ಚೆನ್ನೈ: ತಮಿಳಗ ವೆಟ್ರಿ ಕಳಗಂ ಹೆಸರಿನಲ್ಲಿ ರಾಜಕೀಯ ಪಕ್ಷ ನೋಂದಾಯಿಸಲಾಗಿದೆ ಎಂದು ಕಾಲಿವುಡ್ ನಟ ವಿಜಯ್ ಹೇಳಿದ್ದಾರೆ.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ಭಾರತೀಯ ಚುನಾವಣಾ ಆಯೋಗ ಅಧಿಕೃತವಾಗಿ ತನ್ನ ಪಕ್ಷವನ್ನು ನೋಂದಾಯಿಸಿದೆ ಮತ್ತು ಚುನಾವಣಾ ರಾಜಕೀಯದಲ್ಲಿ ಭಾಗವಹಿಸಲು ಅನುಮತಿ ನೀಡಿದೆ ಎಂದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ಸಂಸ್ಥಾಪಕ ವಿಜಯ್ ಹೇಳಿದ್ದಾರೆ.
ತಮಿಳಗ ವೆಟ್ರಿ ಕಳಗಂ ಅನ್ನು ರಾಜಕೀಯ ಪಕ್ಷವಾಗಿ ನೋಂದಾಯಿಸಲು ಫೆಬ್ರವರಿ 2 ರಂದು ಭಾರತೀಯ ಚುನಾವಣಾ ಆಯೋಗವನ್ನು ಸಂಪರ್ಕಿಸಲಾಗಿತ್ತು ಮತ್ತು ಆಯೋಗ ನೋಂದಣಿಗೆ ಅನುಮತಿ ನೀಡಿದೆ ಎಂದಿದ್ದಾರೆ.

ನಮ್ಮ ದೇಶದ ಚುನಾವಣಾ ಆಯೋಗ ಇದನ್ನು ಕಾನೂನುಬದ್ಧವಾಗಿ ಪರಿಗಣಿಸಿದೆ ಮತ್ತು ಈಗ ನಮ್ಮ ತಮಿಳಗ ವೆಟ್ರಿ ಕಳಗಂ ಅನ್ನು ರಾಜಕೀಯ ಪಕ್ಷವಾಗಿ ನೋಂದಾಯಿಸಿದೆ ಮತ್ತು ನೋಂದಾಯಿತ ಪಕ್ಷವಾಗಿ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಲು ಅವಕಾಶ ನೀಡಿದೆ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ.
ಮುಂದಿನ ಸವಾಲುಗಳತ್ತ ಆರಂಭಿಕ ಹೆಜ್ಜೆಯಾಗಿ ಪಕ್ಷಕ್ಕೆ ಈಗ ಮೊದಲ ಬಾಗಿಲು ತೆರೆದಿದೆ, ಈ ಹಿನ್ನೆಲೆಯಲ್ಲಿ ಪಕ್ಷ ರಾಜ್ಯ ಸಮ್ಮೇಳನಕ್ಕೆ ಸಿದ್ಧತೆ ನಡೆಸಿದ್ದು, ಅಧಿಕೃತ ಘೋಷಣೆಗಾಗಿ ಕಾಯುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ನಾವು ತಡೆಗೋಡೆಗಳನ್ನು ಮುರಿಯೋಣ, ಧ್ವಜವನ್ನು ಎತ್ತೋಣ, ನೀತಿಯ ಜ್ಯೋತಿಯನ್ನು ಹೊತ್ತೊಯ್ಯೋಣ ಮತ್ತು ತಮಿಳುನಾಡಿನ ಜನರ ಪ್ರಮುಖ ರಾಜಕೀಯ ಪಕ್ಷವಾಗಿ ತಮಿಳಗ ವೆಟ್ರಿ ಕಳಗಂಗೆ ಬರೋಣ ಎಂದು ಜನತೆಗೆ ಕರೆನೀಡಿದ್ದಾರೆ.
ಸೂಪರ್‌ಸ್ಟಾರ್ ಜೋಸೆಫ್ ವಿಜಯ್, ಫೆಬ್ರವರಿ 2 ರಂದು ತಮ್ಮ ರಾಜಕೀಯ ಪಕ್ಷ ಸ್ಥಾಪಿಸುವ ವಿಷಯವನ್ನು ಘೋಷಿಸಿದ್ದರು. ಅವರು 2024ರ ಚುನಾವಣೆಯ ಬದಲಿಗೆ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು.
ಆಗಸ್ಟ್ 22 ರಂದು ತಮ್ಮ ರಾಜಕೀಯ ಪಕ್ಷದ ಧ್ವಜ ಮತ್ತು ಚಿಹ್ನೆಯನ್ನು ಅನಾವರಣಗೊಳಿಸಿದ್ದರು. ನಂತರ ಪನೈಯೂರ್ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ್ದರು. ರಾಜಕೀಯ ಪಕ್ಷಕ್ಕೆ ಅಧಿಕೃತ ಹಾಡನ್ನು ಕೂಡ ಬಿಡುಗಡೆ ಮಾಡಿದರು.
ತಮಿಳುನಾಡಿನ ಕಲ್ಯಾಣಕ್ಕಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿರುವ ವಿಜಯ್ ಇನ್ನು ಮುಂದೆ ತಮಿಳುನಾಡು ಉತ್ತಮವಾಗಿರುತ್ತದೆ. ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


