ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗ ಸಂಘಪರಿವಾರ ದೊಡ್ಡ ಸ್ಟೇಜ್ ಹಾಕಿ ಇಡೀ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದೆ. (ಬಾಂಗ್ಲಾ ದೇಶದ ವಿಷಯ) ಪೊಲೀಸ್ ಕಮೀಷನರ್ ಅಗ್ರವಾಲ್ ರಿಗೆ ಈ ರೀತಿ ಅಷ್ಟು ಅಗಲದ, ನಗರದ ಅತ್ಯಂತ ಪ್ರಮುಖ ರಸ್ತೆಯನ್ನು ಪೂರ್ತಿ ಮುಚ್ಚಿ ಧರಣಿ ನಡೆಸುವುದರಲ್ಲಿ ಯಾವುದೇ ಸಮಸ್ಯೆ ಕಂಡಿಲ್ಲ. ಅನುಮತಿ, ರಕ್ಷಣೆ ಎರಡೂ ಒದಗಿಸಲಾಗಿದೆ. ರಸ್ತೆ ಗುಂಡಿ ಮುಚ್ಚಿ ಎಂದು ಆಗ್ರಹಿಸಿ ರಸ್ತೆಗೆ ಇಳಿಯದೆ ಮೂಲೆಯಲ್ಲಿ ಕೂತು ಜನಪರ ಸಂಘಟನೆಗಳು ಧರಣಿ ಮಾಡುವುದು ಮಾತ್ರ ಮಂಗಳೂರಿನಲ್ಲಿ ಅಪರಾಧ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಪ್ಯಾಲೆಸ್ತೀನ್ ನಲ್ಲಿ ಶಾಂತಿ ನೆಲೆಸಲಿ, ನರಮೇಧ ನಿಲ್ಲಲಿ ಎಂದು ಒತ್ತಾಯಿಸಿ ಎಡಪಕ್ಷಗಳ ಐವತ್ತು, ಅರವತ್ತು ಜನ ಮಿನಿ ವಿಧಾನ ಸೌಧದ ಬಳಿಯ ಫುಟ್ ಪಾತ್ ನಲ್ಲಿ ಪ್ರದರ್ಶನ ಮಾಡುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ. ಅನುಮತಿ ನಿರಾಕರಿಸಿ fIR ಹಾಕಲಾಗುತ್ತದೆ.
ಸಂಘಪರಿವಾರ ಬಾಂಗ್ಲಾ ದೇಶದ ಬೆಳವಣಿಗೆಗಳನ್ನು ಇಟ್ಟುಕೊಂಡು ಉದ್ರೇಕಕಾರಿ ಘೋಷಣೆ, ಭಾಷಣಗಳನ್ನು ಇಡೀ ರಸ್ತೆ ಬಂದ್ ಮಾಡಿ ನಡೆಸಿದರೂ ಕಾನೂನು ಸುವ್ಯವಸ್ಥೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ, ಸಂಚಾರಕ್ಕೂ ಸಮಸ್ಯೆ ಆಗುವುದಿಲ್ಲ. ಇದು ಕಮೀಷನರ್ ಅಗ್ರವಾಲ್ ನ್ಯಾಯ. ಇದು ಪೊಲೀಸ್ ರಾಜ್ ಅಲ್ಲದೆ ಮತ್ತೇನು?
ಸ್ಪೀಕರ್ ಖಾದರ್ ರಿಗೆ ಪಾಪ ಇದೆಲ್ಲಾ ಕಾಣುವುದೂ ಇಲ್ಲ, ಅವರು ಪ್ರತಿಕ್ರಿಯಿಸುವುದೂ ಇಲ್ಲ. ಅವರಿಗೆ “ಪಕ್ಷ” ಇಲ್ಲ. ಅವರು ಎಲ್ಲರ “ಸ್ಪೀಕರ್”.
– ಮುನೀರ್ ಕಾಟಿಪಳ್ಳ




