ಬೆಂಗಳೂರು: ಅಭಿಮಾನಿಗಳು, ಸ್ನೇಹಿತರ ಬಳಗದ ವತಿಯಿಂದ ಗಣೇಶ ಮಂದಿರ ವಾರ್ಡ್ ಬಿ.ಜೆ.ಪಿ. ಮುಖಂಡ ಉಮೇಶ್ ಕಬ್ಬಾಳ್ ಹುಟ್ಟುಹಬ್ಬದ ಆಚರಿಸಲಾಯಿತು. ಉಮೇಶ್ (ಕಬ್ಬಾಳ್) ಅವರ ಹುಟ್ಟುಹಬ್ಬವನ್ನು ಗಣೇಶ ಮಂದಿರ ವಾರ್ಡಿನ ಹಿರಿಯ ನಾಗರಿಕರು ಮತ್ತುಅಭಿಮಾನಿಗಳು, ಸ್ನೇಹಿತರ ಬಳಗ ವತಿಯಿಂದ ಬೃಂದಾವನ ಉದ್ಯಾನವನ ಎಸ್.ಎಲ್.ವಿ.ಹೋಟೆಲ್ ಮುಂಭಾಗದಲ್ಲಿ ರಕ್ತದಾನ ಮತ್ತು ನೇತ್ರದಾನ ಶಿಬಿರ, ಸಸಿ ನೆಡುವ ಕಾರ್ಯಕ್ರಮ ಮತ್ತು ಸಸಿ ವಿತರಣೆ, ರೆಫರಲ್ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ, ಅನಾಥಶ್ರಮದಲ್ಲಿ ಸಿಹಿ ವಿತರಣೆ, ಅಂಗನವಾಡಿ ಮಕ್ಕಳಿಗೆ ಸಿಹಿ ವಿತರಣೆ ಹಮ್ಮಿಕೊಳ್ಳಲಾಯಿತು.
ಉಮೇಶ್ ಕಬ್ಬಾಳ್, ಬಿ.ಬಿ.ಎಂ.ಪಿ. ಮಾಜಿ ಸದಸ್ಯೆ ಲಕ್ಷ್ಮೀ ಉಮೇಶ್ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮ ಚಾಲನೆ ನೀಡಿದರು. ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಾರ್ಡಿನ ನಿವಾಸಿಗಳು ಮತ್ತು ಬಿ.ಜೆ.ಪಿ. ಮುಖಂಡರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಉಮೇಶ್ ಕಬ್ಬಾಳ್ ಮಾತನಾಡಿ, ಕಂದಾಯ ಸಚಿವ ಆರ್.ಅಶೋಕ್ ಅವರ ಮಾರ್ಗದರ್ಶನದಲ್ಲಿ ಗಣೇಶ ಮಂದಿರ ವಾರ್ಡ್ ಸಮಗ್ರ ಅಭಿವೃದ್ದಿ ಪಡಿಸಲಾಗಿದೆ. ಗಣೇಶ ಮಂದಿರ ವಾರ್ಡ್ ನಲ್ಲಿ ಅತ್ಯಂತ ಹೆಚ್ಚು ಪ್ರಜ್ಞಾವಂತ, ಬುದ್ದಿವಂತರು ಇರುವ ಕ್ಷೇತ್ರವಾಗಿದೆ ಎಂದರು.
ಸಾರ್ವಜನಿಕರು ಸಮಸ್ಯೆಗಳು ಇದ್ದಾಗ ವಾಟ್ಸಪ್ ಗ್ರೂಪ್ ಮಾಡಲಾಗಿದೆ. ಅಲ್ಲಿ ಸಮಸ್ಯೆ ಬಗ್ಗೆ ಸಂದೇಶ ಕಳುಹಿಸಿದರೆ ಸಾಕು ಸಮಸ್ಯೆ ನಿವಾರಣೆ ಕ್ರಮ ಕೈಗೊಳ್ಳಲಾಗುತ್ತಿದೆ. ಜನರು ಪಾಲಿಕೆ ಕಚೇರಿಗಳಿಗೆ ಅಲೆಯುವುದನ್ನ ತಪ್ಪಿಸಲಾಗಿದೆ. ವಾರ್ಡ್ ಅಭಿವೃದ್ದಿ ಸಲಹೆ ನೀಡುತ್ತಾ, ಸದಾ ಪೋತ್ಸಾಹ ನೀಡುತ್ತಿರುವ ವಾರ್ಡ್ ನ ಸಮಸ್ತ ನಾಗರಿಕರಿಗೆ ಧನ್ಯವಾದಗಳು ಎಂದರು.




