ವಿ*ಶ್ವರ ಬಟ್ಟ ಎಂಬುವವನ ಪುಸ್ತಕಗಳ ಬಿಡುಗಡೆಗೆ ಮಾನ್ಯ ಮುಕ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೋಗಕೂಡದು ಎಂಬ ಅಬಿಪ್ರಾಯ ವ್ಯಾಪಕವಾಗಿ ವ್ಯಕ್ತವಾಗಿದೆ. ಹೆಚ್ಚೂ ಕಡಿಮೆ ಕಳೆದ ಒಂದು ದಶಕದಲ್ಲಿ ವಿ*ಶ್ವರ ಬಟ್ಟನ ವರಾತಗಳನ್ನು ಕಾಣುತ್ತಾ ಬಂದವರಿಗೆ ಸಹಜವಾಗಿ ಕಳವಳವಾಗಿದೆ. ಈಗ ವ್ಯಕ್ತವಾಗುತ್ತಿರುವ ಅಬಿಪ್ರಾಯಗಳು ಸಿದ್ದರಾಮಯ್ಯ ಅವರ ಗಮನಕ್ಕೆ ಬಂದರೆ ಅವರು ಕಂಡಿತಾ ತಮ್ಮ ತೀರ್ಮಾನವನ್ನು ಪರಿಶೀಲಿಸಿ ಹೋಗದಿರುವ ನಿರ್ದಾರವನ್ನು ಕಡೇಕ್ಷಣದಲ್ಲಿಯಾದರೂ ತಳೆಯಬಹುದೇನೋ. ಇಲ್ಲವೇ ಮತ್ತೇನೋ ಒತ್ತಡಗಳು ಹೆಚ್ಚಿನ ಮಟ್ಟದಲ್ಲಿದ್ದರೆ ಅವರು ಆ ಕಾರ್ಯಕ್ರಮಕ್ಕೆ ಹೋಗಿಯೂ ಬಿಡಬಹುದು.
ಅಕಸ್ಮಾತ್ ಹೋದರೆ? ಕರ್ನಾಟಕದಲ್ಲಿ ಪ್ರಳಯವಂತೂ ಆಗಲ್ಲ ಎಂದುಕೊಳ್ಳಬಹುದು, ಕೆಲವರು ತಮ್ಮ ಸಮಾದಾನಕ್ಕೆ ಅಯ್ಯೋ ಬಿಡಿ ಸಿದ್ದರಾಮಯ್ಯನವರೇನೂ ಅಲ್ಲಿ ಹೋಗಿ ಟೆಂಟ್ ಹಾಕಲಿಲ್ಲ, ಅವನಿಗೇ ಬುದ್ದಿ ಹೇಳಿ ಬಂದ್ರಂತೆ… ಹೀಗೆ ಏನೇನೋ ಸಮಾದಾನಕ್ಕೆ ಹೇಳ್ಕೊಬಹುದು. ಆದರೆ ಇದು ಕರ್ನಾಟಕದಲ್ಲಿ ಕಳೆದ ಹಲವಾರು ವರ್ಶಗಳಿಂದ ನಡೆಯುತ್ತಿರುವ ತೀಕ್ಷ್ಣ ಸೈದ್ದಾಂತಿಕ ಸಂಗರ್ಷದಲ್ಲಿ ಒಂದು ಅವಿಶ್ವಾಸಕ್ಕೆ ಕಾರಣವಾಗುತ್ತದೆ ಎಂಬುದು ನೂರಕ್ಕೆ ನೂರು ಸತ್ಯ.
ನಾನು ಹೀಗೆ ಹೇಳಲು ಬಲವಾದ ಕಾರಣಗಳಿವೆ. ಸಿದ್ದರಾಮಯ್ಯ ಎಂಬ ವ್ಯಕ್ತಿಯಲ್ಲಿ ನಾಡಿನ ಅಸಂಕ್ಯಾತ ದಮನಿತರು ಕಟ್ಟಿಕೊಂಡಿರುವ ಇಮೇಜು ಮತ್ತು ವಿಶ್ವಾಸವೇ ಇದಕ್ಕೆ ಮುಕ್ಯ ಕಾರಣ. ದೇವರಾಜ ಅರಸು, ಗೋಪಾಲಗೌಡರಂತಹ ಬದ್ದತೆಯ ರಾಜಕಾರಣಿಗಳ ತರುವಾಯ ಕೆಲವಾರು ದಶಕಗಳ ನಂತರ ಕನ್ನಡಿಗರಿಗೆ ಸಿಕ್ಕಿರುವುದು ಸಿದ್ದರಾಮಯ್ಯ ಒಬ್ಬರೇ ಅನ್ನುವ ಗಾಡವಾದ ನಂಬಿಕೆ. ತುಳಿತಕ್ಕೆ ಒಳಗಾದವರಿಗೆ, ಶೋಶಿತ ಸಮುದಾಯಗಳಿಗೆ ಮತ್ತು ಶೋಶಿತರ ಪರವಾದ ತತ್ವ ಚಿಂತನೆಗಳಿಗೆ ಒಂದು ನೈತಿಕ ಸ್ತೈರ್ಯವನ್ನು ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ತಂದುಕೊಟ್ಟಿದ್ದಾರೆ, ಇನ್ನೂ ತರುತ್ತಾರೆ ಎಂಬ ಆಸೆ ಅದು.
ಅಶ್ಟಕ್ಕೂ ಈ ವಿ*ಶ್ವರ ಬಟ್ಟ ಯಾರು? ಅವನೊಬ್ಬ ಪತ್ರಕರ್ತನ ವೇಶದ ಸೋಗಲಾಡಿ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ನೈತಿಕತೆಯನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿದವ. ಒಂದು ಕಡೆ ವಿಜಯಸಂಕೇಶ್ವರ ಎಂಬ ಉದ್ಯಮಪತಿ ಅನೈತಿಕ ದಾರಿಯಲ್ಲಿ ಪತ್ರಿಕೋದ್ಯಮವನ್ನು ಹಳ್ಳ ಹಿಡಿಸಿದರೆ ಅವನ ಆಸರೆಯಲ್ಲಿ ಈ ವಿಶ ಬಟ್ಟ ದೊಡ್ಡ ಅವಾಂತರಗಳನ್ನೇ ನಡೆಸಿಬಿಟ್ಟ. ಅಂತರ್ಯದಲ್ಲಿ ಒಬ್ಬ ಜಾತಿ ದುರಬಿಮಾನಿಯಾದ ಬಟ್ಟ ತನ್ನ ಅನುಕೂಲತೆಗಾಗಿ ಬಲಪಂತದೊಂದಿಗೆ ನಿಂತವನು. ತನ್ನ ಜಾತಿಯಲ್ಲೇ ಇರುವ ಅನೇಕ ಪ್ರಜ್ಞಾವಂತರಾದವರು ಕೊಳಕ ರಾಗವೇಶನ ವಿರುದ್ದ ಸೆಡ್ಡು ಹೊಡೆದರೂ ಬಟ್ಟ ಅವನ ಸಮರ್ತನೆಗೆ ನಿಂತು ತಾನೆಂತ ಕೆಳಮಟ್ಟದಲ್ಲಿದ್ದೇನೆಂದು ತೋರಿಸಿಕೊಂಡ ಈ ಬಟ್ಟ. ರಾಗವೇಶ ನಡೆಸಿದ ಕಾಮಕಾಂಡಕ್ಕಿಂತಲೂ ಕಡಿಮೆ ಪ್ರಮಾಣದ ಒಂದು ವಿಶಯದಲ್ಲಿ ಒಬ್ಬ ಶೂದ್ರ ಜಾತಿಯ ಮಂತ್ರಿ- ಹಾಲಪ್ಪ ಸಿಕ್ಕಿಕೊಂಡಾಗ ಇದೇ ಬಟ್ಟ ಮುತುವರ್ಜಿ ವಹಿಸಿ ಆ ಮಂತ್ರಿ ಕೆಲಸ ಕಳೆದುಕೊಳ್ಳುವವರೆಗೂ ಬಿಡಲಿಲ್ಲ. ಅದಕ್ಕಾಗಿ ಪತ್ರಿಕೆಯನ್ನು ಬಳಸಿಕೊಳ್ಳುವ ಈತ ಇದೇ ಬುದ್ದಿಯನ್ನು ತನ್ನ ಜಾತಿಯ ರಾಗವೇಶನ ವಿಶಯದಲ್ಲಿ ತದ್ವಿರುದ್ದವಾಗಿ ನಡೆದುಕೊಂಡ. ಇದಕ್ಕೆ ಏನೆಂದು ಕರೆಯಬಹುದು?
ಲೋಕಾಯುಕ್ತ ವರದಿಯಲ್ಲಿ ಗಣಿರೆಡ್ಡಿಗಳಿಂದ ಕಕ್ಕಸು ತಿಂದವರ ಪಟ್ಟಿಯಲ್ಲಿ ವಿ.ಬಟ್ ಎಂಬ ಹೆಸರು ಇತ್ತು. ಆ ವಿ ಬಟ್ ಯಾರು ಅಂತ ಬಿಡಿಸಿ ಹೇಳಬೇಕಿಲ್ಲ ತಾನೆ?
ಇನ್ನು ಈ ಬಟ್ಟನ ಬರೆಹಗಳಲ್ಲಿಯಂತೂ ಬಿಡಿ. ಒಬ್ಬ ಮನುಶ್ಯನಿಗೆ ಇರಬಹುದಾದ ಅಸಹ್ಯಗಳು, ದುಷ್ಟತನಗಳು ಏನೇನಿರಲು ಸಾದ್ಯವೋ ಎಲ್ಲವೂ ಅದರಲ್ಲಿ ಕಾಣಲು ಸಾದ್ಯ. ಮಾಜಿ ಮುಕ್ಯಮಂತ್ರಿ ವೀರಪ್ಪ ಮೊಯಿಲಿಯವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಸಂದಾಗ ʼಬೈರಪ್ಪನಿಗೆ ಬಂದ ದೊಡ್ಡ ಪ್ರಶಸ್ತಿ ಒಬ್ಬ ಶೂದ್ರನಿಗೆ ಬಂತಲ್ಲಾ ಎಂಬ ಜಾತಿ ಈರ್ಶೆಯಿಂದ ವೀರಪ್ಪ ಮೊಯಿಲಿಯವರ ಕುರಿತು ಯಾವ ಪರಿ ಕಾರಿಕೊಂಡಿದ್ದ ಎಂಬುದು ನಿಮಗೆ ನೆನಪಿರಬಹುದು. ಶೂದ್ರರಲ್ಲಿ ಪ್ರತಿಬೆ ಕಂಡರೇನೇ ಆಗದಶ್ಟು ಅಸಹನೆ ಇವನಿಗೆ. ಇವನು ತಾನು ಯಾರ ಬಗೆಗೆಲ್ಲಾ ಅಸನಹೆ ತೋರಿಸಲು ಸಾದ್ಯವೋ ಅವರ ಕುರಿತು ಅಕ್ಷರಬೇದಿ ಮಾಡಿಕೊಂಡಿದ್ದಕ್ಕೆ ಲೆಕ್ಕವಿಲ್ಲ. ಇನ್ನು ಯಾರಾದರೂ ದೊಡ್ಡ ಸಾಹಿತಿಗಳ ಕುರಿತು ನೇರವಾಗಿ ತನ್ನ ಹೆಸರಲ್ಲಿ ಬೇದಿ ಮಾಡಿಕೊಂಡರೆ ಜನ ಮಕಕ್ಕೆ ಉಗಿಯಬಹುದು ಎಂಬ ಬಯದಿಂದ ವಿಕ್ರಮ್ ಸಂಪತ್ ಗೌಡ ಎಂಬ ನಕಲಿ ಹೆಸರಿನಿಂದ ಬರೆಯತೊಡಗಿದ್ದ. ಅವನ್ನು ಓದಿ ಯಾರಾದರೂ ಬೈದುಕೊಂಡರೆ ಒಬ್ಬ ಒಕ್ಕಲಿಗ ಗೌಡನ ಮರ್ಯಾದೆ ತಾನೆ ಹೋಗುವುದು ತಾನು ಹೇಗಿದ್ರೂ ಸೇಪಲ್ಲ!
ಇನ್ನು ಪತ್ರಿಕೋದ್ಯಮ ತಲೆಬುಡ ಗೊತ್ತಿಲ್ಲದ ಆದರೆ ಆಕರ್ಶಕ ಬರೆಹದ ಶೈಲಿ ಇದ್ದ ಪ್ರತಾಮ ಸಿಮ್ಮ ಎಂಬ ಎಳೆನಿಂಬೆಕಾಯಿಯನ್ನು ಈತ ಬೆಳೆಸಿದ್ದೇ ತನ್ನೊಳಗಿನ ವಿಶವನ್ನು ಅವನ ಮೂಲಕ ಕಾರಿಸಲು. ಅನಂತಮೂರ್ತಿಯವರಿರಲಿ, ಗಿರೀಶ್ ಕಾರ್ನಾಡರಿರಲಿ ಯಾರೇ ಇರಲಿ ನಾಡಿನ ಸಾಹಿತಿ ಬುದ್ದಿಜೀವಿಗಳನ್ನು ರಾಕ್ಷಸೀಕರಿಸುವುದೇ ಬಟ್ಟ-ಸಿಮ್ಮರ ಅಜೆಂಡಾವಾಗಿತ್ತು.
ಇನ್ನು ಮೀಸಲಾತಿಯ ಕುರಿತ ಅಸಹನೆಯನ್ನು ಕಾರಿಕೊಳ್ಳಲು ಒಂದು ಪೇಕ್ ನ್ಯೂಸನ್ನ್ ಸೃಶ್ಟಿಸಿ ಬ್ರಾಮಣನೊಬ್ಬನಿಗೆ ಅನ್ಯಾಯವಾಗಿದೆ ಎಂಬ ಹುಯಿಲಿಟ್ಟುಬಿಟ್ಟನಲ್ಲ.
ಈ ನಾಡು ಕಂಡ ದಿಟ್ಟ ಮತ್ತು ಅಪಾರ ಸಾಮಾಜಿಕ ಬದ್ದತೆಯ ಗೌರಿ ಲಂಕೇಶರ ಕುರಿತು ಹೀನ ಮಟ್ಟದಲ್ಲಿ ಬರೆದಿದ್ದಿರಬಹುದು ಇತ್ತೀಚೆಗೆ ಮಾನ್ಯ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರ ಕಪ್ಪು ಬಣ್ಣವನ್ನು ಕಾಗೆಗೆ ಹೋಲಿಸಿ ಬರೆದ ರೇಸಿಸ್ಟ್ ಬರೆಹವಿರಬಹುದು, ಹೆಣ್ಣುಮಕ್ಕಳ ಕುರಿತು ಪದೇ ಪದೇ ಬರೆಯುವ ಸೆಕ್ಸಿಸ್ಟ್ ವಾಕ್ಯಗಳಿರಬಹುದು ಎಲ್ಲವೂ ಈ ಬಟ್ಟನೊಬ್ಬ ಮೆದುಳು-ಮನಸು ಕೊಳೆತ ಹೊಲಸು ಜಂತು ಎನ್ನುವುದನ್ನಶ್ಟೇ ಸಾಬೀತು ಮಾಡಿವೆ.
ಸಿದ್ದರಾಮಯ್ಯ ಅವರನ್ನು ನಿದ್ದೆರಾಮಯ್ಯ ಎಂದು ಹೀಯಾಳಿಸಿ ಈ ಬಟ್ಟ ಹಾಕಿದ್ದ ಟ್ವೀಟೊಂದು ಮೊನ್ನೆ ಹರಿದಾಡಿತು. ಅದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಅವರ ಮೇಲಿನ ದ್ವೇಶದಿಂದ ಇವನು ಮಾಡಿರುವ ಕೆಲಸಗಳು ಒಂದೆರಡಲ್ಲ. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಕ್ಯಮಂತ್ರಿಗಳಾಗಿದ್ದಾಗ ಸೋಶಲ್ ಮೀಡಿಯಾದಲ್ಲಿ ಅವರನ್ನು ಅತ್ಯಂತ ನಂಜುಬರಿತವಾಗಿ ಟ್ರೋಲ್ ಮಾಡುವ ಒಂದು ಹೈನಾಗಳ ಗುಂಪು ಹುಟ್ಟಿಕೊಂಡಿತು. ಇದಕ್ಕೆ ರೋಹಿತ್ ಚಕ್ರತೀರ್ತ, ನಕಲಿ ಜಾತಿ ಸರ್ಟಿಪಿಕೇಟಿನ ಕಳ್ಳ ಶಣ್ಮುಕ, ವಾಕರಿಕೆಯ ಜೋಕರ್ ನವೀನ್ ಸಾಗರ್, ಮೊದಲಾದ ಜಂತುಗಳು ಮುಂದಾಳತ್ವ ವಹಿಸಿದ್ದವು. ಇವುಗಳ ಕೆಲಸವೇ ದಿನದ ಇಪ್ಪತ್ನಾಲ್ಕು ತಾಸು ಸಿದ್ದರಾಮಯ್ಯ ಅವರ ಕುರಿತು ಹೀನಾತಿಹೀನವಾಗಿ ಕಾರಿಕೊಳ್ಳುವುದಾಗಿತ್ತು. ಆಗ ಮುಕ್ಯಮಂತ್ರಿಗಳ ಸಲಹೆಗಾರರಾಗಿದ್ದ ದಿನೇಶ್ ಅಮೀನ್ ಮಟ್ಟು ಅವರು ಈ ಹೈನಾ ಗ್ಯಾಂಗಿನ ಮತ್ತೊಂದು ಟಾರ್ಗೆಟ್. ನಂತರದಲ್ಲಿ ಈ ವಿಶಬಟ್ಟ ವಿಶ್ವವಾಣಿ ಪತ್ರಿಕೆಯ ಸಂಪಾದಕನಾದ ಮೇಲೆ ಮೊದಲು ಮಾಡಿದ ಕೆಲಸ ಈ ರೋಹಿತ್ ಚಕ್ರತೀರ್ತ, ನವೀನ್ ಸಾಗರ ಮೊದಲಾದ ದುಶ್ಟ ಕ್ರಿಮಿಕೀಟಗಳನ್ನು ಆ ಪತ್ರಿಕೆಯ ಅಂಕಣಕಾರರನ್ನಾಗಿ ಮಾಡಿದ್ದು. ನಂತರ ಬಿಜೆಪಿ ಸರ್ಕಾರ ಅನೈತಿಕವಾಗಿ ರಚನೆಗೊಂಡಾಗ ಅದೇ ಕ್ರಿಮಿಕೀಟಗಳನ್ನು ಪುಸ್ತಕ ಪ್ರಾದಿಕಾರ, ಕುವೆಂಪು ಬಾಶಾಬಾರತಿ ಪ್ರಾದಿಕಾರ, ಮತ್ತಿತರ ಕಡೆಗಳನ್ನು ತುಂಬಲಾಯ್ತು. ಚಕ್ರತೀರ್ತನಂತ ಸಿಂಕ್ ತಜ್ಞ ಮತ್ತು ಸಿಇಟಿ ಪ್ರೊಪೆಸರನನ್ನು ಪಟ್ಯಪುಸ್ತಕ ಪರಿಶ್ಕರಣೆಗೆ ಬಿಜೆಪಿ ಸರ್ಕಾರ ನೇಮಿಸಲು ಇದ್ದ ಏಕೈಕ ಮಾನದಂಡವೇ ಅವನು ಸಿದ್ದರಾಮಯ್ಯ ಮುಕ್ಯಮಂತ್ರಿಯಾಗಿದ್ದಾಗ ನಡೆಸಿದ್ದ ಸಿದ್ದರಾಮಯ್ಯನವರ ಮೇಲೆ ನಡೆಸಿದ್ದ ಬ್ರಾಮಿನಿಕಲ್ ನಂಜಿನ ದಾಳಿಗಳು. ಬೇರೆ ಯಾವ ಅರ್ಹತೆಗಳೂ ಅವರಿಗೆ ಇರಲಿಲ್ಲ ಮತ್ತು ಈ ದಾಳಿಗಳಿಗೆ ಕುಮ್ಮಕ್ಕು ನೀಡಿದ್ದು ಇದೇ ವಿಶಬಟ್ಟ.
ಇಲ್ಲಿ ಬಹಳ ಮುಕ್ಯವಾದ ಸಂಗತಿಯೇನೆಂದರೆ, ವಿಶಬಟ್ಟನನ್ನು ಒಳಗೊಂಡ ಈ ಕರ್ನಾಟಕದ ಬ್ರಾಮಿನಿಕಲ್ ಹೈನಾಗಳ ಗುಂಪು ಬ್ರಾಮಣೇತರ ಚಿಂತಕರನ್ನು, ಸಾಹಿತಿಗಳನ್ನು, ಬ್ರಾಮಣರಾಗಿದ್ದೂ ಜಾತ್ಯತೀತರಾಗಿರುವ ಚಿಂತಕರನ್ನು, ಬುದ್ದಿಜೀವಿಗಳನ್ನು, ಮಹಿಳೆಯರನ್ನು, ಶೂದ್ರ ರಾಜಕಾರಣಿಗಳನ್ನು ಮತ್ತು ಒಬ್ಬ ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ವಾಚಾಮಗೋಚರವಾಗಿ ನಿಂದಿಸುತ್ತಾ, ಟ್ರೋಲ್ ಮಾಡುತ್ತಾ, ನಂಜುಬರಿತ ದಾಳಿಗಳನ್ನು ನಡೆಸುತ್ತಿದ್ದಾಗ ಸಾಮಾಜಿಕ ಮಾದ್ಯಮದ ಮೂಲಕ ಹಗಲು ರಾತ್ರಿಯೆನ್ನದೆ, ತಮ್ಮ ಕುಟುಂಬಗಳ ಸುಕ-ಸಂತೋಶಗಳನ್ನೂ ಮರೆತು ಜೀವನ್ಮರಣ ಹೋರಾಟವೆಂಬತೆ ದನಿ ಎತ್ತಿ, ಸೈದ್ದಾಂತಿಕ ಸಂಗರ್ಶ ನಡೆಸಿ, ಅಕ್ಷರಗಳಲ್ಲೇ ಬಡಿದಾಡಿ, ಸೆಕ್ಯುಲರ್, ಅಂಬೇಡ್ಕರೈಟ್, ಪ್ರಗತಿಪರ ಚಿಂತನೆಗಳನ್ನು ಹಾಗೂ ಸ್ವತಃ ಸಿದ್ದರಾಮಯ್ಯ ಅವರನ್ನು ಜನನಾಯಕನಾಗಿ ಉಳಿಸಿಕೊಳ್ಳಲು ಬಡಿದಾಡಿದ ಸಹಸ್ರ ಸಹಸ್ರ ಸಂಕ್ಯೆಯ ಕಾಲಾಳುಗಳಿದ್ದಾರೆ.
ಈಗ ಆ ಸಾವಿರಾರು ಕಾಲಾಳುಗಳೇ ಹಕ್ಕಿನಿಂದಲೂ, ವಿನಂತಿಸುತ್ತಲೂ ಕೇಳುತ್ತಿದ್ದಾರೆ- ʼಸಿದ್ದರಾಮಯ್ಯನವರೇ ದಯವಿಟ್ಟು ವಿಶಬಟ್ಟನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಬೇಡಿʼ ಎಂದು.
– ಹರ್ಶಕುಮಾರ್ ಕುಗ್ವೆ, ಪತ್ರಕರ್ತರು
(ಈ ಬರೆಹದಲ್ಲಿ ಮಹಾಪ್ರಾಣ ಅಕ್ಷರಗಳನ್ನು ಬಳಸಿರುವುದಿಲ್ಲ)




