ಪಂಚಾಯತ್ ರಾಜ್ ವ್ಯವಸ್ಥೆಯು ಪ್ರಜಾಪ್ರಭುತ್ವಕ್ಕೆ ಮುಕುಟವಿದ್ದಂತೆ. ಅಧಿಕಾರದ ವಿಕೇಂದ್ರಿಕರಣದ ಮೂಲಕ ‘ಸ್ಥಳೀಯ ಸರ್ಕಾರ‘ ಎಂಬ ಪರಿಕಲ್ಪನೆಯ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಅಭಿವೃದ್ಧಿ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನ ಮಾಡಬೇಕು ಎನ್ನುವುದು ಈ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಾಗ ನಾನು ಕೈಗೊಂಡ ನಿರ್ಧಾರ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಈ ಇಲಾಖೆಯ ಹೊಣೆ ನನ್ನ ಹೆಗಲಿಗೆ ಬಂದ ಕ್ಷಣದಿಂದಲೇ ಲೋಪದೋಷಗಳೇನಿದೆ, ಪರಿಹಾರ ಸೂತ್ರಗಳೇನಿದೆ, ಸವಾಲುಗಳೇನಿದೆ, ಸಾಧ್ಯತೆಗಳೇನಿದೆ ಎಂಬ ಚಿಂತನ ಮಂಥನ ನಡೆಸಿ, ಸ್ಪಷ್ಟ ರೂಪುರೇಷೆಯೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದೆ, ನನ್ನ ಚಿಂತನೆಗಳಿಗೆ, ಉತ್ಸಾಹಕ್ಕೆ ಅಧಿಕಾರಿಗಳ ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಹಕಾರವೂ ಪ್ರಮುಖ ಪಾತ್ರ ವಹಿಸಿದೆ.
ಗ್ರಾಮ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸುವುದು, ಗ್ರಾಮೀಣ ಜನರ ಅಭ್ಯುದಯಕ್ಕಾಗಿರುವ ಅರಿವು ಕೇಂದ್ರ, ಕೂಸಿನ ಮನೆ, ನರೇಗಾದಂತಹ ಯೋಜನೆಗಳನ್ನು ಸಮರ್ಥವಾಗಿ ಜಾರಿಗೊಳಿಸುವುದು. ತಂತ್ರಜ್ಞಾನವನ್ನು ಬಳಸಿ ಸೇವೆಗಳನ್ನು ಸರಳೀಕರಣಗೊಳಿಸುವುದು ಸೇರಿದಂತೆ ಪಂಚಾಯತ್ ರಾಜ್ ವ್ಯವಸ್ಥೆಯ ಯಂತ್ರವನ್ನು ಚುರುಕುಗೊಳಿಸಲಾಯಿತು. 15ನೇ ಹಣಕಾಸು ಆಯೋಗದ ಅನುದಾನವನ್ನು ಸಮರ್ಥವಾಗಿ ಬಳಸಳಾಯಿತು, ಗ್ರಾಮ ಪಂಚಾಯಿತಿಗಳ ಆಸ್ತಿ ಸಂರಕ್ಷಣಾ ಕ್ರಮಗಳೊಂದಿಗೆ, ಈ ವರ್ಷ ದಾಖಲೆ ಮಟ್ಟದ ತೆರಿಗೆ ಸಂಗ್ರಹವಾಗಿರುವುದು ಕೂಡ ಸಂತಸದ ವಿಷಯವಾಗಿದೆ.
ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯದ ಪಂಚಾಯತ್ ವಿಕೇಂದ್ರಿಕರಣ ಸೂಚ್ಯಾಂಕದಲ್ಲಿ ಕರ್ನಾಟಕವು ಅಗ್ರ ಸ್ಥಾನ ಪಡೆದಿರುವುದು ನಮ್ಮ ಶ್ರದ್ದೆ ಹಾಗೂ ಶ್ರಮಕ್ಕೆ ಸಂದಿರುವ ಪ್ರತಿಫಲ. ಮುಖ್ಯಮಂತ್ರಿ Siddaramaiah ಅವರು ಉಪಮುಖ್ಯಮಂತ್ರಿ DK Shivakumar ಅವರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಪಂಚಾಯತ್ ರಾಜ್ ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ಇಚ್ಚಾಶಕ್ತಿ ದೃಢವಾಗಿದೆ.
ಮಹಾತ್ಮ ಗಾಂಧಿಯವರ “ಗ್ರಾಮ ರಾಜ್ಯ“ದ ಆಶಯಗಳನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶಕ್ತಿ ಮೀರಿ ಕೆಲಸ ಮಾಡುತ್ತೇನೆ.
– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ



