ಬಳ್ಳಾರಿ: ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದರೆ ಹೈಕಮಾಂಡ್ ಗಟ್ಟಿಯಾದ ನಿರ್ಧಾರ ಕೈಗೊಳ್ಳುವ ಮೂಲಕ ಯಾರು ಶ್ರಮ ಪಟ್ಟು ಪಕ್ಷಕ್ಕಾಗಿ ದುಡಿಯುತ್ತಾರೆ ಅವರಿಗೆ ಮಾನ್ಯತೆ ನೀಡಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾರು ಪಕ್ಷದ ಸಂಘಟನೆ ಮಾಡುತ್ತಾರೆ, ಶೇ.7ರಿಂದ 8ರಷ್ಟು ಮತಗಳನ್ನು ವ್ಯತ್ಯಾಸ ಮಾಡುವಂತಹ ಸಾಮರ್ಥ್ಯವಿದೆ ಅಂತಹ ನಾಯಕರಿಗೆ ಹೈಕಮಾಂಡ್ ಗೌರವ ಕೊಡಬೇಕು ಎಂದರು.
ವಿಜಯೇಂದ್ರ ಅವರಿಗೆ ಹೈಕಮಾಂಡ್ ಸೂಚನೆ ಇದ್ದರೆ ಮತ್ತೊಮ್ಮೆ ಅವರೇ ಮತ್ತೊಮ್ಮೆ ರಾಜ್ಯಾಧ್ಯಕ್ಷರಾಗಲಿ, ಇನ್ನೂ ನಾಲ್ಕೈದು ಬಾರಿ ಅವರೇ ಆಗಲಿ, ಯಾರು ಬೇಡ ಎನ್ನುತ್ತಾರೆ. ಹೈಕಮಾಂಡ್ ಹೇಳಿದರೆ ಮಾತನಾಡುವವರು ಯಾರು ಇದ್ದಾರೆ ಎಂದು ಪ್ರಶ್ನಿಸಿದರು.
ಹೈಕಮಾಂಡ್ ಹೇಳಿದರೆ ಎಲ್ಲರೂ ಕೇಳಬೇಕು ಎಂಬ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ನಾವೆಲ್ಲ ಮಾತನಾಡಿದರೆ ಏನಾಗುತ್ತದೆ. ರಾಷ್ಟ್ರೀಯ ನಾಯಕರ ಬಳಿ ಮೂಗುದಾರ ಇರುತ್ತದೆ. ಮೂಗುದಾದ ಯಾರಿಗೆ ಹಾಕಬೇಕು ಅವರಿಗೆ ಮೂಗುದಾರ ಹಾಕಿ ಗಟ್ಟಿಯಾದ ಕೆಲಸ ಮಾಡುತ್ತಾರೆ ಎಂದರು.
ಹೀಗಿರುವಲ್ಲಿ ಹೈಕಮಾಂಡ್ ಯಾರು ತಪ್ಪು ಮಾಡಿದ್ದಾರೆ ಯಾರು ಸರಿ ಇದ್ದಾರೆ ಎಂಬುದನ್ನು ಅವಲೋಕಿಸಬೇಕು. ತಪ್ಪು ಮಾಡಿದವರು ಎಷ್ಟೇ ದೊಡ್ಡವರಾಗಿದ್ದರೂ ಸರಿ ಅವರನ್ನು ಕರೆದು ತಿಳುವಳಿಕೆ ನೀಡಬೇಕು ಎಂದರು.
ಪಕ್ಷದ ರಾಜ್ಯ ಅಧ್ಯಕ್ಷರ ಆಯ್ಕೆ ಕುಳಿತಂತೆ ಚರ್ಚಿಸಲು ಕೆಲವರು ದೆಹಲಿಗೆ ತೆರಳಿದ್ದಾರೆ. ಅವರೊಂದಿಗೆ ಹೈಕಮಾಂಡ್ ನಾಯಕರು ಚರ್ಚೆ ಮಾಡಿ ಎಲ್ಲವನ್ನು ಬಗೆಹರಿಸಬೇಕು ಎಂದರು.
ಪ್ರತಿಯೊಬ್ಬರು ತಮ್ಮ ಮನಸ್ಸಿನ ಭಾವನೆಗಳನ್ನು ಹೇಳುವುದರಲ್ಲಿ ತಪ್ಪೇನಿಲ್ಲ. ಸಂಸದ ಸುಧಾಕರ್, ರಮೇಶ್ ಜಾರಕಿಹೊಳಿ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಅವರು ತಮ್ಮಲ್ಲಿರುವ ನೋವುಗಳನ್ನು, ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಏನು ಮಾತನಾಡಬೇಕು ಎಂಬುದನ್ನು ಮಾತನಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ ಎಂದರು.
ನಾನು ಕೂಡಾ ಹೈಕಮಾಂಡ್ ನಾಯಕರೊಂದಿಗೆ ಮುಂಚೆಯಿಂದಲೂ ಸಂಪರ್ಕ ಇಟ್ಟುಕೊಂಡಿದ್ದೇನೆ. ಆಗಾಗ ಅವರನ್ನು ಭೇಟಿ ನೀಡಿ ಎಲ್ಲಾ ವಿಚಾರಗಳನ್ನು ಹೇಳಿಕೊಂಡು ಬಂದಿದ್ದೇನೆ. ಸದ್ಯ ವೈಯಕ್ತಿಕವಾಗಿ ಕೆಲಸ ಇದ್ದ ಕಾರಣ ಹೋಗಲು ಸಾಧ್ಯವಾಗಿಲ್ಲ. ಸಮಯ ಕೊಟ್ಟು ಹೋಗಬೇಕೆಂದಿಲ್ಲ, ಸಮಯ ಕೂಡಿ ಬಂದಿಲ್ಲ. ಆದ್ದರಿಂದ ಹೋಗಲು ಸಾಧ್ಯವಾಗಿಲ್ಲ ಎಂದರು.
ನಾನು ಪಕ್ಷ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ, ಪಕ್ಷ ಬಿಡುವ ಸಂದರ್ಭ ಬಂದಲ್ಲಿ ಪ್ರೆಸ್ ಮೀಟ್ ಮಾಡಿ ಎಲ್ಲರಿಗೂ ಹೇಳಿ ಹೋಗುತ್ತೇನೆ. ಮುಚ್ಚುಮರೆ ಮಾಡುವವನು ನಾನಲ್ಲ. ನಾನು ಪಕ್ಷ ಬಿಡಬೇಕು ಎಂದರೆ ಯಾರಿಗೆ ಏನು ಹೇಳಬೇಕಾಗಿಲ್ಲ. ನಾನು ಯಾರ ಮುಲಾಜಿಗೂ ಕೆಲಸ ಮಾಡುವುದಿಲ್ಲ. ಬಡವ, ಶ್ರಮಿಕ, ರೈತ, ಪಕ್ಷ ಕಟ್ಟಿ ಬೆಳೆಸಿದ ಕಾರ್ಯಕರ್ತನಿಗೆ ಗೌರವ ಕೊಡುತ್ತೇನೆ. ಪಕ್ಷ ಬಿಡುವ ಸಂದರ್ಭ ಬಂದಲ್ಲಿ ನನನ್ನು ಯಾರು ತಡೆಯುತ್ತಾರೆ ಎಂದರು.




