ಬೆಂಗಳೂರು: ಮೊಬೈಲ್ ಫೋನ್ ಇದೀಗ ಎಲ್ಲ ಜನರ ಸಂಗಾತಿಯಾಗಿಬಿಟ್ಟಿದೆ. ಹಾಗೆ ಕಳುವಾಗುವ ವಸ್ತುಗಳ ಪೈಕಿ ಮೊಬೈಲ್ ಗೆ ಅಗ್ರಸ್ಥಾನ ಸಿಕ್ಕಿದೆ. ಬಸ್ಸು, ರೈಲು, ಮಾರುಕಟ್ಟೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಕಳ್ಳರು ಕ್ಷಣಮಾತ್ರದಲ್ಲಿ ಮೊಬೈಲ್ ಎಗರಿಸಿ ಪರಾರಿಯಾಗುತ್ತಾರೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ರಾಜ್ಯದ ಪ್ರತಿ ಪೊಲೀಸ್ ಠಾಣೆಯಲ್ಲಿ ನಿತ್ಯ ಒಂದೆರಡಾದರೂ ಮೊಬೈಲ್ ಕಳ್ಳತನದ ದೂರುಗಳು ದಾಖಲಾಗುತ್ತಿವೆ. ಮೊಬೈಲ್ ಕಳ್ಳತನ ಎನ್ನುವುದು ಮಾಮೂಲಿಯಾದ ಸಂಗತಿಯಾಗಿಟ್ಟಿದೆ.
ಆದರೆ ಶಿವಮೊಗ್ಗದಲ್ಲಿ ಐನಾತಿ ಚೋರರು ಭಾರಿ ಕೈಚಳಕ ತೋರಿದ್ದಾರೆ. ಇವರ ಕೈಚಳಕಕ್ಕೆ ಕಳ್ಳತನವಾಗಿರುವುದು ಮೊಬೈಲ್ ಅಲ್ಲ. ಬದಲಿಗೆ ಮೊಬೈಲ್ ನೆಟ್ ವರ್ಕ್ ಗಾಗಿ ಆಳವಡಿಸಲಾಗಿದ್ದ ಟವರ್ ಅನ್ನೇ ಹೈನಾತಿ ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಶಿವಮೊಗ್ಗದ ಟಿಪ್ಪು ನಗರದ ಖಾಲಿ ಜಾಗದಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆ ಸುಗಮ ನೆಟ್ ವರ್ಕ್ ಗಾಗಿ 2008ರಲ್ಲಿ ಟವರ್ ಅಳವಡಿಸಿ ನಿರ್ವಹಣೆ ಮಾಡುತ್ತಿತ್ತು. ಆದರೆ ಹಲ ತಾಂತ್ರಿಕ ಕಾರಣಗಳಿಂದ ಖಾಸಗಿ ಸಂಸ್ಥೆ ಕೋವಿಡ್ ನಂತರ ಆ ಟವರ್ ನಿರ್ವಹಣೆ ಮಾಡಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಈಗ ಮತ್ತೆ ಟವರ್ ನಿರ್ವಹಣೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಈಚೆಗೆ ಸಂಸ್ಥೆಯ ಸಿಬ್ಬಂದಿ ಸ್ಥಳಕ್ಕೆ ಬಂದು ನೋಡಿದಾಗ ಅಲ್ಲಿ ಟವರ್ ಇರಲಿಲ್ಲ. ಇದರಿಂದ ಅಚ್ಚರಿಗೊಂಡ ಅವರು ಸ್ಥಳೀಯರಲ್ಲಿ ವಿಚಾರಿಸಿದ್ದಾರೆ. ಆದರೆ, ಯಾರಲ್ಲೂ ಈ ಬಗ್ಗೆ ಮಾಹಿತಿ ಇಲ್ಲ.
ಈ ವಿಷಯವನ್ನು ಅವರು ತಮ್ಮ ಸಂಸ್ಥೆಯ ಮುಖ್ಯಸ್ಥರ ಗಮನಕ್ಕೆ ತಂದಿದ್ದಾರೆ. ಅವರು ಈ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಈಗ ನ್ಯಾಯಾಲಯದ ಸೂಚನೆ ಮೇರೆಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳವಾಗಿರುವ ಮೊಬೈಲ್ ಫೋನ್ ಟವರ್‌ನ ಬಿಡಿಭಾಗಗಳ ಅಂದಾಜು ಮೌಲ್ಯ 46.30 ಲಕ್ಷ ರೂಪಾಯಿ ಎಂದು ಟೆಲಿಕಾಂ ಸಂಸ್ಥೆಯ ಸಿಬ್ಬಂದಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತುಂಗಾ ನಗರ ಠಾಣೆ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.




