ಬೆಂಗಳೂರು: ಪದ್ಮನಾಭನಗರ, ಗಣೇಶಮಂದಿರ ವಾರ್ಡ್ ನಲ್ಲಿ ಎಸ್.ಎಲ್.ವಿ.ಸ್ವಾದಿಷ್ಚ್ ಹೋಟೆಲ್ ಹತ್ತಿರ ಶ್ರೀರಾಮ ನವಮಿ ಅಚರಣೆ ಹಾಗೂ ಬಂದ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ ಕೋಸಂಬರಿ ವಿತರಣೆ ಕಾರ್ಯಕ್ರಮ ಮತ್ತು ಮೇರುನಟ ಡಾ.ರಾಜ್ ಕುಮಾರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
- ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
- ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ: ಆರ್.ಅಶೋಕ
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
ಬಿಬಿಎಂಪಿ ಮಾಜಿ ಸದಸ್ಯರಾದ ಲಕ್ಷ್ಮಿ ಉಮೇಶ್, ಗಣೇಶ ಮಂದಿರ ವಾರ್ಡ್ ಬಿಜೆಪಿ ಮುಖಂಡ ಉಮೇಶ್ ಕಬ್ಬಾಳ್, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಮುಖಂಡ ಹರಿಬಾಬು, ಚೇತನ್ ಗೌಡ ಶ್ರೀರಾಮನಿಗೆ ವಿಶೇಷಪೂಜೆ ಸಲ್ಲಿಸಿ, ಪಾನಕ, ಕೋಸಂಬರಿ ವಿತರಣೆ ಮಾಡಿದರು. ಪದ್ಮಭೂಷಣ ಡಾ.ರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಉಮೇಶ್ ಕಬ್ಬಾಳ್ ಮಾತನಾಡಿ, ಆದರ್ಶ ಪುರುಷ, ಮಾರ್ಯಾದ ಪುರುಷೋತ್ತಮ ಪ್ರಭು ಶ್ರೀರಾಮನು ಎಲ್ಲರಿಗೂ ಪೂಜೆಸುವ ಆರಾಧ್ಯ ದೈವವಾಗಿದ್ದಾರೆ. ಕಾಶ್ಮೀರದ ಪೆಹಾಲ್ಗಾಮ್ ನಲ್ಲಿ ಉಗ್ರರ ದಾಳಿಯಿಂದ 28 ಜನ ಹುತಾತ್ಮರಾದರು. ಅವರ ಕುಟುಂಬಗಳಿಗೆ ಆತ್ಮಸ್ಥೈರ್ಯ ಸಿಗಲಿ, ಹುತಾತ್ಮರಿಗೆ ಪುಣ್ಯ ಪ್ರಾಪ್ತಿಯಾಗಲಿ ಪ್ರಭು ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಕನ್ನಡ ನಾಡು, ನುಡಿಯ ಉಳಿವಿಗೆ, ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಪದ್ಮಭೂಷಣ ಡಾ.ರಾಜ್ ಕುಮಾರ್ ರವರ ಚಲನಚಿತ್ರಗಳನ್ನು ನೋಡಿ ಬೆಳದವರು ನಾವು. ಸಮಾಜದ ಬದಲಾವಣೆಗೆ ಡಾ.ರಾಜ್ ಚಲನಚಿತ್ರಗಳು ಸಹಕಾರಿಯಾಗಿವೆ ಎಂದರು.
ಶಾಲೆಯ ನೂರಾರು ಮಕ್ಕಳು ರಾಮ, ಕೃಷ್ಣ, ಲಕ್ಷ್ಮಣ ಸೀತೆ, ಆಂಜನೇಯ ವಿವಿಧ ದೇವರುಗಳ ವೇಷಭೂಷಣ ತೊಟ್ಟು ಭಾಗವಹಿಸಿದ್ದರು. ಸ್ಥಳೀಯ ಸಾರ್ವಜನಿಕರು, ಬಿಜೆಪಿ ಮುಖಂಡರು ಭಾಗವಹಿಸಿದ್ದರು.









