ಚಾಮರಾಜನಗರದಲ್ಲಿ ರಾಜ್ಯಮಟ್ಟದ ಸಿಜಿಕೆ ನಾಟಕೋತ್ಸವ

2 years ago

ಚಾಮರಾಜನಗರ: ಚಾಮರಾಜನಗರದ ಪ್ರತಿಷ್ಠಿತ ರಂಗವಾಹಿನಿ ಸಂಸ್ಥೆ , ಕರ್ನಾಟಕ ರಂಗ ಪರಿಷತ್ತು, ಕರ್ನಾಟಕ ಬೀದಿ ನಾಟಕ ಅಕಾಡೆಮಿ ಸಹಯೋಗದಲ್ಲಿ ಜನವರಿ 27 ಮತ್ತು 28 ರಂದು ಇಲ್ಲಿನ ಜೆ ಹೆಚ್ ಪಟೇಲ್ ಸಭಾಂಗಣದಲ್ಲಿ ರಾಜ್ಯಮಟ್ಟದ ಸಿಜಿಕೆ ನಾಟಕೋತ್ಸವ ಹಮ್ಮಿಕೊಂಡಿದೆ.

ಜನಪ್ರಿಯ ನಾಟಕಗಳಾದ ಶ್ರೀ ಕೃಷ್ಣ ಸಂಧಾನ ಮತ್ತು ಅಕ್ಕ ನಾಗಲಾಂಬಿಕೆ ನಾಟಕಗಳನ್ನು ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಧಾತ್ರಿ ರಂಗಸಂಸ್ಥೆಯ ಕಲಾವಿದರು ಅಭಿನಯಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ರಂಗಭೂಮಿ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ಪೌರಾಣಿಕ ನಾಟಕಗಳ ಹಾರ್ಮೋನಿಯಂ ಮಾಸ್ಟರ್ ಮಂಗಲ ಶಿವಣ್ಣ ಹಾಗೂ ರಂಗ ಕಲಾವಿದ ನಂಜದೇವನಪುರದ ಪುರುಷೋತ್ತಮ್ ಅವರಿಗೆ 2023ನೇ ಸಾಲಿನ ರಾಜ್ಯಮಟ್ಟದ ಸಿಜಿಕೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ರಂಗ ಪರಿಷತ್ತಿನ ರಾಜ್ಯ ಸಂಚಾಲಕ ಹಾಗೂ ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ಕನ್ನಡ ಚಳುವಳಿಗಾರ ಶಾ. ಮುರಳಿ ಅವರಿಗೆ – ಕನ್ನಡ ವ್ಯಾಘ್ರ- ಬಿರುದು ಪ್ರದಾನ

ಜನವರಿ 28ರಂದು ರಂಗವಾಹಿನಿ ಸಂಸ್ಥೆ ಏರ್ಪಡಿಸಿರುವ ರಾಜ್ಯಮಟ್ಟದ ಸಿಜಿಕೆ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಹಿರಿಯ ಕನ್ನಡ ಚಳುವಳಿಗಾರ ಶಾ. ಮುರಳಿ ಅವರಿಗೆ- ಕನ್ನಡ ವ್ಯಾಘ್ರ- ಬಿರುದು ಪ್ರದಾನ ಮಾಡಲಾಗುವುದು. ಈ ಸಂದರ್ಭದಲ್ಲಿ ನಾಡಿನ ಅನೇಕ ಹಿರಿಯ ಸಾಹಿತಿಗಳು, ಕನ್ನಡ ಚಳುವಳಿಗಾರರು ಗಣ್ಯರು ಭಾಗವಹಿಸುವರು ಎಂದು ರಂಗವಾಹಿನಿ ಪ್ರಕಟಣೆ ತಿಳಿಸಿದೆ.

Leave a Reply