ಸೂಲಿಬೆಲೆ ರಾಷ್ಟ್ರವಾದಿ, ಚೈತ್ರಾ ಕುಂದಾಪುರ ದೇಶಪ್ರೇಮಿ ಆಗುವುದಾದರೆ ನಾನೇಕೆ ಸ್ವಾಮೀಜಿಯಾಗಬಾರದು?

3 years ago

#Sulibele #nationalist #ChaitraKundapur #patriot #Swamiji #lokeshpoojari


ನನ್ನನ್ನು ಶ್ರೀ ಶ್ರೀ “ಲೋಕೇಶಾನಂದ ಸ್ವಾಮೀಜಿ” ಎಂದು ದಯವಿಟ್ಟು ಸ್ವೀಕರಿಸಿ. ನನ್ನ ಸ್ವಂತ ಜಾಗದಲ್ಲಿ ಮಠವನ್ನು ಮಾಡುತ್ತೇನೆ ಎಂದು ಲೋಕೇಶ್ ಪೂಜಾರಿ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
https://youtu.be/90oHfH46Smo
ನೋಣಯ್ಯನಂತಹಾ ಕಚಡಾ ಕಂಡಕ್ಟರ್ ಒಬ್ಬನು ಸ್ವಾಮೀಜಿ ಆಗುವುದಾದರೆ.. ಸೂಲಿಬೆಲೆ ರಾಷ್ಟ್ರವಾದಿ ಆಗುವುದಾದರೆ.. ಚೈತ್ರಾ ಕುಂದಾಪುರ ದೇಶಪ್ರೇಮಿ ವಾಗ್ಮಿ ಆಗುವುದಾದರೆ…

ತೆರಿಗೆ ವಂಚಿಸದೇ…. ಸುಮಾರು ಹತ್ತು ವರ್ಷಗಳಿಂದ ನೂರಾರು ಜನಕ್ಕೆ ಕೆಲಸ ನೀಡಿ… ವರ್ಷಕ್ಕೆ ನಲವತ್ತು ಲಕ್ಷಕ್ಕೂ ಮಿಕ್ಕಿ ಸರಕು ಮತ್ತು ಸೇವಾ ತೆರಿಗೆ ಪಾವತಿಸಿ…

ಕಾರ್ಮಿಕ ಕಾನೂನು ಪಾಲಿಸಿ.. ಪರಿಸರ ಸಂರಕ್ಷಣೆ ಮಾಡುತ್ತಾ.. ಗಿಡಗಳನ್ನು ತಯಾರು ಮಾಡುವ ನರ್ಸರಿ ಉದ್ಯಮ ನಡೆಸುವ ನಾನು ಯಾಕೆ ಸ್ವಾಮೀಜಿ ಆಗಬಾರದು..

ನನಗೆ ನೂರಕ್ಕೂ ಹೆಚ್ಚು ಭಜನೆಗಳು ಬಾಯಿ ಪಾಠ ಇವೆ.
ನನ್ನನ್ನು “ಲೋಕೇಶಾನಂದ ಸ್ವಾಮೀಜಿ” ಎಂದು ಕರೆಯಿರಿ..
ಕರ್ಮ ಜೀವಿ ಆನಂದ ಪೂಜಾರಿಯವರು ನನ್ನ ತಂದೆ. ನನ್ನ ಮಠದ ಹೆಸರು “ಪ್ಲಾಟಿನಂ ದೇಹೀಮಠ” ಎಂದು ಹೇಳಿದ್ದಾರೆ.

Leave a Reply