ಶ್ರೀಲಂಕಾದ ಮೊದಲ ಟೆಸ್ಟ್ ನಾಯಕ ಬಂಡುಲ ವರ್ನಾಪುರ ನಿಧನ

5 years ago

ಕೊಲಂಬೊ: ಶ್ರೀಲಂಕಾದ ಮೊದಲ ಟೆಸ್ಟ್ ನಾಯಕ ಬಂಡುಲ ವರ್ನಾಪುರ(69) ನಿಧನರಾದರು. ಬಂಡುಲ ವರ್ನಾಪುರ ನಿಧನಕ್ಕೆ ವಿಶ್ವ ಕ್ರಿಕೆಟ್ ಆಟಗಾರರು​ ಸಂತಾಪದ ಸೂಚಿಸಿದ್ದಾರೆ.

ಶ್ರೀಲಂಕಾದ ಮಾಜಿ ಓಪನರ್ ಸನತ್ ಜಯಸೂರ್ಯ, ಇದು ತುಂಬಾ ದುಃಖದ ದಿನ. ಶ್ರೀಲಂಕಾದ ಮೊದಲ ಟೆಸ್ಟ್ ನಾಯಕ ಇಂದು ತಮ್ಮ ಕೊನೆಯ ಇನ್ನಿಂಗ್ಸ್ ಆಡಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದಿದ್ದಾರೆ.

ಬಂಡುಲ ಶ್ರೀಲಂಕಾ ಪರ ಒಟ್ಟು 16 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 4 ಟೆಸ್ಟ್‌ಗಳು ಮತ್ತು 12 ಏಕದಿನ ಪಂದ್ಯಗಳು ಸೇರಿವೆ. ಓಪನಿಂಗ್ ಬ್ಯಾಟ್ಸ್​ಮನ್ ಆಗಿದ್ದ ಅವರು, ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿದ್ದರು.

ಮೊದಲ ಅಂತರಾಷ್ಟ್ರೀಯ ಪಂದ್ಯವನ್ನು 1975ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಓಲ್ಡ್ ಟ್ರಾಫೋರ್ಡ್‌ನಲ್ಲಿ ಆಡಿದ್ದರು. ಮುಂದಿನ ಪಂದ್ಯದಲ್ಲಿ, ಆಸ್ಟ್ರೇಲಿಯಾದ ಬೌಲಿಂಗ್ ಎದುರಿಸಿ 31 ಎಸೆತಗಳಲ್ಲಿ 39 ರನ್ ಗಳಿಸಿದ್ದರು.

ಶ್ರೀಲಂಕಾ ತಂಡದ ನಾಯಕತ್ವ ವಹಿಸಿ 1979ರ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ  ಜಯಗಳಿಸಿದ್ದರು. 1981ರಲ್ಲಿ ಪಾಕ್ ವಿರುದ್ಧದ ಏಕದಿನ ಕ್ರಿಕೆಟ್​ನಲ್ಲಿ ಬಂಡುಲ ವೈಯಕ್ತಿಕ (77) ರನ್ ಅತ್ಯಧಿಕ ಸ್ಕೋರ್ ಗಳಿಸಿದ್ದರು.

Leave a Reply