಚಾಯತ್ ರಾಜ್ ಇಲಾಖೆ
6. ಜ್ಯೋತಿ ಕೆ., ಆಯುಕ್ತರು ಮತ್ತು ನಿರ್ದೇಶಕರು, ಜವಳಿ ಅಭಿವೃದ್ಧಿ ಮತ್ತು ಕೈಮಗ್ಗ
7. ಶ್ರೀಧರ ಸಿ.ಎನ್., ನಿರ್ದೇಶಕರು, ಸಾಮಾಜಿಕ ಲೆಕ್ಕ ಪರಿಶೋಧನೆ, ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
8. ಡಾ.ರಾಜೇಂದ್ರ ಕೆ.ವಿ., ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
9. ಚಂದ್ರಶೇಖರ ನಾಯಕ ಎಲ್., ಹೆಚ್ಚುವರಿ ಆಯುಕ್ತರು,ವಾಣಿಜ್ಯ ತೆರಿಗೆಗಳು(ಜಾರಿ)
10. ವಿಜಯಮಹಾಂತೇಶ ಬಿ ದಾನಮ್ಮನವರ್, ಜಿಲ್ಲಾಧಿಕಾರಿ, ಹಾವೇರಿ ಜಿಲ್ಲೆ
11. ಗೋವಿಂದ ರೆಡ್ಡಿ, ಜಿಲ್ಲಾಧಿಕಾರಿ, ಗದಗ
12. ರಘುನಂದನ್ ಮೂರ್ತಿ, ಖಜಾನೆ ಆಯುಕ್ತರು
13. ಡಾ.ಗಂಗಾಧರಸ್ವಾಮಿ ಜಿ.ಎಂ., ಜಿಲ್ಲಾಧಿಕಾರಿ, ದಾವಣಗೆರೆ
14. ಲಕ್ಷೀಕಾಂತ್ ರೆಡ್ಡಿ, ಜಿಲ್ಲಾಧಿಕಾರಿಮೈಸೂರು
15. ನಿತೀಶ್ ಕೆ, ಜಿಲ್ಲಾಧಿಕಾರಿ, ರಾಯಚೂರು ಜಿಲ್ಲೆ
16. ಶಿಲ್ಪಾ ಶರ್ಮಾ, ಜಿಲ್ಲಾಧಿಕಾರಿ, ಬೀದರ್ ಜಿಲ್ಲೆ
17. ಡಾ.ದಿಲೀಶ್ ಸಸಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸೆಂಟರ್ ಫಾರ್ ಇ-ಆಡಳಿತ
18. ಲೋಖಂಡೆ ಸ್ನೇಹಲ್ ಸುಧಾಕರ್, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿದ್ಯುತ್ ಕಾರ್ಖಾನೆ



