ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಬರ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ ಅಂತ ಆರೋಪ ಮಾಡುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಿದೆ.
ಎಸ್‌ಡಿಆರ್‌ಎಫ್ ಅಡಿ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. 31 ಜಿಲ್ಲೆಗಳಿಗೆ 323 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ಈ ಬಾರಿ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಅಂತ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಅಲ್ಲದೆ, ಕೇಂದ್ರ ಸರ್ಕಾರಕ್ಕೆ ಬರ ಪರಿಹಾರಕ್ಕೆ ಅಂತ 17 ಸಾವಿರ ಕೋಟಿ ರೂ. ಪರಿಹಾರ ಕೇಳಿದೆ.
ಈವರೆಗೂ ಕೇಂದ್ರ ಸರ್ಕಾರ ಒಂದೂ ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ ಅಂತ ಸಿಎಂ ಆದಿಯಾಗಿ ಸಚಿವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ಅಂತ 324 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಬೆಳಗಾವಿ ಜಿಲ್ಲೆಗೆ ಅತ್ಯಧಿಕ 22.50 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಬರ ಅಷ್ಟಾಗಿ ಪರಿಣಾಮ ಬೀರದ ದಕ್ಷಿಣ ಕನ್ನಡ ಜಿಲ್ಲೆಗೆ ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಮೂರು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ
ಯಾವ ಜಿಲ್ಲೆಗೆ ಎಷ್ಟು ಅನುದಾನ?:
ಬೆಳಗಾವಿ- 22.50 ಕೋಟಿ
ಬಾಗಲಕೋಟೆ- 13.50 ಕೋಟಿ
ವಿಜಯಪುರ- 18ಕೋಟಿ
ಗದಗ-10.50 ಕೋಟಿ
ಹಾವೇರಿ-12 ಕೋಟಿ
ಧಾರವಾಡ-12 ಕೋಟಿ
ಬೆಂಗಳೂರು ನಗರ- 7.50 ಕೋಟಿ
ಬೆಂಗಳೂರು ಗ್ರಾಮಾಂತರ- 6 ಕೋಟಿ
ರಾಮನಗರ-7.50 ಕೋಟಿ
ಕೋಲಾರ -9 ಕೋಟಿ
ಚಿಕ್ಕಬಳ್ಳಾಪುರ- 9 ಕೋಟಿ
ತುಮಕೂರು-15 ಕೋಟಿ
ಚಿತ್ರದುರ್ಗ- 9 ಕೋಟಿ
ದಾವಣಗೆರೆ- 9 ಕೋಟಿ
ಚಾಮರಾಜನಗರ-7.50 ಕೋಟಿ
ಮೈಸೂರು- 13.50 ಕೋಟಿ
ಮಂಡ್ಯ- 10.50 ಕೋಟಿ
ಬಳ್ಳಾರಿ- 7.50 ಕೋಟಿ
ಕೊಪ್ಪಳ- 10.50 ಕೋಟಿ
ರಾಯಚೂರು-9 ಕೋಟಿ
ಕಲಬುರ್ಗಿ- 16.50 ಕೋಟಿ
ಬೀದರ್- 4.50 ಕೋಟಿ
ಶಿವಮೊಗ್ಗ 10.50 ಕೋಟಿ
ಹಾಸನ- 12 ಕೋಟಿ
ಚಿಕ್ಕಮಗಳೂರು-12 ಕೋಟಿ
ಕೊಡಗು-7.50 ಕೋಟಿ
ದಕ್ಷಿಣ ಕನ್ನಡ- 3 ಕೋಟಿ
ಉಡುಪಿ- 4.50 ಕೋಟಿ
ಉತ್ತರ ಕನ್ನಡ-16.50 ಕೋಟಿ
ಯಾದಗಿರಿ-9 ಕೋಟಿ
ವಿಜಯನಗರ-9 ಕೋಟಿ




