ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಕಡ್ಡಾಯ ಆಯ್ಕೆ ಕಾಯಕ್ರಮಗಳಲ್ಲ. ವೈಯಕ್ತಿಕವಾಗಿ ಬೇಡವೆನ್ನುವವರು ಅವುಗಳ ಪ್ರಯೋಜನ ಪಡೆಯದೆ ಸುಮ್ಮನೆ ಇದ್ದರಾಯಿತು. ಸುಖಾಸುಮ್ಮನೆ ಬೈಯುವುದೇಕೆ? ಹೀಗೆ ಬೈಯುವ ಪ್ರವೃತ್ತಿಯಿಂದ ಅನುಕೂಲ ಪಡೆಯುವುದನ್ನು ಅವಮಾನಿಸಿದಂತಾಗುತ್ತದೆ. ಅದರಲ್ಲೂ ಮಹಿಳೆಯರನ್ನು ಸುಖಾಸುಮ್ಮನೆ ಟೀಕೆ ಮಾಡುವುದೇಕೆ?
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಯಾವುದೆ ಗ್ಯಾರಂಟಿ ಅಥವಾ ಬಡತನ ನಿರ್ಮೂಲನೆ ಯೋಜನೆಗಳ ಮಹತ್ವದ ಪಾತ್ರ ವಹಿಸುತ್ತವೆ. ಹೇಗೆಂದರೆ ಬಡವರ ಕೈಯಲ್ಲಿ ಹಣವಿಲ್ಲದೆ ಹೋದಾಗ ದೈನಂದಿನ ಅನುಭೋಗ ಪ್ರಮಾಣ ಕುಸಿಯುತ್ತದೆ. ಅವರಲ್ಲಿ ಒಂದಷ್ಟು ಹಣ ಕೈಗೂಡಿದರೆ ತಾತ್ಕಾಲಿಕ ಅನುಭೋಗ ವಸ್ತುಗಳ ಖರೀದಿ ಮತ್ತು ಇತರೆ ಗೃಹ ಸಂಬಂಧಿಸಿದಂತಹ ಖರ್ಚು ನಿರ್ವಹಿಸಲು ಅವಕಾಶ ಸಿಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕೈ ಸಾಲದ ಮೇಲೆ ಅಧಿಕ ಬಡ್ಡಿ ದರದಲ್ಲಿ ಪಡೆಯುವ ಹಣ ಚಲಾವಣೆಗೆ ಕಡಿವಾಣ ಹಾಕಲು ಸಾಧ್ಯವಿದೆ.
ಶನಿವಾರ ಮಂಗಳೂರು ರೈಲು ನಿಲ್ದಾಣದಿಂದ ಆಟೋ ಹತ್ತಿದೆ. ಚಾಲಕ ಈ ಗ್ಯಾರಂಟಿ ಯೋಜನೆಗಳಿಂದ ಹೆಂಗಸರು ಯಾರು ಮಾತನ್ನು ಕೇಳದಂತಾಗಿದೆ ಎಂದರು. ಅದೆಲ್ಲವೂ ಸುಳ್ಳು. ಸಂಘದಿಂದ ಸನ್ಯಾಸಿ ಕೆಟ್ಟ ಎಂಬಂತೆ ಮಾತನಾಡುವುದು ಸರಿಯಲ್ಲ.
ತಾತ್ವಿಕವಾಗಿ ಹೇಳುವುದಾದರೆ ಮನೆಗೆ ಬರುವ ಆದಾಯ ಮೂಲವನ್ನು ತಿರಸ್ಕಾರ ಮಾಡುವ ಗಂಡಸರು ಕಡಿಮೆ. ಎಷ್ಟೋಸಲ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಅವರು ಹಣ ಸಂದಾಯ ಮಾಡುವಾಗ ಬಹಳಷ್ಟು ಯಾತನೆಯನ್ನು ಅನುಭವಿಸಿದ ಘಟನೆಗಳು ಇವೆ. ಒಂದು ಕಡೆ ಪುಸ್ತಕ ಹೊಂದಾಣಿಕೆ ಕಾರಣ ಸರ್ಕಾರಿ ಬಸ್ಸುಗಳ ಕಂಪನಿಗಳು ಇಂದು ಆದಾಯ ಗಳಿಸುತ್ತಿವೆ. ನೇರವಾಗಿ ಬಡ ಕುಟುಂಬಗಳು ಬಸ್ಸಿನ ಖರ್ಚಿಗೆ ಧನಿಕರ ಮುಂದೆ ಕೈ ಚಾಚಿ ಹಂಗಲಾಚುತ್ತಿದ್ದ ಪ್ರಸಂಗ ನಿಂತಿವೆ. ವೈದ್ಯಕೀಯ ಸೇವೆ ಪಡೆಯಲು ಅದು ಅನುಕೂಲ ಆಗುತ್ತದೆ. ಈ ಹಿಂದೆಯೂ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವ್ಯವಸ್ಥೆ ಇತ್ತು. ಈಗ ಅದರ ವ್ಯಾಪ್ತಿ ವಿಸ್ತಾರ ಆಗಿದೆ. ಅದರಲ್ಲೂ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಶೈಕ್ಷಣಿಕ ಬೆಳವಣಿಗೆಗೆ ಕೈಜೋಡಿಸಿದಂತಾಗಿದೆ.
ಒಂದು ವೇಳೆ ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳ ಜಾರಿಗಾಗಿ ಒಂದಷ್ಟು ಷರತ್ತು ಜನರಿಗೆ ಬೇಕೆಂದರೆ ಅವುಗಳನ್ನು ಸಹ ಅಳವಡಿಸಿದರೆ ಟೀಕೆಟಿಪ್ಪಣಿ ಸಹಜವಾಗಿ ಕುಗ್ಗುತ್ತದೆ. ಇದನ್ನೂ ಸಹ ಜನಾಭಿಪ್ರಾಯವನ್ನು ಪಡೆದು ಮಾಡಬೇಕು.
- ದಾಸನೂರು ಕೂಸಣ್ಣ, ಸಮುದಾಯ ಚಿಂತಕರು




