ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ

2 years ago

ಬೆಂಗಳೂರು: ಹೊಸ ವರ್ಷ ಸ್ವಾಗತಿಸುವ ಹಬ್ಬ ಯುಗಾದಿಯ ತಯಾರಿಯಲ್ಲಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉದ್ಯೋಗಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಹಬ್ಬದ ಉಡುಗೊರೆ ಕೊಟ್ಟಿದ್ದಾರೆ.

ಹಲವು ದಿನಗಳಿಂದ ಬಾಕಿ ಉಳಿದಿದ್ದ ಕೆಎಸ್ಆರ್ಟಿಸಿ ಸಿಬ್ಬಂದಿ ತುಟ್ಟಿಭತ್ಯೆ ಹಿಂಬಾಕಿ, ಗಳಿಕೆ ರಜೆ ನಗದೀಕರಣ ಹಾಗೂ ಉಪಧನದ ಬಾಕಿ ಮೊತ್ತ ಒಟ್ಟು 84 ಕೋಟಿ ರೂ.ಗಳನ್ನು ಪಾವತಿಸಲು ಆದೇಶ ಹೊರಡಿಸಲಾಗಿದೆ.

ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕೆಎಸ್ಆರ್ಟಿಸಿ ಅಧ್ಯಕ್ಷರ ನಿರ್ದೇಶನದಂತೆ ಪಾವತಿಸಲು ಆದೇಶ ನೀಡಲಾಗಿದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.

ಕೆಎಸ್ಆರ್ಟಿಸಿ ಸಿಬ್ಬಂದಿಗೆ 2022-23ರ ಸಾಲಿನ ಮೇ ತಿಂಗಳಿನಿಂದ ಗಳಿಕೆ ರಜೆ ನಗದೀಕರಣದ ಮೊತ್ತ 24 ಕೋಟಿ ರೂಪಾಯಿ ಹಾಗೂ 2022ರ ಜುಲೈನಿಂದ ನವೆಂಬರ್ ರವರೆಗಿನ 5 ತಿಂಗಳು, 2023 ಜನವರಿಯಿಂದ ಜುಲೈವರೆಗಿನ 7 ತಿಂಗಳು ಮತ್ತು ಕಳೆದ ಜುಲೈನಿಂದ ಅಕ್ಟೋಬರ್ ರವರೆಗಿನ 4 ತಿಂಗಳುಗಳ ಹಿಂಬಾಕಿ ತುಟ್ಟಿಭತ್ಯೆ ಮೊತ್ತ 54 ಕೋಟಿ ರೂ. ಪಾವತಿಸಲು ಆದೇಶಿಸಲಾಗಿದೆ.

2024ರ ಜನವರಿಯಲ್ಲಿ ಸಂಸ್ಥೆಯ ಸೇವೆಯಿಂದ ನಿವೃತ್ತರಾದ ಸಿಬ್ಬಂದಿ ಉಪಧನ 6 ಕೋಟಿ ರೂ. ಮೊತ್ತವನ್ನು ನಿನ್ನೆ ಬಿಡುಗಡೆಗೊಳಿಸಲು ಆದೇಶಿಸಲಾಗಿದೆ.

Leave a Reply