ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಕಟ: ಬಾಲಕಿಯರೇ ಮೇಲುಗೈ

12 months ago

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದ ಹತ್ತನೆಯ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ನಿರೀಕ್ಷೆಯಂತೆ ಬಾಲಕಿಯರೇ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಒಟ್ಟಾರೆ ಶೇ.62.34ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಫಲಿತಾಂಶದ ವಿವರ ಪ್ರಕಟಿಸಿದ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈ ಬಾರಿ ರಾಜ್ಯದಲ್ಲಿ ಹೆಣ್ಣುಮಕ್ಕಳು ಪರೀಕ್ಷೆಗೆ ಹಾಜರಾದ ಪೈಕಿ 2,96,438 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದು, ಶೇ.74ರಷ್ಟು ಫಲಿತಾಂಶ ಬಂದಿದೆ ಎಂದರು.

ಅದೇ ರೀತಿಯಲ್ಲಿ 3,90,311 ಗಂಡು ಮಕ್ಕಳು ಪರೀಕ್ಷೆ ಬರೆದಿದ್ದು, 2,26,637 ಮಂದಿ ಪಾಸಾಗಿ ಶೇ.58.07ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ನಗರದ ಪ್ರದೇಶದಲ್ಲಿ 3,35,446 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದ್ದು 2,24,900 ಮಂದಿ ಪಾಸಾಗುವ ಮೂಲಕ ಶೇ.67.05 ರಷ್ಟು ಫಲಿತಾಂಶ ಬಂದಿದೆ ಎಂದರು.

ಗ್ರಾಮೀಣ ಭಾಗದಲ್ಲಿ 4,55,444 ಮಂದಿ ಪರೀಕ್ಷೆಗೆ ಹಾಜರಾಗಿ ಮಂದಿ ಉತ್ತೀರ್ಣರಾಗಿದ್ದಾರೆ. ಶೇ.65.47ರಷ್ಟು ಫಲಿತಾಂಶ ಬಂದಿದೆ.2,98,175 ಅನುದಾನ ರಹಿತ ಶಾಲಾ ಕಾಲೇಜುಗಳ ಫಲಿತಾಂಶದಲ್ಲಿ ಮುಂಚೂಣಿಯಲ್ಲಿದೆ. ಸರ್ಕಾರಿ ಶಾಲೆಗಳಲ್ಲಿ ಶೇ.62.07, ಅನುದಾನಿತ ಶಾಲೆಗಳಲ್ಲಿ ಶೇ.58.97, ಅನುದಾನ ರಹಿತ ಶಾಲೆಗಳಲ್ಲಿ ಶೇ.75.59ರಷ್ಟು ಫಲಿತಾಂಶ ಬಂದಿದೆ. ಆರು ಸರ್ಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ವರದಿಯಾಗಿದ್ದು, ಅನುದಾನಿತ 30, ಅನುದಾನ ರಹಿತ 108 ಶಾಲೆಗಳನ್ನು ಒಳಗೊಂಡಂತೆ 144 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ವರದಿಯಾಗಿದೆ‌ ಎಂದು ವಿವರಿಸಿದರು.

ಒಟ್ಟಾರೆ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ ಕಲಬುರ್ಗಿ ಕೊನೆಯ ಸ್ಥಾನದಲ್ಲಿದೆ ಬೆಳಗಾವಿ 25 ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 26ನೇ ಸ್ಥಾನದಲ್ಲಿದೆ ಎಂದರು.

ಕಳೆದ ವರ್ಷದ ಶೇ.53ರಷ್ಟಿದ್ದ ಫಲಿತಾಂಶದಲ್ಲಿ ಈ ವರ್ಷ ಶೇ.8ರಷ್ಟು ಸುಧಾರಣೆ ಕಂಡಿದೆ. ಶೇಕಡವಾರು 60ಕ್ಕಿಂತ ಹೆಚ್ಚು ಅಂಕ ಪಡೆದವರು ಕಳೆದ ವರ್ಷ ಶೇ.62ರಷ್ಟಿದ್ದರೂ, ಈ ಬಾರಿ ಶೇ.75ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಕಳೆದ ವರ್ಷ 625 ಪೂರ್ಣ ಅಂಕ ಪಡೆದವರು ಇಬ್ಬರು ಮಾತ್ರ ಇದ್ದರು. ಈ ಬಾರಿ 22 ಮಕ್ಕಳು ಪೂರ್ಣ ಅಂಕಗಳನ್ನು ಪಡೆದಿದ್ದಾರೆ. ಅದರಲ್ಲಿ ಇಬ್ಬರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿದ್ದಾರೆ ಎಂದರು.

ಕಳೆದ ವರ್ಷದ ಫಲಿತಾಂಶ ಶೇ.53ರಷಾಗಿತ್ತು. ಸರ್ಕಾರ ಗ್ರೆಸ್ ಮಾರ್ಕ್ ಕೊಟ್ಟಿದ್ದರಿಂದ ಒಟ್ಟು ಫಲಿತಾಂಶ ಶೇ.73ರಷ್ಟಕ್ಕೆ ಹೆಚ್ಚಾಗಿತ್ತು. ಕಲಿಕೆಯಲ್ಲಿ ಹಿಂದುಳಿದವರಿಗೆ ಗ್ರೇಸ್‌ ಮಾರ್ಕ್ ಅನಿವಾರ್ಯವಾಗಿತ್ತು. ಜೊತೆಗೆ ಪರೀಕ್ಷೆ-2 ಮ ಮತ್ತು 3 ಹಂತಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು ಎಂದರು.

ಆನಂತರ ಸಿಎಂ ಅವರ ಸೂಚನೆ ಮೇರೆಗೆ ಬಹಳಷ್ಟು ಸುಧಾರಣೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಿಶೇಷ ತರಗತಿಗಳನ್ನು ನಡೆಸಲಾಗಿದೆ. ಶಾಲಾ ಕೊಠಡಿಗಳಿಗೆ ಉಚಿತ ವಿದ್ಯುತ್‌ ಪೂರೈಕೆ ಮಾಡಿ ವಿಶೇಷ ತರಗತಿ ಆಯೋಜಿಸಲಾಗಿದೆ. 13 ಸಾವಿರ ಅಥಿತಿ ಶಿಕ್ಷಕರ ನೇಮಿಸಲಾಗಿದೆ, ಈ ಎಲ್ಲಾ ಕ್ರಮಗಳಿಂದ ಫಲಿತಾಂಶ ಸುಧಾರಣೆಯಾಗಿದೆ ಎಂದು ಹೇಳಿದರು. 1 ರಿಂದ 9ನೆ ತರಗತಿಯವರೆಗೂ ವಿದ್ಯಾರ್ಥಿಗಳು ಸಾಮರ್ಥ್ಯ ಪರೀಕ್ಷೆಗೆ ಸೂಕ್ತ ವ್ಯವಸ್ಥೆಗಳಿಲ್ಲ, ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೂ ಆತಂರಿಕ ಮೌಲ್ಯ ಮಾಪನ ನಡೆಸಲಾಗಿದೆ ಎಂದರು.

ಜಿಲ್ಲಾವಾರು ಫಲಿತಾಂಶ ಪ್ರಮಾಣ:

ದಕ್ಷಿಣ ಕನ್ನಡ – 91.12
ಉಡುಪಿ – 89.96
ಉತ್ತರಕನ್ನಡ – 83.19
ಶಿವಮೊಗ್ಗ- 82.29
ಕೊಡಗು – 82.21
ಹಾಸನ – 82.12
ಶಿರಸಿ – 80.47
ಚಿಕ್ಕಮಗಳೂರು – 77.90
ಬೆಂ.ಗ್ರಾಮಾಂತರ – 74.02
ಬೆಂ.ದಕ್ಷಿಣ – 72.30
ಬೆಂ.ಉತ್ತರ – 72.27
ಮಂಡ್ಯ – 69.27
ಹಾವೇರಿ – 69.03
ಕೋಲಾರ – 68.47
ಮೈಸೂರು – 68.39
ಬಾಗಲಕೋಟೆ – 68.29
ಗದಗ – 67.72
ಧಾರವಾಡ – 67.62
ವಿಜಯನಗರ – 67.62
ತುಮಕೂರು – 67.03
ದಾವಣಗೆರೆ – 66.09
ಚಿಕ್ಕಬಳ್ಳಾಪುರ – 63.6
ಚಿತ್ರದುರ್ಗ – 63.2
ರಾಮನಗರ – 63.12
ಬೆಳಗಾವಿ – 62.16
ಚಿಕ್ಕೋಡಿ – 62.12
ಚಾಮರಾಜನಗರ – 61.45
ಮಧುಗಿರಿ – 60.65
ಬಳ್ಳಾರಿ – 60.26
ಕೊಪ್ಪಳ – 57.32
ಬೀದರ್‌ – 53.25
ರಾಯಚೂರು – 52.05
ಯಾದಗಿರಿ – 51.60
ವಿಜಯಪುರ – 59.58
ಕಲಬುರಗಿ – 42.43

Leave a Reply