ಹಿಂದೂ ಸಾಂಸ್ಕೃತಿಕ ವೇದಿಕೆ ವತಿಯಿಂದ ಶ್ರೀರಾಮನವಮಿ
ಬೆಂಗಳೂರು: ರಾಜಾಜಿನಗರ, ಶ್ರೀರಾಮಮಂದಿರದ ಡಾ.ರಾಜ್ ಕುಮಾರ್ ಪ್ರತಿಮೆ ಮುಂಭಾಗದಲ್ಲಿ ಹಿಂದೂ ಸಾಂಸ್ಕೃತಿಕ ಸಂಘದ ವತಿಯಿಂದ ಶ್ರೀರಾಮನ ಜನ್ಮದಿನಾಚರಣೆ ಪ್ರಯುಕ್ತ ಶ್ರೀರಾಮನವಮಿ ಹಬ್ಬವನ್ನು ಅದ್ದೂರಿಯಯಾಗಿ ಅಚರಣೆ ಮಾಡಲಾಯಿತು.
- ಹಾರಿಕಾ ಮಂಜುನಾಥ್ ವಿದೇಶಿ ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಡೆದಿದ್ದಾರೆಯೇ?
- ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
- ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ: ಆರ್.ಅಶೋಕ
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
ಮಾಜಿ ಶಿಕ್ಷಣ ಸಚಿ, ಶಾಸಕ ಎಸ್.ಸುರೇಶ್ ಕುಮಾರ್ ಶ್ರೀರಾಮನಿಗೆ ಪೂಜೆ ಸಲ್ಲಿಸಿ ಬಂದ ಭಕ್ತರಿಗೆ ಪಾನಕ, ಮಜ್ಜಿಗೆ, ಕೊಸಂಬರಿ ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಸುರೇಶ್, ಪಿತೃವಾಕ್ಯ ಪರಿಪಾಲಕ, ಆದರ್ಶ ಗುಣ, ಜನಪರ ಆಡಳಿತ ಮತ್ತು ಮಾರ್ಯಾದ ಪುರುಷೋತ್ತಮ ಎಲ್ಲ ಗುಣಗಳು ಇರುವ ಪ್ರಭು ಶ್ರೀರಾಮನು ಎಲ್ಲರಿಗೂ ಆದರ್ಶ ಎಂದರು.
ಪ್ರತಿಯೊಬ್ಬ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳನ್ನು ಓದಬೇಕು, ಅದನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಸಾಗಿದರೆ ಉತ್ತಮ ಪ್ರಜೆಯಾಗಬಹುದು. ಇಂದಿನ ಯುವ ಸಮುದಾಯ ಪ್ರಭು ಶ್ರೀರಾಮನ ಜೀವನ ಚರಿತ್ರೆಯನ್ನು ಅಭ್ಯಾಸ ಮಾಡಬೇಕು, ಕೆಟ್ಟ ಮಾರ್ಗಗಳು, ದುಷ್ಟ ಚಟಗಳಿಗೆ ಬಲಿಯಾವುದಿಲ್ಲ ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಶ್ರೀರಾಮಮಂದಿರ ನಿರ್ಮಾಣವಾಗಿರುವುದು ಇಡಿ ವಿಶ್ವದಲ್ಲಿ ಇರುವ ರಾಮ ಭಕ್ತರಿಗೆ ಸಂತೋಷದ ಸಂಗತಿಯಾಗಿದೆ. ಶ್ರೀರಾಮನ ಆದರ್ಶ ಗುಣಗಳನ್ನು ಎಲ್ಲರು ಪಾಲಿಸಿದಾಗ ರಾಮರಾಜ್ಯವಾಗುವುದು ಖಚಿತ ಎಂದರು.
ಮಂಡಲ ಬಿಜೆಪಿ ಅಧ್ಯಕ್ಷ ಸುದರ್ಶನ್, ಮಾಜಿ ಪಾಲಿಕೆ ಸದಸ್ಯೆ ದೀಪಾ ನಾಗೇಶ್, ಹಿಂದೂ ಸಾಂಸ್ಕೃತಿಕ ಸಂಘದ ಬಿ.ಎನ್.ಶ್ರೀನಿವಾಸ್, ಕಾಮಧೇನು ಸುರೇಶ್, ಸತೀಶ್ ಭಗವಾನ್, ಮುನ್ನಭಾಯಿ, ಮದನ್, ಕೈಲಾಶ್ ಜೈನ್, ವಿಶ್ವನಾಥ್,ಟಿ.ಎನ್.ರಮೇಶ್ ಗಾಂಧಿ, ಅಮಿತ್ ಜೈನ್, ಕಿರಣ್, ಮೋಹನ್ ರಾಜ್, ವೆಂಕಟೇಶ್, ಕೃಷ್ಣಮೂರ್ತಿ, ಮಂಜುನಾಥ್ ಮೊದಲಾದವರು ಹಾಜರಿದ್ದರು.








