ಸಾಧಕರಿಗೆ ಮುಂದಿನ ವರ್ಷದಿಂದ ಶ್ರೀ ಶಂಕರಾಚಾರ್ಯ ಪ್ರಶಸ್ತಿ
ಯುವ ಸಮುದಾಯಕ್ಕೆ ಅರಿವು ಮೂಡಿಸಲು ರಾಜ್ಯ ಸರ್ಕಾರ 33 ಕಡೆ ಜಯಂತಿ ಅಚರಿಸಲಾಗುತ್ತಿದೆ: ಶಿವರಾಜ್ ಎಸ್.ತಂಗಡಗಿ
ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಆದಿ ಶಂಕರಾಚಾರ್ಯ ಜಯಂತಿ ಆಚರಣೆ ನಡೆಯಿತು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಶ್ರೀ ಶಂಕರಾಚಾರ್ಯ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆಯಲ್ಲಿ ಬಿಬಿಎಂಪಿ ಕೇಂದ್ರ ಕಛೇರಿಯಿಂದ ಸಾಗಿ ರವೀಂದ್ರ ಕಲಾಕ್ಷೇತ್ರ ತಲುಪಿತು.
ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಸಚಿವ ಶಿವರಾಜ್ ತಂಗಡಗಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್, ಧಾರ್ಮಿಕ ಪರಿಷತ್ ಸದಸ್ಯ ಡಾ.ಬಿ.ಎಸ್.ದ್ವಾರಕನಾಥ್, ಶೃಂಗೇರಿ ಮಾಜಿ ಆಡಳಿತಾಧಿಕಾರಿ ವಿ.ಆರ್.ಗೌರಿಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಗಾಯಿತ್ರಿ ಪುಷ್ಪನಮನ ಸಲ್ಲಿಸಿ ಜಯಂತಿ ಅಚರಣೆಗೆ ಚಾಲನೆ ನೀಡಿದರು.
ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಆದಿ ಶಂಕರಾಚಾರ್ಯರವರದು ಎತ್ತರದ ವ್ಯಕ್ತಿತ್ವ. ಅವರ ಸಾಧನೆ, ಅವರು ದೇಶಕ್ಕೆ, ಸಂಸ್ಕೃತಿಗೆ ಕೊಡುಗೆ ನೀಡಿದ್ದಾರೆ. ಭಾರತದ ದೇಶದಲ್ಲಿ ಅಂದಿನ ಪರಿಸ್ಥಿತಿಯಲ್ಲಿ ಕೇರಳದಲ್ಲಿ ಹುಟ್ಟಿ ಕಾಶ್ಮೀರದವರಗೆ ಕಾಲ್ನಡಿಗೆಯಲ್ಲಿ ಸುತ್ತಿದ್ದರು ಎಂದರೆ ಅಸಾಧ್ಯವಾದ ಮಾತು ಎಂದರು.
8ನೇ ವರ್ಷಕ್ಕೆ ಉಪನಯನ ನಂತರ 38 ವರ್ಷದಲ್ಲಿ ಧರ್ಮ ಜಾಗೃತಿ ಸಾರಿದರು, ಮಠಗಳನ್ನು ಸ್ಥಾಪಿಸಿದರು. ಧರ್ಮಗ್ರಂಥ ಮತ್ತು ಮಠಗಳನ್ನು ಸಮಾಜದ ಅಭಿವೃದ್ಧಿಗೆ ಸಾರವಾಗಿದೆ. ಅತ್ಯಂತ ಪವಿತ್ರ ಸ್ಥಳಗಳು ಶೃಂಗೇರಿ ಮಠಗಳಾಗಿವೆ. ಸಮಾಜದ ನಿರ್ಮಾಣಕ್ಕೆ ಶೃಂಗೇರಿ ಮಠದ ಕೊಡುಗೆ ನೀಡಿದ್ದಾರೆ. ಶಂಕರಚಾರ್ಯ ಎಂದರೆ ಡೊಡ್ಡ ಶಕ್ತಿ, ಜ್ಞಾನ ಚಿಂತಕ ಎಂದು ಅರ್ಥ ಎಂದರು.
ನಮ್ಮ ದೇಶದಲ್ಲಿ ಮಹಾನ್ ವ್ಯಕ್ತಿಗಳು ಮಾಡಿದ ಸಾಧನೆಗಳು ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗಿದೆ. ಶ್ರೀ ಶಂಕರಾಚಾರ್ಯ ನೆನಪಿನಲ್ಲಿ ಪ್ರಶಸ್ತಿ ಸ್ಥಾಪನೆ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸಚಿವ ಶಿವರಾಜ್ ಎಸ್. ತಂಗಡಗಿ ಮಾತನಾಡಿ, ನಾಡಿನ ಸಮಸ್ತ ಜನರಿಗೆ ಆದಿ ಶಂಕರಾಚಾರ್ಯ ಜಯಂತಿ ಶುಭಾಶಯಗಳು, ಸರ್ಕಾರ ವತಿಯಿಂದ 33 ಕಡೆ ಜಯಂತಿಗಳನ್ನು ಅಚರಿಸಲಾಗುತ್ತಿದೆ. ದೇಶಕ್ಕೆ ಕೊಡುಗೆ ನೀಡಿದವರ ಸ್ಮರಣೆ ಮಾಡಲು ಜಯಂತಿ ಆಚರಿಸಲಾಗುತ್ತಿದೆ ಎಂದರು.
ಶಂಕರಾಚಾರ್ಯರು ಹಿಂದೂ ಧರ್ಮ ಪುನರುಜ್ಜೀವನಗೊಳಿಸಿದರು. ದೇಶದ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಯುವ ಪೀಳಿಗೆಗೆ ಅರಿವು ಮೂಡಿಸಲು ಜಯಂತಿ ಅಚರಿಸಲಾಗುತ್ತಿದೆ. ಒಳ್ಳೆಯ ಸಂದೇಶಗಳನ್ನು ಯುವಕರಿಗೆ ತಲುಪಿಸುವ ಕಾರ್ಯಗೊಳಿಸಲಾಗುತ್ತಿದೆ ಎಂದರು.
ಮಹನೀಯರುಗಳು ಧರ್ಮ ಉಳಿಸಲು, ದೇಶದ ಅಭಿವೃದ್ಧಿಗಾಗಿ ಚಿಂತನೆ ಮಾಡಿದರು. ಅಂಬೇಡ್ಕರ್ ನೀಡಿದ ಸಂವಿಧಾನದಿಂದ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ. ವಿಶ್ವಕ್ಕೆ ಉತ್ತಮ ಸಂದೇಶವನ್ನು ಶಂಕರಾಚಾರ್ಯ ನೀಡಿದ್ದಾರೆ ಎಂದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯ ಸಹ ಪ್ರಾಧ್ಯಪಕ ಟಿ.ಎನ್.ವಾಸುದೇವಮೂರ್ತಿ ಅವರಿಂದ ಉಪನ್ಯಾಸ ಏರ್ಪಡಿಸಲಾಗಿತ್ತು.
ವಿಪ್ರ ಮುಖಂಡರುಗಳಾದ ಆರ್.ಲಕ್ಷ್ಮಿಕಾಂತ್, ದತ್ತಾತ್ರಿ, ಕೆ.ವಿ.ರಾಮಚಂದ್ರ, ಪಿ.ಎಸ್.ಪ್ರಕಾಶ್, ಎಸ್.ಎಸ್.ಪ್ರಸಾದ್, ದಿಲೀಪ್,ಸತೀಶ್ ಉರಾಳ್ ಜೆ.ಹೆಚ್.ಅನಿಲ್ ಕುಮಾರ್, ರವಿಶಂಕರ್, ಮೋಹನ್, ರಥಯಾತ್ರೆ ಸುರೇಶ್ ಮೊದಲಾದವರು ಹಾಜರಿದ್ದರು.




